Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: MI vs GT ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಹಾಗೂ ರೋಹಿತ್‌ ಶರ್ಮಾ ಫ್ಯಾನ್ಸ್‌ ನಡುವೆ ಡಿಶುಂ ಡಿಶುಂ

ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತಂಡದ ಸ್ಟಾರ್ ಆಟಗಾರರ ನಡುವಿನ ಮುನಿಸು ಮೈದಾನದಲ್ಲಿ ಕಾಣಿಸಿಕೊಂಡಿದೆ. ಮುಂಬೈ ಹಾಲಿ ಕ್ಯಾಪ್ಟನ್‌, ಮಾಜಿ ಕ್ಯಾಪ್ಟನ್‌ರನ್ನು ನಡೆಸಿಕೊಂಡ ರೀತಿಯ ಬಗ್ಗೆಯೂ ಅಸಮಾಧಾನ ಮೂಡಿದೆ. ಮೈದಾನದಲ್ಲಿ ಆಟಗಾರರ ಮುನಿಸು ಕಾಣಿಸಿಕೊಂಡರೆ, ಪ್ರೇಕ್ಷಕರ ಗ್ಯಾಲರಿಯಲ್ಲಿ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಫ್ಯಾನ್ಸ್ ನಡುವೆ ಫೈಟ್‌ ನಡೆದಿದೆ.

ಭಾನುವಾರ ಪ್ರಸಕ್ತ ಐಪಿಎಲ್‌ನ ಎರಡನೇ ಪಂದ್ಯ ಅಹಮದಾಬಾದ್‌ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮುಂದಾಳತ್ವದ ಮುಂಬೈ ಇಂಡಿಯನ್ಸ್‌ ಸೋಲು ಕಂಡಿತು. ಯುವ ನಾಯಕ ಶುಭ್‌ಮನ್‌ ಗಿಲ್‌ ತಮ್ಮಲ್ಲಿರುವ ಸಾಮರ್ಥ್ಯವನ್ನು ತೋರಿಸಿದರು. ಅಲ್ಲದೆ ತಮ್ಮಲ್ಲೂ ನಾಯಕತ್ವದ ಗುಣಗಳಿವೆ ಎಂದು ಸಾರಿದರು. ಮೈದಾನದಲ್ಲಿ ಮುಂಬೈ, ಗುಜರಾತ್‌ ಕಾದಾಟ ಹೀಟ್‌ ಪಡೆಯುತ್ತಿದ್ದಂತೆ ಅಭಿಮಾನಿಗಳಲ್ಲೂ ಇದರ ಬಿಸಿ ತಟ್ಟಿದೆ.

Rohit Sharma-Hardik Pandya Fans Fight During IPL 2024 Match

ಪಂದ್ಯದ ವೇಳೆ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಚರ್ಚೆಯ ಕೇಂದ್ರಬಿಂದುವಾಗಿತ್ತು. ಮುಂಬೈ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಲು ರೋಹಿತ್ ಮೈದಾನಕ್ಕೆ ಬಂದಿದ್ದರಿಂದ ಎಲ್ಲರ ಕಣ್ಣು ಇವರಿಬ್ಬರ ಮೇಲಿತ್ತು. ಪಂದ್ಯದ ವೇಳೆ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅಭಿಮಾನಿಗಳು ಪರಸ್ಪರ ಹೊಡೆದಾಡಿಕೊಂಡರು.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಸದ್ಯ ವಿಡಿಯೋ ಒಂದು ಬಹು ವೇಗವಾಗಿ ವೈರಲ್ ಆಗುತ್ತಿದೆ. ಈ 8 ಸೆಕೆಂಡ್ ವೀಡಿಯೋದಲ್ಲಿ ಉಭಯ ಆಟಗಾರರ ಅಭಿಮಾನಿಗಳು ಪರಸ್ಪರ ತಮಾಷೆ ಹೊಡೆದಾಡಿಕೊಂಡಂತೆ ಕಾಣುತ್ತಿದೆ. ಅಭಿಮಾನಿಗಳು ಒಬ್ಬರಿಗೊಬ್ಬರು ಕೆಟ್ಟದಾಗಿ ಹೊಡೆದರು ಮತ್ತು ಅವರನ್ನು ಕುರ್ಚಿಯಿಂದ ಎಬ್ಬಿಸಿ ಹೊಡೆದರು ಎಂದು ಗೊಚರವಾಗುತ್ತದೆ. ಈ ವೇಳೆ ಪಂದ್ಯ ವೀಕ್ಷಿಸಲು ಬಂದಿದ್ದ ಇತರ ಪ್ರೇಕ್ಷಕರು ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಮೈದಾನದಲ್ಲೂ ಮುನಿಸು

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ತಲೆಗೆ ಏರಿದಂತೆ ಕಾಣುತ್ತಿದೆ. ಅವರು ಯಾರ ಮಾತನ್ನು ಕೇಳುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ತಂಡದ ಹಿರಿಯರಾದ ಜಸ್ಪ್ರಿತ್ ಬುಮ್ರಾ ಹಾಗೂ ರೋಹಿತ್ ಶರ್ಮಾ ಅವರ ಅನುಭವವನ್ನು ಲೆಕ್ಕಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಅಲ್ಲದೆ ಫೀಲ್ಡ್‌ ಮಾಡುವ ವೇಳೆ ರೋಹಿತ್ ಶರ್ಮಾ ಅವರನ್ನು ಹಾರ್ದಿಕ್ ಪಾಂಡ್ಯ ಮೈದಾನದ ತುಂಬೆಲ್ಲಾ ತಿರುಗಾಡಿಸಿದರು ಎಂದು ಅಭಿಮಾನಿಗಳು ಕೆಂಡ ಕಾರುತ್ತಿದ್ದಾರೆ.

Story first published: Monday, March 25, 2024, 15:00 [IST]
Other articles published on Mar 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+