ರಿಯಲ್ ಮ್ಯಾಡ್ರಿಡ್ ಅಧ್ಯಕ್ಷಗೆ ರೋಹಿತ್ ಶರ್ಮಾ ಅವರಲ್ಲೊಂದು ಪ್ರಶ್ನೆಯಿದೆ!

ನವದೆಹಲಿ, ಅಕ್ಟೋಬರ್ 30: ಪೋರ್ಚುಗಲ್ ಸ್ಟಾರ್ ಫುಟ್ಬಾಲರ್ ಕ್ರಿಸ್ಚಿಯಾನೊ ರೊನಾಲ್ಡೋ, ರಿಯಲ್ ಮ್ಯಾಟ್ರಿಡ್ ತೊರೆದು ಯುವೆಂಟಸ್ ಸೇರಿಕೊಂಡಿದ್ದೇಕೆ ಎಂಬುದನ್ನು ಬಾಯ್ಬಿಟ್ಟಿದ್ದಾರೆ. ಆಗಿನಿಂದಲೂ ವಿಶ್ವದಲ್ಲಿರುವ ಎಲ್ಲಾ ಫುಟ್ಬಾಲ್ ಅಭಿಮಾನಿಗಳ ಪ್ರಶ್ನೆಯೊಂದೆ; ಯಾಕ್ಹೀಗೆ ಮಾಡಿದ್ರಿ ಫ್ಲಾರೆಂಟಿನೊ ಪೆರೆಜ್?
ರೋಹಿತ್ ಶರ್ಮಾ ಕೂಡ ಈ ಬಗ್ಗೆ ಟ್ವಿಟರ್ ನಲ್ಲಿ ರಿಯಾಕ್ಟ್ ಮಾಡಿದ್ದಾರೆ. ರಿಯಲ್ ಮ್ಯಾಡ್ರಿಡ್ ಅಧ್ಯಕ್ಷ ಪೆರೆಜ್ ಕುರಿತು ರೋಹಿತ್ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ತಾನೇಕೆ ಮ್ಯಾಡ್ರಿಡ್ ತೊರೆದು ಇಟಲಿಯ ಯುವೆಂಟಸ್ ತಂಡ ಸೇರಿಕೊಂಡೆ ಎಂಬುದಕ್ಕೆ ಕಾರಣ ತಿಳಿಸುತ್ತ ರೊನಾಲ್ಡೋ, 'ನಾನು ರಿಯಲ್ ಮ್ಯಾಡ್ರಿಡ್ ತೊರೆದಿದ್ದಕ್ಕೆ ಮ್ಯಾಡ್ರಿಡ್ ಅಧ್ಯಕ್ಷ ಫ್ಲಾರೆಂಟಿನೊಗೆ ಕಾರಣ. ನಾನು ತಂಡ ತೊರೆಯೋದು ಅನಿವಾರ್ಯ ಎಂಬಂತೆ ಅವರು (ಫ್ಲಾರೆಂಟಿನೊ) ನಡೆದುಕೊಂಡರು' ಎಂದಿದ್ದರು.
ರೊನಾಲ್ಡೋ ರಿಯಲ್ ಮ್ಯಾಟ್ರಿಡ್ ತೊರೆದಿದ್ದರಿಂದ ಭಾನುವಾರ (ಅಕ್ಟೋಬರ್ 28) ನಡೆದಿದ್ದ ಎಲ್ ಕ್ಲಾಸಿಕೋ (ರಿಯಲ್ ಮ್ಯಾಡ್ರಿಡ್-ಬಾರ್ಸಿಲೋನಾ ಮುಖಾಮುಖಿ) ಪಂದ್ಯದಲ್ಲಿ ರೊನಾಲ್ಡೋ ಮತ್ತು ಲಿಯೋನೆಲ್ ಮೆಸ್ಸಿ ಆಟವನ್ನು ಅಭಿಮಾನಿಗಳು ನೋಡಲಾಗಿರಲಿಲ್ಲ. ಅತ್ತ ಮೆಸ್ಸಿ ಕೂಡ ಗಾಯದಿಂದಾಗಿ ಕುತೂಹಲಕಾರಿ ಪಂದ್ಯದಲ್ಲಿ ಬಾರ್ಸಿಲೋನಾ ತಂಡದಿಂದ ದೂರ ಉಳಿದಿದ್ದರು. ಇದರಲ್ಲಿ ಬಾರ್ಸಿಲೋನಾ 5-1ರ ಜಯ ಗಳಿಸಿತ್ತು.
