For Quick Alerts
ALLOW NOTIFICATIONS  
For Daily Alerts
 

Adelaide Test: ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರೋಹಿತ್ ಶರ್ಮಾ

ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಪರ್ತ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಜಸ್ಪ್ರಿತ್‌ ಬುಮ್ರಾ ಮುನ್ನಡೆಸಿದ್ದರು. ಅಲ್ಲದೆ ಆರಂಭಿಕರಾಗಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಂಡಿದ್ದರು. ಈ ವೇಳೆ ರಾಹುಲ್‌ ಅಮೋಘ ಬ್ಯಾಟಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಈಗ ರೋಹಿತ್ ಶರ್ಮಾ ಮತ್ತೆ ತಂಡ ಸೇರಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ರೋಹಿತ್‌ ಶರ್ಮಾ ತಂಡ ಸೇರಿಕೊಂಡಿದ್ದಾರೆ.

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್‌ ಹಾಗೂ ಕೆಎಲ್ ರಾಹುಲ್‌ ಅಮೊಘ ಇನಿಂಗ್ಸ್‌ ಕಟ್ಟಿದ್ದರು. ಇವರ ಈ ಆಟವನ್ನು ಕಂಡು ಮ್ಯಾನೇಜ್ಮೆಂಟ್‌ ಸಹ ನಿಬ್ಬೆರಗಾಗಿತ್ತು. ರೋಹಿತ್‌ ಶರ್ಮಾ ತಂಡ ಸೇರಿಕೊಂಡರೆ, ಶುಭಮನ್‌ ಗಿಲ್‌ ಫಿಟ್ ಆದಲ್ಲಿ ರಾಹುಲ್‌ ಯಾವ ಸ್ಥಾನದಲ್ಲಿ ಆಡುತ್ತಾರೆ ಎಂಬ ಪ್ರಶ್ನೆಗಳು ಇದ್ದವು. ಇದಕ್ಕೆ ಸದ್ಯ ಮೇಲ್ನೋಟದ ಉತ್ತರ ಸಿಕ್ಕಿದೆ.

Rohit Sharma Joins Team India for Adelaide Test KL Rahul Likely to Open

ರೋಹಿತ್‌ ಹೆಗಲಿಗೆ ಜವಾಬ್ದಾರಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್‌ ಆಡಿಲೆಡ್‌ನಲ್ಲಿ ನಡೆಯಲಿದೆ. ಇದು ಹಗಲು ರಾತ್ರಿ ಟೆಸ್ಟ್‌ ಆಗಿರಲಿದೆ. ಹೀಗಾಗಿ ಟೀಮ್ ಇಂಡಿಯಾ ಪಿಎಂ ಇಲೆವೆನ್ ವಿರುದ್ಧ ಒಂದು ಅಭ್ಯಾಸ ಪಂದ್ಯವನ್ನು ಆಡಿತು. ಈ ವೇಳೆ ಹಲವು ಪ್ರಶ್ನೆಗಳಿಗೆ ರೋಹಿತ್ ಶರ್ಮಾ ಉತ್ತರ ನೀಡುವ ಕಾರ್ಯವನ್ನು ಮಾಡಿದ್ದಾರೆ. ಇದರ ಅನುಸಾರ ಡೇ-ಆಂಡ್‌ ನೈಟ್‌ ಟೆಸ್ಟ್‌ನಲ್ಲಿ ಯಶಸ್ವಿ ಜೊತೆಗೆ ರಾಹುಲ್‌ ಇನಿಂಗ್ಸ್‌ ಆರಂಭಿಸಬಹುದು ಎಂದು ಅಂದಾಜು ಸಿಗುತ್ತಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು.

ತಂಡದ ಹಿತಕ್ಕೋಸ್ಕರ ರೋಹಿತ್‌ ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟ್ ಮಾಡಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಸರಣಿ ಕೆಎಲ್ ರಾಹುಲ್‌ ಅವರ ಕ್ಷಮತೆಯನ್ನು ತೋರಿಸಲು ಮಹತ್ವದಾಗಿತ್ತು. ಈ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್‌ನಲ್ಲಿ ರಾಹುಲ್‌ ನೆಲಕಚ್ಚಿ ಬ್ಯಾಟ್ ಮಾಡಿದ್ದರು. ಇದರಿಂದ ಟೀಮ್ ಇಂಡಿಯಾ ಇವರನ್ನು ಎರಡನೇ ಟೆಸ್ಟ್‌ನಲ್ಲಿ ರಾಹುಲ್‌ ಅವರನ್ನು ಆರಂಭಿಕರಾಗಿ ಕಣಕ್ಕೆ ಇಳಿಸಬಹುದು.

Rohit Sharma Joins Team India for Adelaide Test KL Rahul Likely to Open

ಯಾವ ಕ್ರಮಾಂಕದಲ್ಲಿ ಆಡಬಹುದು?

ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕೆ ಇಳಿಯದಿದ್ದರೆ ಯಾವ ಕ್ರಮಾಂಕದಲ್ಲಿ ಆಡಬೇಕು ಎಂಬ ಪ್ರಶ್ನೆಗಳು ಎದ್ದಿವೆ. ರೋಹಿತ್‌ ಶರ್ಮಾ ಆರಂಭಿಕರಾಗಿ ಕಣಕ್ಕೆ ಇಳಿಯದೇ ಇದ್ದರೇ ಐದನೇ ಕ್ರಮಾಂಕದಲ್ಲಿ ಆಡುವುದು ಬೆಸ್ಟ್‌ ಅನಿಸುತ್ತದೆ. ಇವರು ಐದನೇ ಕ್ರಮಾಂಕದಲ್ಲಿ 9 ಪಂದ್ಯಗಳ 16 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿ 48.55 ಸರಾಸರಿಯಲ್ಲಿ 437 ರನ್‌ ಸಿಡಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳು ಸೇರಿವೆ. ಆರನೇ ಕ್ರಮಾಂಕದಲ್ಲಿ ರೋಹಿತ್‌ ಶರ್ಮಾ 16ನೇ ಪಂದ್ಯದಲ್ಲಿ 25 ಇನಿಂಗ್ಸ್‌ ಗಳಲ್ಲಿ ಬ್ಯಾಟ್ ಮಾಡಿದ್ದು, 60.71 ಸರಾಸರಿಯಲ್ಲಿ 1037 ರನ್‌ ಸಿಡಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 6 ಅರ್ಧಶತಕಗಳು ಸೇರಿವೆ. ರೋಹಿತ್ ಶರ್ಮಾ ಅವರು ಯಾವ ಸ್ಥಾನದಲ್ಲಿ ಆಡುತ್ತಾರೆ ಎಂಬುದನ್ನು ಕಾದುನೋಡಬೇಕು?

Story first published: Monday, December 2, 2024, 8:00 [IST]
Other articles published on Dec 2, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+