ಟೀಮ್ ಇಂಡಿಯಾ ಸೇರಲು ಆಸ್ಟ್ರೇಲಿಯಾಕ್ಕೆ ಹಾರಿದ ರೋಹಿತ್ ಶರ್ಮಾ

ನವದೆಹಲಿ: ಟೀಮ್ ಇಂಡಿಯಾ ಸೇರಿಕೊಳ್ಳುವುದಕ್ಕಾಗಿ ಭಾರತದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಆಸ್ಟ್ರೇಲಿಯಾಕ್ಕೆ ಹೊರಟಿದ್ದಾರೆ. ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ರೋಹಿತ್ ಆಡುತ್ತಾರೋ ಇಲ್ಲವೋ ಎನ್ನುವ ಅನುಮಾನಗಳಿಗೆ ಈಗ ತೆರೆ ಬಿದ್ದಿದೆ.
ಡಿಸೆಂಬರ್ 17ರಿಂದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಇದರಲ್ಲಿ ಆರಂಭಿಕ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಅಥವಾ ಡೇ ನೈಟ್ ಟೆಸ್ಟ್ ಆಗಿರಲಿದೆ. ರೋಹಿತ್ ಈಗ ಭಾರತ ತೊರೆದಿರುವುದನ್ನು ಗಮನಿಸಿದರೆ, ಮೂರನೇ ಟೆಸ್ಟ್ ನಲ್ಲಿ ಶರ್ಮಾ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ದುಬೈನಲ್ಲಿ ಐಪಿಎಲ್ ಮುಗಿದ ಬಳಿಕ, ರೋಹಿತ್ ಅವರನ್ನು ಬಿಟ್ಟು ಭಾರತ ತಂಡ ಆಸ್ಟ್ರೇಲಿಯಾಕ್ಕೆ ತೆರಳಿದ ಬಳಿಕ ರೋಹಿತ್ ಬೆಂಗಳೂರಿನ ಎನ್‌ಸಿಎಯಲ್ಲಿದ್ದು ಫಿಟ್ನೆಸ್‌ನತ್ತ ಗಮನ ಹರಿಸಿದ್ದರು. ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್ ವೇಳೆ ಶರ್ಮಾ ಸಂಪೂರ್ಣ ಫಿಟ್ನೆಸ್‌ಗೆ ಮರಳುವ ನಿರೀಕ್ಷೆಯಿದೆ ಎಂದು ರೋಹಿತ್ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಮೂಲವೊಂದು ಮಾಹಿತಿ ನೀಡಿದೆ.
'ಈದಿನ (ಡಿಸೆಂಬರ್ 15) ಬೇಗನೆ ರೋಹಿತ್ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ದುಬೈ ಮೂಲಕ ರೋಹಿತ್ ರೋಹಿತ್ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ,' ಎಂದು ಬಿಸಿಸಿಐ ಮೂಲವೊಂದು ಬೆಳವಣಿಯೆ ಬಗ್ಗೆ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications