Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಈ ಭಾರತೀಯನ ಬಿಟ್ಟು ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ಗೆ ಆಸೀಸ್ ಸವಾಲೆನಿಸಲಿದೆ'

Rohit Sharma has the ability to excel in Australian conditions: Mike Hussey

ಸಿಡ್ನಿ: ಈ ವರ್ಷದ ಕೊನೆಯಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೊರಡಲಿದೆ. ಈ ವರ್ಷದಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳುತ್ತಿರುವ ಹೆಚ್ಚು ಕುತೂಹಲಕಾರಿ ಪ್ರವಾಸ ಸರಣಿಯದು. ಎಲ್ಲಿ ಭಾರತ 3 ಟಿ20ಐ ಪಂದ್ಯಗಳು, 4 ಟೆಸ್ಟ್ ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳನ್ನಾಡುವುದರಲ್ಲಿದೆ. ಈ ಪ್ರವಾಸದ ವೇಳೆ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಹೆಚ್ಚು ಗಮನ ಸೆಳೆಯಲಿದೆ. ಕಳೆದ ವರ್ಷ ಇದೇ ಟೆಸ್ಟ್‌ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ ಚೊಚ್ಚಲ ಬಾರಿಗೆ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಬಾರಿ ಇದೇ ಕುತೂಹಲಕಾರಿ ಟೆಸ್ಟ್ ಸರಣಿ ಡಿಸೆಂಬರ್ 3ರಂದು ಬ್ರಿಸ್ಬೇನ್‌ನಲ್ಲಿ ಆರಂಭಗೊಳ್ಳಲಿದೆ.

ವಿಶ್ವ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಎರಡೂ ತಂಡಗಳು ಬಲಿಷ್ಠವಾಗಿರುವುದರಿಂದ ಇತ್ತಂಡಗಳ ಸರಣಿ ಸಾಕಷ್ಟು ಕುತೂಹಲ ಮೂಡಿಸಿದೆ. ಹಾಗೆ ನೋಡಿದರೆ ಈ ಬಾರಿ ಆಸ್ಟ್ರೇಲಿಯಾ ಪ್ರವಾಸ ಭಾರತದ ಪಾಲಿಗೆ ಹೆಚ್ಚು ಸವಾಲಿದ್ದಾಗಿರಲಿದೆ. ಕಾರಣ ಈ ಬಾರಿ ಕಾಂಗರೂ ಪಡೆಯಲ್ಲಿ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಕೂಡ ಇದ್ದಾರೆ. ಕಳೆದ ವರ್ಷ ಇಬ್ಬರೂ ನಿಷೇಧಕ್ಕೀಡಾಗಿದ್ದರು.

ಆಸ್ಟ್ರೇಲಿಯಾ ತಂಡ ಸಾಕಷ್ಟು ಬಲಿಷ್ಠವಾಗಿದೆ, ಅಲ್ಲಿ ಮಾರಕ ಬೌಲರ್‌ಗಳಿದ್ದಾರೆ. ಆದರೆ ಭಾರತೀಯ ಒಬ್ಬ ಬ್ಯಾಟ್ಸ್‌ಮನ್‌ಗೆ ಆಸ್ಟ್ರೇಲಿಯಾದಲ್ಲಿ ಸಾಧಿಸುವ ಸಾಮರ್ಥ್ಯ, ಮನೋಬಲವಿದೆ ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ, ಕೋಚ್ ಮೈಕಲ್ ಹಸ್ಸಿ ಹೇಳಿದ್ದಾರೆ.

ಆತ ಯಶಸ್ಸು ಗಳಿಸಬಲ್ಲ

ಆತ ಯಶಸ್ಸು ಗಳಿಸಬಲ್ಲ

'ಆಸ್ಟ್ರೇಲಿಯಾದ ಪರಿಸ್ಥಿತಿಗಳು ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ಗಳಿಗೆ ಪರೀಕ್ಷೆಯೆನಿಸಲಿದೆ. ಆದರೆ ರೋಹಿತ್ ಶರ್ಮಾ ಟಾಪ್ ಆರ್ಡರ್‌ನಲ್ಲಿ ಬಹಳಷ್ಟು ಏಕದಿನ ಪಂದ್ಯಗಳನ್ನಾಡಿರುವುದರಿಂದ ಅವರು ರೆಡ್‌ಬಾಲ್ ಕ್ರಿಕೆಟ್‌ನಲ್ಲೂ ಯಶಸ್ಸು ಗಳಿಸಬಲ್ಲರು. ಏಕದಿನದಲ್ಲಿನ ದಿಟ್ಟ ಆಟ ಅವರಿಗೆ ಇಲ್ಲೂ ಚೆನ್ನಾಗಿ ಆಡಲು ಆತ್ಮವಿಶ್ವಾಸ ನೀಡಲಿದೆ,' ಎಂದು ಮೈಕ್ ಹಸ್ಸಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

