Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 10000 ರನ್ ಗಳಿಸಿದ ಅಗ್ರ ನಾಲ್ವರೂ ಭಾರತೀಯರೇ!

ಯಾವುದೇ ಸ್ವರೂಪದ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲು ತಲುಪುವುದು ಅಸಾಧಾರಣ ಸಾಧನೆಯಾಗಿದೆ. 2023ರ ಏಷ್ಯಾ ಕಪ್ ಪಂದ್ಯಾವಳಿಯ ಶ್ರೀಲಂಕಾ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಎಲೈಟ್ 10,000 ರನ್ ಕ್ಲಬ್‌ ಪ್ರವೇಶ ಪಡೆದರು.

ಈ ಮೂಲಕ 10000 ರನ್‌ಗಳ ಸಾಧನೆ ಮಾಡಿದ 6ನೇ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೂ ಪಾತ್ರರಾದರೆ, ಈ ಮೈಲಿಗಲ್ಲು ಸ್ಥಾಪಿಸಿದ ವಿಶ್ವದ 15ನೇ ಬ್ಯಾಟ್ಸ್‌ಮನ್ ಆದರು.

rohit-sharma-joins-the-elite-club-of-legendary

ಏಕದಿನ ಕ್ರಿಕೆಟ್‌ನಲ್ಲಿ 10,000 ರನ್‌ ಗಳಿಸಿದ ಭಾರತೀಯ ಆಟಗಾರರು

ಸಚಿನ್ ತೆಂಡೂಲ್ಕರ್ - 18426
ವಿರಾಟ್ ಕೊಹ್ಲಿ - 13024
ಸೌರವ್ ಗಂಗೂಲಿ - 11363
ರಾಹುಲ್ ದ್ರಾವಿಡ್ - 10889
ಎಂಎಸ್ ಧೋನಿ - 10773
ರೋಹಿತ್ ಶರ್ಮಾ - 10031*

ಏಕದಿನ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಗಡಿ ದಾಟಿದ ವಿಶ್ವದ 15 ಬ್ಯಾಟರ್‌ಗಳಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಸರಾಸರಿ ಹೊಂದಿದ ಮೂರನೇ ಬ್ಯಾಟರ್ ಎನಿಸಿಕೊಂಡರು.

ವಿರಾಟ್ ಕೊಹ್ಲಿ 57.62 ಮತ್ತು ಎಂಎಸ್ ಧೋನಿ 50.57 ಸರಾಸರಿಯೊಂದಿಗೆ ಮೊದಲೆರಡು ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ 49.02 ಸರಾಸರಿಯಲ್ಲಿ 10,000 ರನ್‌ ಬಾರಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ತೆಗೆದುಕೊಂಡ ಇನ್ನಿಂಗ್ಸ್‌ಗಳ ಲೆಕ್ಕದಲ್ಲಿ 10,000 ರನ್ ಮಾರ್ಕ್ ಅನ್ನು ತಲುಪಿದ ಎರಡನೇ ವೇಗದ ಆಟಗಾರ ಎನಿಸಿಕೊಂಡರು. ಗಮನಾರ್ಹವಾಗಿ, 10,000 ರನ್ ಗಳಿಸಿದ ನಾಲ್ಕು ವೇಗದ ಬ್ಯಾಟರ್‌ಗಳು ಭಾರತದವರೇ ಆಗಿದ್ದಾರೆ.

rohit-sharma-joins-the-elite-club-of-legendary

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 205 ಇನ್ನಿಂಗ್ಸ್‌ಗಳಲ್ಲಿ 10,000 ರನ್‌ಗಳ ಗಡಿಯನ್ನು ತಲುಪುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

36 ವರ್ಷದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್‌ಗಳನ್ನು ತಲುಪಿದ ಎರಡನೇ ವೇಗದ ಬ್ಯಾಟರ್ ಎನಿಸಿಕೊಂಡರು. ಈ ಹಾದಿಯಲ್ಲಿ ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕಿ, ವಿರಾಟ್ ಕೊಹ್ಲಿ ನಂತರದ ಸ್ಥಾನ ಪಡೆದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ 241ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ಮಾಜಿ ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ (259 ಇನ್ನಿಂಗ್ಸ್‌) ಮತ್ತು ಸೌರವ್ ಗಂಗೂಲಿ (263 ಇನ್ನಿಂಗ್ಸ್‌) ನಂತರದ ಸ್ಥಾನ ಪಡೆದರು.

ಏಕದಿನ ಕ್ರಿಕೆಟ್‌ನಲ್ಲಿ ವೇಗದ 10,000 ರನ್‌ ಗಳಿಸಿದವರು (ಇನಿಂಗ್ಸ್‌ನಿಂದ)

ವಿರಾಟ್ ಕೊಹ್ಲಿ - 205 ಇನ್ನಿಂಗ್ಸ್
ರೋಹಿತ್ ಶರ್ಮಾ - 241 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್ - 259 ಇನ್ನಿಂಗ್ಸ್
ಸೌರವ್ ಗಂಗೂಲಿ - 263 ಇನ್ನಿಂಗ್ಸ್

Story first published: Tuesday, September 12, 2023, 18:19 [IST]
Other articles published on Sep 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+