Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ಪರ ವಿಶೇಷ ಮೈಲಿಗಲ್ಲು ಸ್ಥಾಪಿಸಲಿದ್ದಾರೆ ಹಿಟ್‌ಮ್ಯಾನ್ ರೋಹಿತ್

Rohit Sharma inches away from becoming first Indian to join elite 400-sixes club

ನಾಗ್ಪುರ್, ನವೆಂಬರ್ 9: ಭಾರತ vs ಬಾಂಗ್ಲಾದೇಶ ನಡವಿನ ದ್ವಿತೀಯ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ನಾಯಕ ರೋಹಿತ್ ಶರ್ಮಾ, ನಾಗ್ಪುರ್‌ನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 10) ನಡೆಯಲಿರುವ 3ನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ವಿಶೇಷ ದಾಖಲೆ ನಿರ್ಮಿಸಲಿದ್ದಾರೆ.

ರಾಜ್‌ಕೋಟ್‌ನಲ್ಲಿನ 2ನೇ ಟಿ20 ಪಂದ್ಯದಲ್ಲಿ 6 ಫೋರ್‌, 6 ಸಿಕ್ಸರ್ ನೊಂದಿಗೆ 43 ಎಸೆತಗಳಿಗೆ 85 ರನ್ ಚಚ್ಚಿದ್ದ ರೋಹಿತ್, ಭಾರತ 8 ವಿಕೆಟ್‌ ಗೆಲುವು ದಾಖಲಿಸಲು ನೆರವಾಗಿದ್ದರು. ಅಲ್ಲದೆ 3 ಪಂದ್ಯಗಳ ಟಿ20 ಸರಣಿಯೂ 1-1ರಿಂದ ಸಮಬಲಗೊಂಡಿತ್ತು. ಭಾರತ ಸರಣಿ ಸೋಲಿನ ಮುಖಭಂಗದಿಂದ ತಪ್ಪಿಸಿಕೊಂಡಿತ್ತು ಕೂಡ.

ಟೆಸ್ಟ್, ಏಕದಿನ ಪಂದ್ಯ ಮತ್ತು ಟಿ20 ಹೀಗೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಒಟ್ಟಿಗೆ 398 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ನಾಗ್ಪುರ ಪಂದ್ಯದಲ್ಲಿ 2 ಸಿಕ್ಸ್ ಬಾರಿಸಿದರೂ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಸಿಕ್ಸ್‌ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಆಗಿ ರೋಹಿತ್ ಮೈಲುಗಲ್ಲು ಸ್ಥಾಪಿಸಲಿದ್ದಾರೆ.

ಇಲ್ಲೀವರೆಗೆ ಹಿಟ್‌ಮ್ಯಾನ್‌ ರೋಹಿತ್ ಏಕದಿನ ಪಂದ್ಯದಲ್ಲಿ 232 ಸಿಕ್ಸ್‌ಗಳು, ಟೆಸ್ಟ್‌ನಲ್ಲಿ 51 ಸಿಕ್ಸ್‌ಗಳು ಮತ್ತು ಟಿ20ಐ ಕ್ರಿಕೆಟ್‌ನಲ್ಲಿ 115 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಶಾಹೀದ್ ಅಫ್ರಿದಿ 476 ಸಿಕ್ಸ್‌ಗಳು, ವೆಸ್ಟ್ ಇಂಡೀಸ್‌ನ ಕ್ರಿಸ್‌ ಗೇಲ್ 534 ಸಿಕ್ಸರ್‌ಗಳ ದಾಖಲೆ ಹೊಂದಿದ್ದಾರೆ.

Story first published: Saturday, November 9, 2019, 16:11 [IST]
Other articles published on Nov 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+