ರೋಹಿತ್‌ಗೆ ಟೀಮ್ ಇಂಡಿಯಾ ನಾಯಕತ್ವಕ್ಕೆ ಮತ್ತೋರ್ವ ಇಂಗ್ಲೆಂಡ್ ಮಾಜಿ ನಾಯಕನ ಬೆಂಬಲ

ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ ರೋಹಿತ್ ಶರ್ಮಾ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ರಾಷ್ಟ್ರೀಯ ತಂಡದ ನಾಯಕತ್ವ ಕೂಡ ರೋಹಿತ್ ಶರ್ಮಾ ಹೆಗಲಿಗೆ ಬೀಳಬೇಕು ಎಂಬು ಕೂಗು ಜೋರಾಗಿ ಕೇಳಿಬರುತ್ತಿದೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಇತ್ತೀಚೆಗೆ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದರು. ಚುಟುಕು ಕ್ರಿಕೆಟ್‌ನಲ್ಲಿ ರೋಹಿತ್ ಭಾರತವನ್ನು ಮುನ್ನಡೆಸುವುದು ಸೂಕ್ತ ಎಮದಿದ್ದರು. ಇದೀಗ ಇಂಗ್ಲೆಂಡ್‌ನ ಇನ್ನೋರ್ವ ಮಾಜಿ ನಾಯಕ ಸಾಸಿರ್ ಹುಸೇನ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲು ಇದು ಸೂಕ್ತ ಸಂದರ್ಭ ಎಂದಿದ್ದಾರೆ ನಾಸಿರ್ ಹುಸೇನ್.
ರೋಹಿತ್ ಶರ್ಮಾ ನಾಯಕತ್ವ ಅದ್ಭುತವಾಗಿದೆ. ಆತನ ಶಾಂತ ವ್ಯಕ್ತಿತ್ವ ಹಾಗೂ ಕಠಿಣ ಸಂದರ್ಭದಲ್ಲಿ ತೆಗದದುಕೊಲ್ಳುವ ಸರಿಯಾದ ನಿರ್ಧಾರಗಳು ಆತನನನ್ನು ಅತ್ಯುತ್ತಮ ನಾಯಕನನ್ನಾಗಿಸಿದೆ. ಹೀಗಾಗಿ ಟೀಮ್ ಇಂಡಿಯಾದ ಟಿ20 ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದು ರೋಹಿತ್ ಶರ್ಮಾ ವಹಿಸಿಕೊಲ್ಳುವುದು ಸೂಕ್ತ ಎಂದಿದ್ದಾರೆ.
ರೋಹಿತ್ ಶರ್ಮಾ ಅವರನ್ನು ನಾಸಿರ್ ಹುಸೇನ್ ಅತ್ಯುತ್ತಮ ವೈಟ್‌ಬಾಲ್ ಕ್ರಿಕೆಟರ್ ಎಂದು ಕರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 3 ದ್ವಿಶತಕ ದಾಖಲಿಸಿದ ಏಕೈಕ ಕ್ರಿಕೆಟಿಗ ಎಂಬುದನ್ನು ನಾಸಿರ್ ಹುಸೇನ್ ಉಲ್ಲೇಖಿಸಿದ್ದಾರೆ.
"ಆತ ವಯಟ್‌ಬಾಲ್ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಓರ್ವ. 50 ಓವರ್‌ಗಳ ಆಟವನ್ನು ನೋಡಿದರೆ ಆತ ಮೂರು ದ್ವಿಶತಕ ದಾಖಲಿಸಿದ್ದಾರೆ. ಸಾಕಷ್ಟು ರನ್ ಗಳಿಸಿದ ಆಟಗಾರನಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಸ್ವಲ್ಪ ಲಯ ಕಳೆದುಕೊಂಡಂತಿದ್ದಾರೆ. ಆದರೆ ಫೈನಲ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ ಎಂದು ನಾಸಿರ್ ಹುಸೇನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications