For Quick Alerts
ALLOW NOTIFICATIONS  
For Daily Alerts
 

2023ರ ಐಸಿಸಿ ವಿಶ್ವಕಪ್ ಕನಸಿನ ತಂಡದಲ್ಲಿ ಭಾರತದ ಆರು ಜನರಿಗೆ ಸ್ಥಾನ; ಆಸೀಸ್ ತಂಡದಿಂದ ಕೇವಲ ಇಬ್ಬರು ಆಯ್ಕೆ!

2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ತೆರೆಬಿದ್ದಿದ್ದು, ಆತಿಥೇಯ ಭಾರತ ತಂಡದ ವಿರುದ್ಧ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಆರನೇ ಬಾರಿಗೆ ಐಸಿಸಿ ಟ್ರೋಫಿ ಎತ್ತಿಹಿಡಿದಿದೆ.

12 ವರ್ಷಗಳ ಬಳಿಕ ಮೂರನೇ ಬಾರಿಗೆ ಐಸಿಸಿ ವಿಶ್ವಕಪ್ ಟ್ರೋಫಿ ಗೆಲ್ಲುವ ಭಾರತ ತಂಡದ ಕನಸು ನುಚ್ಚುನೂರಾಗಿದ್ದು, ಪ್ರಶಸ್ತಿ ಗೆಲ್ಲುವ ಪಂದ್ಯದಲ್ಲಿ ಎಡವಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಇದೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ವಿಶ್ವಕಪ್ 2023ರ ಟೂರ್ನಮೆಂಟ್ ತಂಡದ ನಾಯಕರಾಗಿ ನೇಮಕವಾದರು. ಪಂದ್ಯಾವಳಿಯಲ್ಲಿ ತೋರಿದ ಪ್ರದರ್ಶನದ ಆಧಾರದ ಮೇಲೆ, ಆಯ್ದ ಆಟಗಾರರಿಂದ ಕೂಡಿದ ಈ ತಂಡವನ್ನು ಪ್ರಕಟಿಸಲಾಗಿದೆ.

rohit-sharma-leads-iccs-world-cup-dream-team

ಅಹಮದಾಬಾದ್‌ನಲ್ಲಿ ನಡೆದ ದೊಡ್ಡ ಫೈನಲ್‌ನ ಒಂದು ದಿನದ ನಂತರ, ಸೋಮವಾರ ಪ್ರಕಟಿಸಲಾದ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ ಸೇರಿದಂತೆ 6 ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.

ಗಮನಾರ್ಹವಾಗಿ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟ್ರೋಫಿ ಎತ್ತಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಈ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಸ್ಪಿನ್ನರ್ ಆಡಮ್ ಝಂಪಾ ಮಾತ್ರ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದಿಂದ ಐಸಿಸಿ ವಿಶ್ವಕಪ್‌ ಟೂರ್ನಮೆಂಟ್‌ನ 11ರ ಬಳಗದಲ್ಲಿ ಸ್ಥಾನ ಪಡೆದ ಇಬ್ಬರು ಆಟಗಾರರು. ದಕ್ಷಿಣ ಆಫ್ರಿಕಾದ ಯುವ ವೇಗದ ಬೌಲರ್ ಗೆರ್ಲ್ಯಾಂಡ್ ಕೊಯೆಟ್ಜಿ ಅವರನ್ನು ಐಸಿಸಿ ವಿಶ್ವಕಪ್ ತಂಡದ 12ನೇ ಆಟಗಾರ ಎಂದು ಹೆಸರಿಸಲಾಯಿತು.

rohit-sharma-leads-iccs-world-cup-dream-team

2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಡಿದ 10 ತಂಡಗಳ ಪೈಕಿ 5 ತಂಡಗಳ ಆಟಗಾರರನ್ನು ಟೂರ್ನಮೆಂಟ್‌ನ ತಂಡದಲ್ಲಿ ಆಯ್ಕೆ ಮಾಡಲಾಗಿದ್ದು, ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ, ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶ ತಂಡಗಳಿಂದ ಯಾರೂ ಸ್ಥಾನ ಪಡೆದಿಲ್ಲ.

ನಾಯಕ ರೋಹಿತ್ ಶರ್ಮಾ, 11 ಪಂದ್ಯಗಳಲ್ಲಿ 765 ರನ್ ಗಳಿಸಿರುವ ಟೇಬಲ್ ಟಾಪರ್ ವಿರಾಟ್ ಕೊಹ್ಲಿ, 7 ಪಂದ್ಯಗಳಿಂದ 24 ವಿಕೆಟ್‌ ಕಬಳಿಸಿರುವ ಬೌಲಿಂಗ್ ಟೇಬಲ್ ಟಾಪರ್ ಮೊಹಮ್ಮದ್ ಶಮಿ, ಬ್ಯಾಟರ್ ಆಗಿ ಕೆಎಲ್ ರಾಹುಲ್, ಆಲ್‌ರೌಂಡರ್ ರವೀಂದ್ರ ಜಡೇಜಾ, ವೇಗಿ ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದ ಭಾರತೀಯ ಆಟಗಾರರಾಗಿದ್ದಾರೆ.

ಈ ವಿಶ್ವಕಪ್‌ನಲ್ಲಿ 4 ಶತಕಗಳನ್ನು ಬಾರಿಸಿದ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರನ್ನು ವಿಕೆಟ್ ಕೀಪರ್ ಮತ್ತು ರೋಹಿತ್ ಶರ್ಮಾ ಜೊತೆಗೆ ಆರಂಭಿಕರಾಗಿ ಆಯ್ಕೆ ಮಾಡಲಾಗಿದೆ. ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟರ್ ಡೇರಿಲ್ ಮಿಚೆಲ್ ಈ ತಂಡದಲ್ಲಿ ನಾಲ್ಕನೇ ಕ್ರಮಾಂಕವನ್ನು ಭರ್ತಿ ಮಾಡಲಿದ್ದಾರೆ.

rohit-sharma-leads-iccs-world-cup-dream-team

1) ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), (ದಕ್ಷಿಣ ಆಫ್ರಿಕಾ) - 59.40ರ ಸರಾಸರಿಯಲ್ಲಿ 594 ರನ್
2) ರೋಹಿತ್ ಶರ್ಮಾ (ನಾಯಕ), (ಭಾರತ) - 54.27ರ ಸರಾಸರಿಯಲ್ಲಿ 597 ರನ್
3) ವಿರಾಟ್ ಕೊಹ್ಲಿ (ಭಾರತ) - 95.62ರ ಸರಾಸರಿಯಲ್ಲಿ 765 ರನ್
4) ಡೇರಿಲ್ ಮಿಚೆಲ್ (ನ್ಯೂಜಿಲೆಂಡ್) - 69ರ ಸರಾಸರಿಯಲ್ಲಿ 552 ರನ್
5) ಕೆಎಲ್ ರಾಹುಲ್ (ಭಾರತ) - 75.33ರ ಸರಾಸರಿಯಲ್ಲಿ 452 ರನ್
6) ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ) - 66.66ರ ಸರಾಸರಿಯಲ್ಲಿ 400 ರನ್ ಮತ್ತು 6 ವಿಕೆಟ್
7) ರವೀಂದ್ರ ಜಡೇಜಾ (ಭಾರತ) - 40ರ ಸರಾಸರಿಯಲ್ಲಿ 120 ರನ್ ಮತ್ತು 16 ವಿಕೆಟ್
8) ಜಸ್ಪ್ರೀತ್ ಬುಮ್ರಾ (ಭಾರತ) - 20 ವಿಕೆಟ್
9) ದಿಲ್ಶನ್ ಮಧುಶಂಕ (ಶ್ರೀಲಂಕಾ) - 21 ವಿಕೆಟ್
10) ಆಡಮ್ ಝಂಪಾ (ಆಸ್ಟ್ರೇಲಿಯಾ) - 23 ವಿಕೆಟ್
11) ಮೊಹಮ್ಮದ್ ಶಮಿ (ಭಾರತ) - 24 ವಿಕೆಟ್
12ನೇ ಆಟಗಾರ: ಜೆರಾಲ್ಡ್ ಕೋಟ್ಜಿ (ದಕ್ಷಿಣ ಆಫ್ರಿಕಾ) - 20 ವಿಕೆಟ್

ಗಮನಾರ್ಹವೆಂದರೆ, ರೋಹಿತ್ ಶರ್ಮಾ ಸತತ ಎರಡನೇ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್‌ನ ಟೂರ್ನಮೆಂಟ್ ತಂಡದಲ್ಲಿ ಸ್ಥಾನ ಪಡೆದರು. 2019ರಲ್ಲಿಯೂ ರೋಹಿತ್ ಸ್ಥಾನ ಪಡೆದಿದ್ದರು.

ಅಫ್ಘಾನಿಸ್ತಾನ ವಿರುದ್ಧ ಅಮೋಘ 201 ರನ್ ಬಾರಿಸಿದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಭಾರತದ ರವೀಂದ್ರ ಜಡೇಜಾ ಇಬ್ಬರು ಆಲ್‌ರೌಂಡರ್‌ಗಳಾಗಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್‌ನ ಟೂರ್ನಮೆಂಟ್ ತಂಡದಲ್ಲಿ ಹೆಸರಿಲ್ಲದ ಟ್ರಾವಿಸ್ ಹೆಡ್ ಅವರು ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳನ್ನು ಗೆದ್ದು ಅಪರೂಪದ ಸಾಧನೆ ಮಾಡಿದರು.

Story first published: Monday, November 20, 2023, 14:05 [IST]
Other articles published on Nov 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+