- Cristiano Ronaldo. 👀 pic.twitter.com/oY9isCsERz — Football Tweet (@Football__Tweet) October 30, 2018 '>
ನಿಲ್ಲುವ ಅನಿವಾರ್ಯತೆ ಇಲ್ಲ
ರಿಯಲ್ ತೊರೆಯಲು ಕಾರಣ ವಿವರಿಸುತ್ತ ರೊನಾಲ್ಡೋ, 'ತಂಡದಲ್ಲಿ ಇನ್ನೂ ನಿಲ್ಲುವ ಅನಿವಾರ್ಯತೆ ಇಲ್ಲ ಎಂಬಂತೆ ತಂಡದ ಅಧ್ಯಕ್ಷ ನನ್ನತ್ತ ನೋಡಿದರು. ಇದರರ್ಥ ಏನೆಂಬುದು ನಿಮಗೆ ಗೊತ್ತಾಗಬಹುದು. ಇದೇ ನಾನು ತಂಡ ತೊರೆಯುವ ನೆಲೆಯಲ್ಲಿ ಯೋಚಿಸುವಂತೆ ಮಾಡಿತು' ಎಂದು ಹೇಳಿದ್ದರು.
ನೀವೇನು ಮಾಡಿದಿರಿ?
ಫುಟ್ಬಾಲ್ ನ ಬಹುದೊಡ್ಡ ಅಭಿಮಾನಿ ಆಗಿರುವ ಭಾರತ ಕ್ರಿಕೆಟ್ ತಂಡದ ಉಪ ನಾಯಕ, ಇತ್ತೀಚೆಗೆ ತನ್ನ 21ನೇ ಏಕದಿನ ಶತಕ ಪೂರೈಸಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೂಡ ಈ ಬಗ್ಗೆ ಟ್ವೀಟ್ ಮಾಡಿ, 'ನೀವೇನು ಮಾಡಿದಿರಿ ಮಿ. ಪೆರೆಜ್ @ರಿಯಲ್ ಮ್ಯಾಡ್ರಿಡ್?' ಎಂದು ಪ್ರಶ್ನಿಸಿದ್ದಾರೆ.
ಥ್ಯಾಂಕ್ಯೂ ವಿರಾಟ್
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕ್ರಿಸ್ಚಿಯಾನೊ ರೊನಾಲ್ಟೋ ನಡುವೆಯೂ ಟ್ವೀಟ್ ಸಂವಹನವಾಗಿದ್ದೂ ಇಲ್ಲಿ ಉಲ್ಲೇಖಾರ್ಹ. ಈ ಹಿಂದೆ ಕೊಹ್ಲಿಗೆ ರೊನಾಲ್ಡೋ ಟ್ವೀಟ್ ಮಾಡಿದ್ದರು. ಇದರಲ್ಲಿ 'ನಿಮ್ಮ ಮಾತುಗಳಿಗೆ ಥ್ಯಾಂಕ್ಯೂ ವಿರಾಟ್. ನಿಮ್ಮಂತ ಅದ್ಭುತ ಆಟಗಾರರಿರುವ ಹರ್ಬಲ್ ಲೈಫ್ ತಂಡದಲ್ಲಿ ಇರುವುದಕ್ಕೆ ನನಗೆ ಅತೀವ ಖುಷಿಯಾಗಿದೆ' ಎಂದಿದ್ದರು.
ಅದ್ಭುತ ದಂತಕತೆ
ಅಂದ್ಹಾಗೆ ರೊನಾಲ್ಡೋ ಈ ಟ್ವೀಟ್ ಮಾಡಿದ್ದು 2014ರ ಮಾರ್ಚ್ ತಿಂಗಳಲ್ಲಿ. ಕೊಹ್ಲಿ ಕೂಡ ರೀ ಟ್ವೀಟ್ ಮಾಡಿ ರೊನಾಲ್ಡೋ ಅವರನ್ನು ಕೊಂಡಾಡಿದ್ದರು. ಅಂದು ಕೊಹ್ಲಿ ಟ್ವೀಟ್ ನಲ್ಲಿ 'ನಿಮ್ಮ ಟ್ವೀಟ್‌ಗಾಗಿ ಧನ್ಯವಾದಗಳು ರೊನಾಲ್ಡೋ. ನೀವೊಬ್ಬರು ಅದ್ಭುತ ದಂತಕತೆ' ಎಂದು ಬರೆದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications