Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

COVID ಟೆಸ್ಟ್‌ ವೇಳೆ ರಿಷಭ್ ತರಲೆ ಪ್ರಶ್ನೆಗೆ ರೋಹಿತ್ ಪ್ರತಿಕ್ರಿಯೆ ಫುಲ್ ವೈರಲ್: ವಿಡಿಯೋ

Rohit Sharma gives it back to Rishabh Pant, who teases him while taking COVID-19 test
Photo Credit: twitter

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯಕ್ಕೆ ಭಾರತ ತಂಡ ಸಜ್ಜಾಗುತ್ತಿದೆ. ಆದರೆ ಇದಕ್ಕೆ ಮುನ್ನ ನಡೆದ ಕೊರೊನಾ ಪರೀಕ್ಷೆಯ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರನ್ನು ಸಹ ಆಟಗಾರ ರಿಷಭ್ ಪಂತ್ ತರಲೆ ಪ್ರಶ್ನೆಯ ಮೂಲಕ ಕಾಲೆಳೆಯುವ ಪ್ರಯತ್ನ ಮಾಡಿದರು. ಅದಕ್ಕೆ ರೋಹಿತ್ ನೀಡಿದ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೊರೊನಾ ನಿಯಮದ ಪ್ರಕಾರ ಆಟಗಾರರು ಬಯೋ ಬಬಲ್‌ನಲ್ಲಿದ್ದು ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ಪ್ರತಿ ಬಾರಿಯೂ ಆಟಗಾರರು ಕೊರೊನಾ ವೈರಸ್ ಪರೀಕ್ಷೆಗೆ ಒಳಗಾಗಬೇಕಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಇದನ್ನು ನಡೆಸಲಾಗುತ್ತದೆ. ಅದರಲ್ಲೂ ಈಗ ದೇಶದಲ್ಲಿ ಮತ್ತೊಂದು ಅಲೆ ಕಾಣಿಸಿಕೊಂಡಿದ್ದು ಕೊರೊನಾ ವೈರಸ್‌ಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಎರಡನೇ ಪಂದ್ಯಕ್ಕೆ ಮುನ್ನ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಮತ್ತೊಂದು ಸುತ್ತಿನ COVID-19 ಪರೀಕ್ಷೆಗೆ ಪುಣೆಯ ತಂಡದ ಹೋಟೆಲ್‌ನಲ್ಲಿ ಒಳಗಾದರು. ತಂಡದ ಉಪ ನಾಯಕ ರೋಹಿತ್ ಶರ್ಮಾ ಈ ಪರೀಕ್ಷೆಗೆ ಒಳಗಾಗುತ್ತಿರುವ ವೀಡಿಯೋವನ್ನು ಯುವ ವಿಕೆಟ್ ಕೀಪರ್ ರಿಷಭ್ ಪಂತ್ ವಿಡಿಯೋ ಮಾಡಿದ್ದರು. ಆದರೆ ಈ ವಿಡಿಯೋದಲ್ಲಿ ರಿಷಭ್ ಪಂತ್ ಕೇಳಿದ ಪ್ರಶ್ನೆ ಮತ್ತು ರೋಹಿತ್ ಅದಕ್ಕೆ ನೀಡಿದ ಪ್ರತಿಕ್ರಿಯೆ ತಮಾಷೆಯಾಗಿದೆ.

COVID-19 ಪರೀಕ್ಷೆಗಾಗಿ ಮೂಗಿನ ದ್ರವದ ಸ್ಯಾಂಪಲ್ ನೀಡಿ ಬರುತ್ತಿದ್ದಂತೆಯೇ ಆ ದೃಶ್ಯಗಳನ್ನು ವಿಡಿಯೋ ಮಾಡುತ್ತಿದ್ದ ರಿಷಭ್ ಪಂತ್ "ಕೈಸೇ ಹೋ ಭಯ್ಯಾ?" (ಹೇಗಿದ್ದೀರಿ ಅಣ್ಣಾ?) ಎಂದು ಕೀಟಲೆಯ ಪ್ರಶ್ನೆ ಮಾಡಿ ರೋಹಿತ್ ಶರ್ಮಾ ಅವರ ಕಾಲೆಳೆಯುವ ಪ್ರಯತ್ನ ಮಾಡಿದರು.

ಆದರೆ ಈ ಸಂದರ್ಭದಲ್ಲಿ ಕಾಲೆಳೆಯಲು ರಿಷಬ್ ಪಂತ್ ಹೀಗೆ ಪ್ರಶ್ನಿಸುತ್ತಿದ್ದಾರೆ ಎಂದು ಅರಿತ ರೋಹಿತ್ ಬಾಯಲ್ಲಿ ಉತ್ತರಿಸದೆ ಕೈಯ್ಯನ್ನು ಮೇಲಕ್ಕೆತ್ತಿ ಮಧ್ಯದ ಬೆರಳು ತೋರಿಸುವ ಮೂಲಕ ಪ್ರತಿಕ್ರಿಯೆ ನೀಡಿ ರಿಷಭ್ ಬಾಯಿ ಮುಚ್ಚಿಸಿದರು. ಈ ವಿಡಿಯೋವನ್ನು ರಿಷಭ್ ಪಂತ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದು ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋವನ್ನು ಅಭಿಮಾನಿಗಳು ಕೂಡ ನಾನಾ ರೀತಿಯಲ್ಲಿ ತಮಾಷೆಯಾಗಿ ಹಂಚಿಕೊಳ್ಳುತ್ತಿದ್ದಾರೆ.

Story first published: Thursday, March 25, 2021, 14:28 [IST]
Other articles published on Mar 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+