ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವರ್ಷದಲ್ಲಿ ಸಿಕ್ಸರ್: ಎಬಿಡಿ ದಾಖಲೆ ಧೂಳಿಪಟ ಮಾಡಿದ ರೋಹಿತ್ ಶರ್ಮಾ

ಇಂದೋರ್, ಡಿಸೆಂಬರ್ 23: ಪ್ರವಾಸಿ ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕೇವಲ 35ಎಸೆತಗಳಲ್ಲಿ ಶತಕ (118) ಸಿಡಿಸಿ ದಾಖಲೆ ಬರೆದಿರುವ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಸಿಕ್ಸರ್ ನಲ್ಲಿ ಹೊಸ ದಾಖಲೆ ಬರೆದರು.

ಟಿ20ಐ ತ್ವರಿತಗತಿ ಶತಕ, ಮಿಲ್ಲರ್ ದಾಖಲೆ ಸಮಕ್ಕೆ ನಿಂತ ರೋಹಿತ್ಟಿ20ಐ ತ್ವರಿತಗತಿ ಶತಕ, ಮಿಲ್ಲರ್ ದಾಖಲೆ ಸಮಕ್ಕೆ ನಿಂತ ರೋಹಿತ್

ರೋಹಿತ್ ಶರ್ಮಾ ಅವರು ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾದರು.

Rohit Sharma

ಶುಕ್ರವಾರ ಇಂದೋರ್ ನಲ್ಲಿ ನಡೆದ ಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಬರೋಬ್ಬರಿ 10 ಸಿಕ್ಸ್ ಸಿಡಿಸುವ ಮೂಲಕ ಈ ಹಿಂದೆ 2015ರಲ್ಲಿ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ (63) ದಾಖಲೆಯನ್ನು ಧೂಳಿಪಟ ಮಾಡಿದರು.

ಆಸ್ಟ್ರೇಲಿಯಾದ ಶೇನ್ ವಾಟ್ಸನ್ 2011ರಲ್ಲಿ 38 ಪಂದ್ಯಗಳಲ್ಲಿ 57 ಸಿಕ್ಸ್ ದಾಖಲಿಸಿದ್ದರು. ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ 2012ರಲ್ಲಿ 59 ಸಿಕ್ಸರ್ ಬಾರಿಸಿದ್ದರು. ಇದೀಗ ಪ್ರಸಕ್ತ 2017ರಲ್ಲಿ ರೋಹಿತ್ ಶರ್ಮಾ ಅವರ ಖಾತೆಯಲ್ಲಿ 64 ಸಿಕ್ಸರ್ ಗಳಿವೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X