ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌ ಅಂತ್ಯವಾಗಲಿದೆಯಾ?: ರೋಹಿತ್ ಶರ್ಮಾ ಹೇಳಿದ್ದಿಷ್ಟು!

Rohit Sharma Interesting statement on discussion about ODI Format Future

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕದಿನ ಕ್ರಿಕೆಟ್ ಮಾದರಿಯ ಪ್ರಸ್ತುತತೆಯ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅನೇಕ ಹಾಲಿ ಹಾಗೂ ಮಾಜಿ ಆಟಗಾರರು ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಹೆಚ್ಚಿನವರು ಏಕದಿನ ಮಾದರಿ ಸಾಯುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಕುತೂಹಲಕಾರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಏಕದಿನ ಕ್ರಿಕೆಟ್‌ಗೆ ರೋಹಿತ್ ಬೆಂಬಲ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಮಾದರಿಯಿರಲಿ ಕ್ರಿಕೆಟ್ ಎಂಬುದು ಬಹಳ ಮುಖ್ಯವಾಗುತ್ತದೆ ಎಂದಿರುವ ಸವರ ಬಳಿಕ ತಮ್ಮ ಮಾತಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಭಾರತ ಯಾವಾಗ ಯಾವುದೇ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದರೂ ಸ್ಟೇಡಿಯಂ ಭರ್ತಿಯಾಗಿರುತ್ತದೆ ಮಾತ್ರವಲ್ಲದೆ ಪ್ರೇಕ್ಷಕರು ಅತ್ಯಂತ ಉತ್ಸಾಹದಿಂದ ಇರುತ್ತಾರೆ ಎಂದಿದ್ದಾರೆ ರೋಹಿತ್ ಶರ್ಮಾ.

PAK vs NED: ನೆದರ್ಲೆಂಡ್ಸ್‌ ವಿರುದ್ಧ ವಿಶ್ವದಾಖಲೆ ಮಾಡಿದ ಬಾಬರ್ ಅಜಮ್PAK vs NED: ನೆದರ್ಲೆಂಡ್ಸ್‌ ವಿರುದ್ಧ ವಿಶ್ವದಾಖಲೆ ಮಾಡಿದ ಬಾಬರ್ ಅಜಮ್

ವೈಯಕ್ತಿಕ ನಿರ್ಧಾರ: ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ ಯಾವುದೇ ಮಾದರಿಯಲ್ಲಿ ಆಡುವುದು ಹಾಗೂ ಬಿಡುವುದು ಆಯಾಯ ಆಟಗಾರರಿಗೆ ಬಿಟ್ಟಿರುವ ವಿಚಾರ ಎಂದಿದ್ದಾರೆ. ಆದರೆ ವೈಯಕ್ತಿಕವಾಗಿ ಕ್ರಿಕೆಟ್‌ನ ಮೂರು ಮಾದರಿಯಾದ ಏಕದಿನ, ಟೆಸ್ಟ್ ಹಾಗೂ ಟಿ20 ಈ ಮೂರು ಕೂಡ ಮುಖ್ಯವಾದವು ಎಂದಿದ್ದಾರೆ ರೋಹಿತ್ ಶರ್ಮಾ.

ಅಂತ್ಯವಾಗಲಿದೆ ಎಂದು ನಾನು ಯಾವತ್ತೂ ಹೇಳಲ್ಲ: ಇನ್ನು ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಕ್ರಿಕೆಟ್‌ನ ಯಾವುದೇ ಒಂದು ಮಾದರಿ ಅಂತ್ಯವಾಗಲಿದೆ ಎಂದು ನಾನು ಹೇಳಲಾರೆ ಎಂದಿದ್ದಾರೆ. "ಏಕದಿನ ಕ್ರಿಕೆಟ್ ಅಂತ್ಯವಾಗಲಿದೆ ಎಂದಾಗಲಿ, ಟಿ20 ಮಾದರಿ ಮುಕ್ತಾಯವಾಗಲಿದೆ ಎಂದಾಗಲಿ ಅಥವಾ ಟೆಸ್ಟ್ ಕ್ರಿಕೆಟ್ ಅಂತ್ಯವಾಗುವ ಸನಿಹದಲ್ಲಿದೆ ಎಂದು ನಾನು ಯಾವತ್ತಿಗೂ ಹೇಳಲಾರೆ. ಯಾಕೆಂದರೆ ನನಗೆ ಆಡುವುದು ಬಹಳಷ್ಟು ಮುಖ್ಯವಾಗಿದೆ. ಬಾಲ್ಯದಿಂದಲೇ ಭಾರತಕ್ಕಾಗಿ ಕ್ರಿಕೆಟ್ ಆಡುವುದು ನನ್ನ ದೊಡ್ಡ ಕನಸಾಗಿತ್ತು" ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ರೋಹಿತ್ ಶರ್ಮಾ.

ಗಾಯದ ಕಾರಣ ತಂಡದಿಂದ ಸ್ಥಾನ ಕಳೆದುಕೊಂಡ 4 ದುರದೃಷ್ಟವಂತ ಕ್ರಿಕೆಟರ್‌ಗಳುಗಾಯದ ಕಾರಣ ತಂಡದಿಂದ ಸ್ಥಾನ ಕಳೆದುಕೊಂಡ 4 ದುರದೃಷ್ಟವಂತ ಕ್ರಿಕೆಟರ್‌ಗಳು

Ravi Shastri ಅವಧಿಯಲ್ಲಿ ದಿನೇಶ್ ಕಾರ್ತಿಕ್ ಭಯಪಟ್ಟಿದ್ದು ಯಾಕೆ? | *Cricket | OneIndia Kannada

ಬೆನ್ ಸ್ಟೋಕ್ಸ ನಿವೃತ್ತಿಯ ಬಳಿಕ ಚರ್ಚೆ: ಇಂಗ್ಲೆಂಡ್ ಟೆಸ್ಟ್ ತಮಡದ ನಾಯಕ ಬೆನ್ ಸ್ಟೋಕ್ಸ್ ಇತ್ತೀಚೆಗೆ ಅಂತಾರಾಷ್ಟ್ರೀಯ ಏಕದಿನ ಮಾದರಿಗೆ ವಿದಾಯ ಘೋಷಣೆ ಮಾಡಿದ ಬಳಿಕ ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿದೆ. ಅತಿಯಾದ ಕಾರ್ಯದ ಒತ್ತಡದ ಕಾರಣದಿಂದಾಗಿ ಏಕದಿನ ಮಾದರಿಗೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣವನ್ನು ನೀಡಿ ಸ್ಟೋಕ್ಸ್ ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿದ್ದರು.

Story first published: Wednesday, August 17, 2022, 23:26 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X