Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಹಿತ್, ಇಶಾಂತ್ ಶೀಘ್ರ ಆಸ್ಟ್ರೇಲಿಯಾಕ್ಕೆ ಹೊರಡಬೇಕು: ರವಿ ಶಾಸ್ತ್ರಿ

Rohit Sharma, Ishant Sharma need to leave for Australia in 3-4 days: Ravi Shastri

ಸಿಡ್ನಿ: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸಂಬಂಧ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಇಬ್ಬರೂ ಇನ್ನು ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾಕ್ಕೆ ಹೊರಡಬೇಕಿದೆ ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ರೋಹಿತ್ ಮತ್ತು ಇಶಾಂತ್ ಇಬ್ಬರೂ ಭಾರತ ಟೆಸ್ಟ್ ತಂಡದಲ್ಲಿ ಹೆಸರಿಸಲ್ಪಟ್ಟಿದ್ದಾರೆ.

ಹ್ಯಾಮ್‌ಸ್ಟ್ರಿಂಗ್‌ಗೆ ತುತ್ತಾಗಿರುವ ರೋಹಿತ್ ಶರ್ಮಾ ಮತ್ತು ಸೈಡ್ ಸ್ಟ್ರೇನ್‌ಗೆ (ಹೊಟ್ಟೆ ಭಾಗದ ಬದಿಯ ಸ್ನಾಯುಗಳು ಅಥವಾ ಜಾಯಿಂಟ್ ಬೇನೆ) ಒಳಗಾಗಿರು ಇಶಾಂತ್ ಶರ್ಮಾ ಇಬ್ಬರೂ ಇಂಡಿಯನ್ ಪ್ರೀಮಿಯರ್ ಲೀಗ್‌ ಬಳಿಕ ಭಾರತಕ್ಕೆ ವಾಪಸ್ಸಾಗಿದ್ದರು. ಈಗ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ.

ರೋಹಿತ್, ಇಶಾಂತ್ ಯಾವಾಗ ಆಸ್ಟ್ರೇಲಿಯಾ ತಲುಪಲಿದ್ದಾರೆ ಅನ್ನೋದನ್ನು ಬಿಸಿಸಿಐ ಇನ್ನೂ ತಿಳಿಸಲಿಲ್ಲ. ಹೀಗಾಗಿ ಆಸ್ಟ್ರೇಲಿಯಾದಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್ ಇರುವುದರಿಂದ ಇಬ್ಬರೂ ಕೂಡ ಅಭ್ಯಾಸ ಪಂದ್ಯ ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿಯೇ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ರೋಹಿತ್ ವೈಟ್‌ಬಾಲ್‌ನಲ್ಲಿ ಆಡುತ್ತಿಲ್ಲ. ನೀವು ಟೆಸ್ಟ್ ಸರಣಿ ಆಡಬೇಕಾದರೆ ಮುಂದಿನ 3-4 ದಿನಗಳಲ್ಲಿ ನೀವು ಆಸ್ಟ್ರೇಲಿಯಾದ ವಿಮಾನ ಹತ್ತಬೇಕಾಗುತ್ತದೆ. ಇಲ್ಲದಿದ್ದರೆ ಸಂಗತಿ ಕಠಿಣವಾಗಲಿದೆ,' ಎಂದು ಎಬಿಸಿ ಸ್ಪೋರ್ಟ್ಸ್ ಜೊತೆ ಮಾತನಾಡಿದ ಶಾಸ್ತ್ರಿ ಹೇಳಿದ್ದಾರೆ. ನವೆಂಬರ್ 27ರಿಂದ ಭಾರತ-ಆಸ್ಟ್ರೇಲಿಯಾ ಸರಣಿ ಆರಂಭಗೊಳ್ಳಲಿದೆ.

Story first published: Monday, November 23, 2020, 14:55 [IST]
Other articles published on Nov 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+