Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಚಲಿಸುತ್ತಿದ್ದ ಬಸ್‌ಗೆ ಬಡಿಯಿತು ರೋಹಿತ್ ಶರ್ಮಾ ಬಾರಿಸಿದ ಭರ್ಜರಿ ಸಿಕ್ಸರ್: ವಿಡಿಯೋ

Rohit Sharma Hits Huge Six In Practice As Ball Lands On Moving Bus Rooftop

ಐಪಿಎಲ್ 13ನೇ ಆವೃತ್ತಿಗೆ ಎಲ್ಲಾ ತಂಡಗಳು ಭರ್ಜರಿಯಾಗಿ ಸಿದ್ಧತೆಯನ್ನು ನಡೆಸುತ್ತಿದೆ. ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳು ನೆಟ್‌ನಲ್ಲಿ ಬೆವರಿಸಳಿಸುತ್ತಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್ ಜಾತ್ರೆಗೆ ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಈ ಅಭ್ಯಾಸದ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಸಿಡಿಸಿದ ಸಿಕ್ಸರ್ ವೈರಲ್ ಆಗಿದೆ.

ಮುಂಬೈ ಇಂಡಿಯನ್ಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದೆ. ಈ ವಿಡಿಯೋದಲ್ಲಿ ರೋಹಿತ್ ಭರ್ಜರಿ ಸಿಕ್ಸರ್ ಸಿಡಿಸಿದ ದೃಶ್ಯವಿದೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಅಷ್ಟಕ್ಕೂ ಈ ಸಿಕ್ಸರ್ ವಿಡಿಯೋ ವೈರಲ್ ಆಗಲು ಕಾರಣವೂ ಇದೆ. ಸ್ಪಿನ್ ಬೌಲರ್ ಎಸತವನ್ನು ರೋಹಿತ್ ಶರ್ಮಾ ಮುನ್ನುಗ್ಗಿ ಸಿಕ್ಸರ್ ಬಾರಿಸುತ್ತಾರೆ. ಈ ಚೆಂಡು ಗಾಳಿಯಲ್ಲಿ ತೇಲುತ್ತಾ ಸ್ಟೇಡಿಯಮ್‌ನ ಆಚೆಗೆ ಸಿಡಿಯುತ್ತದೆ. 85 ಮೀಟರ್ ದೂರ ಚಿಮ್ಮಿದ ಚೆಂಡು ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್‌ನ ಟಾಪ್‌ಗೆ ಬಡಿಯುತ್ತದೆ. ಈ ದೃಶ್ಯ ವಿಡಿಯೋದಲ್ಲಿ ಸಂಪೂರ್ಣವಾಗಿ ಸೆರೆಯಾಗಿದೆ.

ಬೌಲರ್ ಬೌಲಿಂಗ್ ಮಾಡುವ ಮುನ್ನವೇ ದೂರದ ರಸ್ತೆಯಲ್ಲಿ ಬಸ್ ಬರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ಚಲಿಸುತ್ತಿದ್ದ ಆ ಬಸ್‌ಗೆ ಹಿಟ್‌ಮ್ಯಾನ್ ಸಿಡಿಸಿದ ಚೆಂಡು ಬಡಿದು ಅಭಿಮಾನಿಗಳು ಅಚ್ಚರಿಪಡುತ್ತಿದ್ದಾರೆ. ಈ ವಿಡಿಯೋಗೆ ಚೆಂದದ ಕ್ಯಾಪ್ಶನ್ ಕೊಟ್ಟು ಮುಂಬೈ ಇಂಡಿಯನ್ಸ್ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಸುದೀರ್ಘ ವಿರಾಮದ ಬಳಿಕ ಕ್ರಿಕೆಟಿಗರು ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಿರುವುದು ಅಭಿಮಾನಿಗಳ ಕಾತುರತೆಯನ್ನು ಹೆಚ್ಚಿಸಿದೆ. ಇನ್ನು ಕೆಲವೇ ಹತ್ತೆ ದಿನದಲ್ಲಿ ಐಪಿಎಲ್ ಆರಂಭವಾಗುತ್ತಿರುವುದುರಿಂದ ಉತ್ಸಾಹವೂ ಇಮ್ಮಡಿಗೊಳ್ಳುತ್ತಿದೆ. ರೋಹಿತ್ ಶರ್ಮಾ ಸಿಡಿಸುವ ಸಿಕ್ಸರ್ ನೇರಪ್ರಸಾರದಲ್ಲಿ ನೋಡಲು ಅಭಿಮಾನಿಗಳ ಉತ್ಸಾಹವನ್ನು ಈ ಭರ್ಜರಿ ಹೊಡೆತ ಮತ್ತಷ್ಟು ಹೆಚ್ಚಿಸಿದೆ.

Story first published: Thursday, September 10, 2020, 10:01 [IST]
Other articles published on Sep 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+