For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಪವರ್‌ಗೆ ಪಿಸಿಬಿ ಕಕ್ಕಾಬಿಕ್ಕಿ: ವಿಜೇತ ತಂಡಕ್ಕೆ ಪ್ರಶಸ್ತಿ ನೀಡಲು ಬಾರದ ಆತಿಥೇಯರು

ಚಾಂಪಿಯನ್ಸ್ ಟ್ರೋಫಿ ಇತಿಹಾಸದ ಪುಟ ಸೇರಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಟೀಮ್ ಇಂಡಿಯಾ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಭಾರತ 4 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಟೀಮ್ ಇಂಡಿಯಾ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಈ ವೇಳೆ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಒಂದೇ ಆ ಒಬ್ಬ ವ್ಯಕ್ತಿಯ ಅನುಪಸ್ಥಿತಿ.

ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಿತ್ತು. ಆದರೆ ಭಾರತ, ಪಾಕ್‌ಗೆ ಪ್ರವಾಸವನ್ನು ಬೆಳೆಸಲು ಹಿಂದೇಟು ಹಾಕಿತು. ಹೀಗಾಗಿ ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯನ್ನು ಹೈಬ್ರೀಡ್‌ ಮಾದರಿಯಲ್ಲಿ ನಡೆಸಲಾಗಿತ್ತು, ಹೀಗಾಗಿ ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಿತು. ಉಳಿದ ಏಳು ತಂಡಗಳು ಪಾಕ್‌ನಲ್ಲಿ ಪಂದ್ಯವನ್ನು ಆಡಿದವು. ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರಶಸ್ತಿ ಗೆದ್ದಾಗ ಸ್ಟೇಜ್‌ ಮೇಲೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಅಧಿಕಾರಿಗಳು ಇಲ್ಲದೆ ಇರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು.

Rohit Sharma-Led India Wins Champions Trophy PCB Officials Absent from Presentation Ceremony

ಪಿಸಿಬಿ ಗೈರೇಕೆ?

ಭಾರತ ತಂಡ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ (ಪಿಸಿಬಿ)ಯ ಯಾವೊದೇ ಒಬ್ಬ ಅಧಿಕಾರಿ ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ಕಾಣಿಸಿ ಕೊಳ್ಳದೇ ಇರುವುದು ಭಾರೀ ಸದ್ದು ಮಾಡುತ್ತಿದೆ. ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ಹೆಸರನ್ನು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸೇರಿಸಲಾಗಿತ್ತು. ಆದರೆ ಇವರ ಅನುಪಸ್ಥಿತಿ ಹಲವು ಪ್ರಶ್ನೆಗಳನ್ನು ಏಳುವಂತೆ ಮಾಡಿವೆ. ಇವರ ಈ ನಡೆಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೋಯಿಬ್ ಅಖ್ತರ್ ತೀವ್ರವಾಗಿ ತರಾಟೆಗೊಂಡೊದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿರುವ ಶೋಯಿಬ್ ಅಖ್ತರ್‌, "ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ವಿಚಿತ್ರ ಎಂದರೆ ಆಯೋಜಿತ ದೇಶದ ಯಾರೊಬ್ಬ ಪ್ರತಿನಿಧಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇರಲಿಲ್ಲ. ಆತಿಥೇಯ ದೇಶದ ಯಾವೊಬ್ಬ ಪ್ರತಿನಿಧಿ ಸ್ಟೇಜ್ ಮೇಲೆ ಇಲ್ಲದೇ ಇರುವುದು ನಿಹಕ್ಕೂ ಬೇಸರ ತರಿಸಿದೆ. ಪಿಸಿಬಿ ಅಧಿಕಾರಿಗಳು ಟ್ರೋಫಿ ಪ್ರಧಾನ ಸಮಾರಂಭದಿಂದ ಏಕೆ ದೂರ ಉಳಿದರು ಎಂಬುದನ್ನು ನಾನು ಉಹೀಸಲು ಕಷ್ಟ. ಐಸಿಸಿ ಬಿಗ್ ಈವೆಂಟ್‌ ನಾವೇ ಆಯೋಜಿಸಿ, ನಮ್ಮವರೇ ವೇದಿಕೆಯ ಮೇಲೆ ಇಲ್ಲದೇ ಇದ್ದಾಗ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಈ ಟ್ರೋಫಿಯ ವೇಳೆ ಐಸಿಸಿ ಚೇರ್‌ಮೆನ್‌ ಜಯ್‌ ಶಾ ಅವರನ್ನು ಭೇಟಿಯಾಗುವ ಹಲವು ಅವಕಾಶಗಳು ಪಿಸಿಬಿ ಅಧ್ಯಅಕ್ಷ ನಖ್ವಿ ಅವರಿಗೆ ಇದ್ದವು. ಆದರೆ ಈ ಬಗ್ಗೆ ಪಿಸಿಬಿ ಮನಸ್ಸು ಮಾಡಲೇ ಇಲ್ಲ. ದುಬೈನಲ್ಲಿ ಎಲ್ಲೂ ಪಿಸಿಬಿ ಅಧಿಕಾರಿಗಳು ಕಾಣಿಸಿಕೊಳ್ಳಲೇ ಇಲ್ಲ. ಇನ್ನು ಪಾಕ್‌ ತಂಡದ ದಿಗ್ಗಜ ವೇಗಿ ವಾಸಿಮ್ ಅಕ್ರಮ್ ಅನಾರೋಗ್ಯದ ಕಾರಣದಿಂದ ದುಬೈ ತಲುಪಲಿಲ್ಲ ಎಂದು ತಿಳಿದು ಬಂದಿದೆ.

Rohit Sharma-Led India Wins Champions Trophy PCB Officials Absent from Presentation Ceremony

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಅವರು ಗೈರಾದ ಬಗ್ಗೆ ವಾಸಿಮ್ ಅಕ್ರಮ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಮಾಹಿತಿಯಲ್ಲಿ ಬಹಿರಂಗಗೊಂಡಿದೆ. ಈ ವೇಳೆ ಪಿಸಿಬಿ ಅಧ್ಯಕ್ಷ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವಾಸಿಮ್ ಅಕ್ರಮ್ ತಿಲಿಸಿದ್ದಾರೆ. ಪಿಸಿಬಿ ಅಧಿಕಾರಿಗಳಾದ ಸುಮೇರ್ ಅಹ್ಮದ್ ಮತ್ತು ಉಸ್ಮಾನ್ ವಾಲಾ ದುಬೈ ತಲುಪಿದ್ದರು ಆದರೆ ಅವರು ವೇದಿಕೆಯ ಮೇಲೆ ಹೋಗಲಿಲ್ಲ ಎಂದು ಅಕ್ರಮ್ ಹೇಳಿದರು.

Story first published: Monday, March 10, 2025, 16:23 [IST]
Other articles published on Mar 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+