Rohit Sharma: "ಫಾರ್ಮ್ ಇಲ್ಲದೇ ಇರುವುದಕ್ಕೆ ತಂಡದಿಂದ ಹೊರಗುಳಿದಿದ್ದೇನೆ, ನಿವೃತ್ತಿ ಹೊಂದಿಲ್ಲ"
ಕಳೆದ ಕೆಲವು ದಿನಗಳಿಂದ ಟೀಮ್ ಇಂಡಿಯಾದ ಅಭಿಮಾನಿಗಳಲ್ಲಿ ಹಲವು ಗೊಂದಲಗಳು ಇದ್ದವು. ಈ ಎಲ್ಲ ಗೊಂದಲಗಳಿಗೆ ಶನಿವಾರ ಉತ್ತರ ಸಿಕ್ಕಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದನೇ ಟೆಸ್ಟ್ ವೇಳೆ ರೋಹಿತ್ ಶರ್ಮಾ ಈ ಬಗ್ಗೆ ತುಟಿ ಬಿಚ್ಚಿದ್ದಾರೆ. ಭೋಜನ ವಿರಾಮದ ವೇಳೆಗೆ ನಡೆಯುವ ಸಂವಾದದಲ್ಲಿ ರೋಹಿತ್ ಶರ್ಮಾ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ವೇಳೆ ಅವರು ತಮ್ಮ ನಿವೃತ್ತಿಯ ಬಗ್ಗೆಯೂ ಮಾತನಾಡಿದ್ದಾರೆ.
ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಎರಡನೇ ದಿನದ ಮೊದಲಾವಧಿಯಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಈ ವೇಳೆ ರೋಹಿತ್ ಶರ್ಮಾ ತಂಡದಿಂದ ಹೊರಗುಳಿದಿದ್ದು ಏಕೆ?, ಅವರು ನಿವೃತ್ತಿ ಪಡೆಯುತ್ತಾರಾ ಎಂಬೆಲ್ಲಾ ಪ್ರಶ್ನೆಗಳು ರೋಹಿತ್ ಉತ್ತರ ನೀಡಿದ್ದಾರೆ.

ತಂಡದಿಂದ ಹೊರಗುಳಿದಿದ್ದು ಏಕೆ?
ಎಲ್ಲರೂ ಈ ಬಗ್ಗೆ ಹಲವು ತರಹ ವ್ಯಾಖ್ಯಾನ ಮಾಡುತ್ತಿದ್ದಾರೆ. ಆದರೆ ನಾನು ತಂಡಕ್ಕೆ ಅಗತ್ಯ ಕಾಣಿಕೆ ನೀಡುವಲ್ಲಿ ವಿಫಲನಾಗಿದ್ದೆ. ಅಲ್ಲದೆ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದೆ. ಹೀಗಾಗಿ ನಾನೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಒಬ್ಬ ತಂಡದಿಂದ ಹೊರಗಿದ್ದರೆ ಇನ್ನೊಬ್ಬ ಉತ್ತಮ ಆಟಗಾರನಿಗೆ ಅವಕಾಶ ಸಿಗುತ್ತದೆ ಎಂಬ ಉದ್ದೇಶ ನನ್ನದಾಗಿದೆ. ಅಲ್ಲದೆ ತಂಡ ಗೆಲ್ಲುವುದು ಮುಖ್ಯವಾಗಿದೆ.
ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾ ಈ ಹಿಂದೆ ಅಮೋಘ ಪ್ರದರ್ಶನ ನೀಡಿದೆ. ಕಳೆದ ಎರಡು ಪ್ರವಾಸದಲ್ಲಿ ನಾವು ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿದ್ದೇವೆ. ಈ ಬಾರಿಯೂ ಸರಣಿ ಗೆಲ್ಲದೇ ಇದ್ದರೂ ಸಮಬಲ ಸಾಧಿಸುವ ಅವಕಾಶ ಇದೆ. ಹೀಗಾಗಿ ಹಿಂದೆ ಸರಿದಿದ್ದೇನೆ. ಭೋಜನ ವಿರಾಮದ ವೇಳೆ ಸ್ಟಾರ್ ನೆಟ್‌ವರ್ಕ್ ನಡೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಶ್ರಾಂತಿ ಪಡೆದಿದ್ದಿರೋ, ಕೂರಿಸಲಾಗಿದೆಯಾ ಹೇಗೆ?
ನೋಡಿ ತಂಡದಲ್ಲಿ ನಡೆಯುವ ವಿಚಾರಗಳು ಸೂಕ್ಷ್ಮವಾಗಿರುತ್ತವೆ. ಯಾರು ನನಗೆ ಹೊರಗೆ ಕುಳಿತುಕೊಳ್ಳುವಂತೆ ಸೂಚಿಸಿಲ್ಲ. ಬದಲಿಗೆ ಇದು ನನ್ನ ವೈಯಕ್ತಿಕ ನಿರ್ಧಾರವಾಗಿತ್ತು. ನಾನೇ ತಂಡದಿಂದ ಹೊರಗುಳಿದಿದ್ದೇನೆ. ಯಾರು ಏನಾದ್ರೂ ವ್ಯಾಖ್ಯಾನ ಮಾಡಿದರೆ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.
ತಂಡದಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದು ಯಾವಾಗ?
ಮೆಲ್ಬೋರ್ನ್ ಬಿಟ್ಟಾಗ ಈ ಬಗ್ಗೆ ನನಗೆ ಯಾವುದೇ ಯೋಚನೆ ಇರಲಿಲ್ಲ. ಆದರೆ ಸಿಡ್ನಿಗೆ ಬರುತ್ತಿದ್ದಂತೆ ಈ ವಿಚಾರ ನನ್ನ ತಲೆಗೆ ಬಂದಿತು. ಅಲ್ಲದೆ ಹೊಸ ವರ್ಷದ ಮುನ್ನ ದಿನ ತಂಡದ ಕೋಚ್‌ಗೆ ಹಾಗೂ ಮ್ಯಾನೇಜ್ಮೆಂಟ್‌ಗೆ ಈ ನಿರ್ಧಾರ ತಿಳಿಸುವುದು ಬೇಡ ಎಂದೇ ಒಂದು ದಿನ ಬಿಟ್ಟು ತಿಳಿಸಿದ್ದೇನೆ. ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರುವುದಕ್ಕೆ ನಾನು ತಂಡದಿಂದ ಹೊರಗುಳಿದಿದ್ದೇನೆ.
ಮುಂದಿನ ಹಾದಿ ಹೇಗಿರಲಿದೆ?
ನಾನು ಮೈದಾನದಲ್ಲಿ ಬೆರವು ಹರಿಸುವೆ. ಆರು ತಿಂಗಳ ಬಳಿಕ ಪರಿಸ್ಥಿತಿಗಳು ಹೇಗಿರಲಿವೆ ಎಂಬ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ನನ್ನ ಮೇಲೆ ನನಗೆ ವಿಶ್ವಾಸವಿದೆ. ನಾನು ಮತ್ತೆ ಲಯಕ್ಕೆ ಬಂದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವೆ. ನನ್ನ ಬಗೆ ಯಾರೇ ಏನೇ ಹೇಳಿದರು, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಏನು ಮಾಡಬೇಕು ಎಂದು ತಿಳಿದಿದೆ. ನಾನು ಸಿಡ್ನಿ ಟೆಸ್ಟ್‌ನಿಂದ ಹೊರಗುಳಿದಿರಬಹುದು ಆದರೆ ನಿವೃತ್ತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications