ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುತ್ತಿದ್ದಂತೆ ಇತಿಹಾಸ ಬರೆದಿದ್ದಾರೆ. ನಾಯಕತ್ವದಿಂದ ತೆಗೆದು ಹಾಕಿದ ಬಳಿಕ ಇದೇ ಮೊದಲ ಸರಣಿಯನ್ನು ಆಡಲು ಸಜ್ಜಾಗಿರುವ ರೋಹಿತ್ ಶರ್ಮಾ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಕಳೆದ 7 ತಿಂಗಳುಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದ ರೋಹಿತ್ ಶರ್ಮಾ, ಭಾನುವಾರ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಲು ಸಜ್ಜಾಗಿದ್ದಾರೆ. ಈ ಸರಣಿಗಾಗಿ ಭರ್ಜರಿ ತಾಲಿಮು ನಡೆಸಿದ್ದ ರೋಹಿತ್ ದೇಹದ ತೂಕವನ್ನು ಇಳಿಸಿಕೊಂಡಿದ್ದಾರೆ.
ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿ ಬದುಕಿನ 500ನೇ ಪಂದ್ಯವಾಗಿರಲಿದೆ. ಈ ಮೂಲಕ ಇವರು ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ಮೂಲಕ ಸಾಧನೆಯನ್ನು ಮಾಡಿದ ವಿಶ್ವದ 11ನೇ ಹಾಗೂ ಭಾರತದ ಐದನೇ ಆಟಗಾರ ಎಂಬ ಖ್ಯಾತಿ ರೋಹಿತ್ ಪಾಲಾಗಿದೆ. ಈ ಮೊದಲು ಈ ಸಾಧನೆಯನ್ನು ಭಾರತದ ಪರ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ರಾಹುಲ್ ದ್ರಾವಿಡ್ ಮಾಡಿದ್ದಾರೆ. ಈಗ ಈ ಎಲೈಟ್ ಲೀಸ್ಟ್‌ಗೆ ರೋಹಿತ್ ಎಂಟ್ರಿ ಪಡೆದಿದ್ದಾರೆ.

2007ರಿಂದ ಭಾರತ ತಂಡದ ಅವಿಭಾಜ್ಯ ಅಂಗವಾಗಿರುವ ರೋಹಿತ್ ಶರ್ಮಾ ಭಾರತದ ಪರ 67 ಟೆಸ್ಟ್, 273 ಏಕದಿನ ಪಂದ್ಯ, 159 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಪರ್ತ್‌ನಲ್ಲಿ ಆಡುತ್ತಿರುವುದು ರೋಹಿತ್ ಅವರ ವೃತ್ತಿ ಜೀವನದ 274ನೇ ಹಾಗೂ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನವದ 500ನೇ ಪಂದ್ಯವಾಗಿದೆ.
ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಆಟಗಾರ. ಇವರು ಆಡಿದ 499 ಪಂದ್ಯಗಳಲ್ಲಿ 42.18ರ ಸರಾಸರಿಯಲ್ಲಿ 19700 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 49 ಶತಕ ಹಾಗೂ 108 ಅರ್ಧಶತಕಗಳು ಸೇರಿವೆ.

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ರೋಹಿತ್ ಶರ್ಮಾ ಅವರು ದಕ್ಷಿಣ ಆಪ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ಬಯಕೆಯನ್ನು ಹೊಂದಿದ್ದಾರೆ. ಅವರ ಈ ಬಯಕೆ ಈಡೇರ ಬೇಕಾದಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಪ್ರದರ್ಶನದ ಮೂಲಕ ಎಲ್ಲರಿಗೂ ಉತ್ತರ ನೀಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಆಸೆ ಇಡೆರುತ್ತದೆ.
ಸಚಿನ್ ತೆಂಡೂಲ್ಕರ್, ಭಾರತ, 664 ಪಂದ್ಯ
ಮಹೇಲ್ ಜಯವರ್ಧನೆ, ಶ್ರೀಲಂಕಾ, 652 ಪಂದ್ಯ
ಕುಮಾರ್ ಸಂಗಕ್ಕಾರ, ಶ್ರೀಲಂಕಾ, 594 ಪಂದ್ಯ
ಸನತ್ ಜಯಸೂರ್ಯ, ಶ್ರೀಲಂಕಾ, 586 ಪಂದ್ಯ
ರಿಕ್ಕಿ ಪಾಂಟಿಂಗ್, ಆಸ್ಟ್ರೇಲಿಯಾ, 560 ಪಂದ್ಯ