3 ಶತಕಗಳ ಬಾರಿಸಿದ್ದರು ರೋಹಿತ್

3 ಶತಕಗಳ ಬಾರಿಸಿದ್ದರು ರೋಹಿತ್

ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ವೇಳೆ ಟೆಸ್ಟ್‌ನಲ್ಲೂ ಆರಂಭಿಕರಾಗಿ ಬಡ್ತಿ ಪಡೆದಿದ್ದ ರೋಹಿತ್ ಶರ್ಮಾ 1 ದ್ವಿಶತಕವೂ ಸೇರಿ ಒಟ್ಟಿಗೆ 3 ಶತಕಗಳನ್ನು ಬಾರಿಸಿದ್ದರು. ಆದರೆ ಅನಂತರ ನಡೆದಿದ್ದ ನ್ಯೂಜಿಲೆಂಡ್ ಸರಣಿಯ ವೇಳೆ ಕಾಫ್ ಇಂಜುರಿಗೆ ಒಳಗಾಗಿದ್ದ ಹಿಟ್‌ಮ್ಯಾನ್, ಆ ಸರಣಿಯಲ್ಲಿ ಆಡಿರಲಿಲ್ಲ. ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದ ವೇಳೆ ಶರ್ಮಾ ಮಿಂಚುವ ನಿರೀಕ್ಷೆಯಿದೆ.

ಸಾಮರ್ಥ್ಯ, ಕೌಶಲ ರೋಹಿತ್‌ಗಿದೆ

ಸಾಮರ್ಥ್ಯ, ಕೌಶಲ ರೋಹಿತ್‌ಗಿದೆ

ಮಾತು ಮುಂದುವರೆಸಿದ ಹಸ್ಸಿ, 'ಆಸ್ಟ್ರೇಲಿಯಾದ ಕಠಿಣ ಪರಿಸ್ಥಿತಿಯನ್ನೂ ನಿಭಾಯಿಸಬಲ್ಲ ಸಾಮರ್ಥ್ಯ, ಕೌಶಲ ಮತ್ತು ಮನೋಧರ್ಮ ರೋಹಿತ್ ಶರ್ಮಾ ಅವರಲ್ಲಿ ಇದೆ ಅನ್ನೋದಕ್ಕೆ ನನ್ನಲ್ಲಿ ಯಾವುದೇ ಅನುಮಾನಗಳಿಲ್ಲ. ಅವರು ಯಾವುದೇ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಬಲ್ಲರು,' ಎಂದರು.

ಪ್ರವಾಸ ಸರಣಿ ಭಾರತಕ್ಕೆ ಸವಾಲೆನಿಸಲಿದೆ

ಪ್ರವಾಸ ಸರಣಿ ಭಾರತಕ್ಕೆ ಸವಾಲೆನಿಸಲಿದೆ

ಕಳೆದ ವರ್ಷ ನಿಷೇಧಕ್ಕೀಡಾಗಿದ್ದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಮತ್ತೆ ಆಸ್ಟ್ರೇಲಿಯಾ ತಂಡಕ್ಕೆ ಸೇರಿಕೊಂಡಿರುವುದರಿಂದ ಮುಂಬರಲಿರುವ ಪ್ರವಾಸ ಸರಣಿ ಭಾರತದ ಪಾಲಿಗೆ ಸವಾಲೆನಿಸಲಿದೆ ಎಂದು ಹಸ್ಸಿ ಕೂಡ ಅಭಿಪ್ರಾಯಿಸಿದ್ದಾರೆ. 'ಸ್ಮಿತ್ ಮತ್ತು ವಾರ್ನರ್ ಪುನರಾಗಮನ ತಂಡಕ್ಕೆ ಮಹತ್ವದ್ದೆನಿಸಿದೆ,' ಎಂದು ಮೈಕ್ ಹೇಳಿದ್ದಾರೆ. ಕಳೆದ ವರ್ಷ ಸ್ಮಿತ್-ವಾರ್ನರ್ ಅನುಪಸ್ಥಿತಿಯಲ್ಲಿ ಭಾರತದ ವಿರುದ್ಧ ಟೆಸ್ಟ್ ಸರಣಿ ಆಡಿದ್ದ ಆಸೀಸ್ ತಂಡ, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1ರಿಂದ ಸೋತಿತ್ತು (1 ಪಂದ್ಯ ಡ್ರಾ ಅನ್ನಿಸಿತ್ತು).

Story first published: Saturday, July 4, 2020, 9:45 [IST]
Other articles published on Jul 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+