'ರಾಜೀವ್ ಗಾಂಧಿ ಖೇಲ್ ರತ್ನ'ಕ್ಕೆ ರೋಹಿತ್ ಶರ್ಮಾ ಹೆಸರು ಶಿಫಾರಸು

ನವದೆಹಲಿ, ಆಗಸ್ಟ್ 18: ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹೆಸರು ಭಾರತದ ಅತ್ಯುನ್ನತ ಪುರಸ್ಕಾರ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ನಾಮನಿರ್ದೇಶನಗೊಂಡಿದೆ. ರೋಹಿತ್ ಜೊತೆಗೆ ರಸ್ಲರ್ ವಿನೇಶ್ ಫೋಗಟ್, ಟೇಬಲ್ ಟೆನಿಸ್ ಸ್ಟಾರ್ ಮಣಿಕಾ ಬಾತ್ರಾ ಮತ್ತು 2016ರ ಪ್ಯಾರಾಲಂಪಿಕ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಾಂಗವೇಲು ಹೆಸರುಗಳೂ ಶಿಫಾರಸುಗೊಂಡಿವೆ.
ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ ಮತ್ತು ಇನ್ನಿತರ ರಾಷ್ಟ್ರೀಯ ಪ್ರಶಸ್ತಿಗಳ ಸಂಬಂಧ ಆಯ್ಕೆ ಸಮಿತಿ ಮಂಗಳವಾರ (ಆಗಸ್ಟ್ 18) ಸಭೆ ನಡೆಸಿತು. ಆ ಬಳಿಕ ಈ ನಾಲ್ವರನ್ನು ಖೇಲ್ ರತ್ನಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಯಿತು.
ಶಿಫಾರಸು ಮಾಡಲಾಗಿರುವ ಈ ಕ್ರೀಡಾಪಟುಗಳಲ್ಲಿ ರೋಹಿತ್ ಶರ್ಮಾಗೆ ಪ್ರಶಸ್ತಿ ಲಭಿಸಿದರೆ, ಖೇಲ್ ರತ್ನ ಗೆದ್ದ ನಾಲ್ಕನೇ ಕ್ರಿಕೆಟರ್ ಆಗಿ ಶರ್ಮಾ ಗುರುತಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಈ ವರ್ಷ ಮೇನಲ್ಲಿ ಬಲಗೈ ಬ್ಯಾಟ್ಸ್‌ಮನ್ ರೋಹಿತ್ ಅವರನ್ನು ಪ್ರತಿಷ್ಠಿತ ಪ್ರಶಸ್ತಿಗಾಗಿ ಬಿಸಿಸಿಐ ನಾಮನಿರ್ದೇಶನ ಮಾಡಿತ್ತು. 2019ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರಿಂದ ಶರ್ಮಾ ಹೆಸರನ್ನು ಖೇಲ್ ರತ್ನಕ್ಕೆ ಶಿಫಾರಸು ಮಾಡಲಾಗಿತ್ತು. ಕಳೆದ ವರ್ಷ ಏಕದಿನದಲ್ಲಿ 1,490 ರನ್, 7 ಶತಕಗಳನ್ನು ಬಾರಿಸಿದ್ದ ರೋಹಿತ್, ಅತ್ಯಧಿಕ ರನ್ ಗಳಿಸಿದ ವರ್ಷದ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications