IND vs AUS Test: ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಇನಿಂಗ್ಸ್ ಆರಂಭಿಸುವುದು ಯಾರು? ಒಂದೇ ಸ್ಲಾಟ್‌ಗೆ ಮೂರು ಆಟಗಾರರ ಕಣ್ಣು
ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡ ಬಳಿಕ ರೋಹಿತ್ ಪಡೆ ಆಸ್ಟ್ರೇಲಿಯಾ ಪ್ರವಾಸ ಕೈ ಗೊಳ್ಳಲಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಯ ಮೊದಲ ಪಂದ್ಯ ನವೆಂಬರ್ 22ರಿಂದ ಆರಂಭವಾಗಲಿದೆ. ಈ ಟೆಸ್ಟ್ ಸರಣಿಗೆ ಮುನ್ನ ಟೀಮ್ ಇಂಡಿಯಾದ ಟೆನ್ಷನ್ ಶುರುವಾರಗಿದೆ. ನಾಯಕ ಟೀಮ್ ಇಂಡಿಯಾದ ಜೊತೆ ಆಸೀಸ್ ಪ್ರವಾಸ ಬೆಳೆಸಿದರೂ, ಮೊದಲ ಟೆಸ್ಟ್‌ನಲ್ಲಿ ಇವರು ಆಡುವುದು ಡೌಟ್ ಎಂದು ಹೇಳಲಾಗುತ್ತಿದೆ.
ರೋಹಿತ್ ಶರ್ಮಾ ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನ. ಇವರ ಅನುಪಸ್ಥಿತಿಯಲ್ಲಿ ಆರಂಭಿಕ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿವುದು ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಈ ಒಂದು ಸ್ಥಾನದ ಮೇಲೆ ಮೂರು ಆಟಗಾರರು ಕಣ್ಣು ನೆಟ್ಟಿದ್ದಾರೆ. ಈ ಸರಣಿಯಲ್ಲಿ ಆರಂಭಿಕರಾಗಿ ಕಾಣಕ್ಕೆ ಇಳಿಯುವುದು ಯಾರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಬಾರ್ಡರ್ ಗವಾಸ್ಕರ್ ಸರಣಿಯು ಟೀಮ್ ಇಂಡಿಯಾಗೆ ಮಹತ್ವದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್‌ಗೆ ಅರ್ಹತೆ ಪಡೆಯುವ ಕನಸು ಕಾಣುತ್ತಿರುವ ಟೀಮ್ ಇಂಡಿಯಾ 4 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಅನಿವಾರ್ಯತೆ ಇದೆ. ಹೀಗಾಗಿ ಬಲಿಷ್ಠ ತಂಡವನ್ನು ಕಣಕ್ಕೆ ಇಳಿಸುವ ಪ್ಲ್ಯಾನ್ ಟೀಮ್ ಇಂಡಿಯಾ ಮಾಡಿಕೊಂಡಿದೆ. ರೋಹಿತ್ ಶರ್ಮಾ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಬಗ್ಗೆ ಅನುಮಾನವಿದ್ದು, ಬಿಸಿಸಿಐ ಜೊತೆಗೆ ಟೀಮ್ ಮ್ಯಾನೇಜ್‌ಮೆಂಟ್‌ಗೆ ಇದು ತಿಳಿದಿದೆ.
ಒಂದೇ ಸ್ಲಾಟ್‌ಗೆ ಮೂರು ಆಟಗಾರರ ಕಣ್ಣು
ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಅನುಪಸ್ಥಿತಿಯನ್ನು ತುಂಬಲು ಮೂವರು ಆಟಗಾರರು ಸನ್ನದ್ಧರಾಗಿದ್ದಾರೆ. ರಣಜಿ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿರುವ ಅಭಿಮನ್ಯು ಈಶ್ವರನ್ ಅವರನ್ನು ಈ ಸರಣಿಗೆ ಆಯ್ಕೆ ಮಾಡಲಾಗಿದೆ. ಇವರು ಆಸ್ಟ್ರೇಲಿಯಾ ಎ ವಿರುದ್ಧದ ಅನಧಿಕೃತ ಟೆಸ್ಟ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದರೂ, ಇವರ ಮೇಲೆ ನಾಯಕ ಹಾಗೂ ಕೋಚ್‌ನ ಮೊದಲ ಆಯ್ಕೆಯ ಪ್ಲೇಯರ್.
ಇನ್ನು ಟೀಮ್ ಇಂಡಿಯಾದ ಎರಡನೇ ಆಯ್ಕೆಯ ಆರಂಭಿಕ ಆಟಗಾರನಾಗಿ ಕೆಎಲ್ ರಾಹುಲ್ ಕಾಣಿಸಿಕೊಳ್ಳಬಹುದು. ಇವರಿಗೆ ಭಾರತ ಎ ತಂಡದ ಪರ ಆಡುವ ಅವಕಾಶವನ್ನು ನೀಡಲಾಯಿತು. ಆದರೆ ಇವರು ಸಿಕ್ಕ ಅವಕಾಶವನ್ನು ಕೈ ಚೆಲ್ಲಿದರೂ ಸಹ ವಿದೇಶಿ ಪಿಚ್‌ಗಳಲ್ಲಿ ಆಡಿದ ಅನುಭವದ ಆಧಾರದ ಮೇಲೆ ಇವರಿಗೂ ಮಣೆ ಹಾಕಬಹುದು.

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಪ್ರವಾಸದಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಬಯಸದೇ ಇದ್ದರೆ, ಇನ್ ಫಾರ್ಮ್ ಬ್ಯಾಟರ್ ಶುಭಮನ್ ಗಿಲ್‌ಗೆ ಬಡ್ತಿ ನೀಡಬಹುದು. ಶುಭಮನ್ ಗಿಲ್ ಭಾರತ ತಂಡದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಆಟಗಾರ. ಅಲ್ಲದೆ ಇವರಿಗೆ ಇನಿಂಗ್ಸ್ ಆರಂಭಿಸಿದ ಅನುಭವವವೂ ಇದೆ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಬಯಸಿದ್ದೇ ಆದಲ್ಲಿ ಇವರಿಗೆ ಆರಂಭಿಕ ಕಣಕ್ಕೆ ಇಳಿಸಿದರೂ ಯಾವುದೇ ಅಚ್ಚರಿ ಅಲ್ಲವೇ ಅಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications