ಇದೇ ಡಿಸೆಂಬರ್ 19ರಂದು ದುಬೈನಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿಗೂ ಮುನ್ನ ಎಲ್ಲರ ತಲೆಯನ್ನು ಕೆಡಿಸುತ್ತಿರುವ ಪ್ರಶ್ನೆ, ಮುಂದಿನ ಐಪಿಎಲ್ ಸೀಜನ್‌ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ನಾಯಕನಾಗಿ ಮುಂದುವರೆಯುತ್ತಾರೆಯೇ ಎಂಬುದು.
ಏಕೆಂದರೆ, ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಮರಳಿ ಎಲ್ಲಾ ನಗದು ವ್ಯಾಪಾರಕೊಂಡಿದ್ದು, ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆಯೇ ಎಂಬುದು ದೊಡ್ಡ ಕುತೂಹಲವಾಗಿದೆ.
ಇನ್ನು ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ಬಿಟ್ಟರೆ ಬೇರೆ ಯಾವ ತಂಡದ ಜೊತೆ ಆಡಲು ಬಯಸುತ್ತಾರೆ ಎಂಬುದರ ಹಳೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ಹೊರತುಪಡಿಸಿ ನೀವು ಯಾವ ತಂಡದ ಭಾಗವಾಗಲು ಬಯಸುತ್ತೀರಿ ಎಂದು ಕೇಳಲಾಗಿದೆ. ಇದಕ್ಕೆ ರೋಹಿತ್ ಶರ್ಮಾ ""ಈಡನ್ ಗಾರ್ಡನ್ ನನ್ನ ನೆಚ್ಚಿನ ಮೈದಾನ. ಈಡನ್ ಗಾರ್ಡನ್‌ನಲ್ಲಿ ಸಾಕಷ್ಟು ನೆನಪುಗಳು ಇವೆ. ಹಾಗಾಗಿ ಕೆಕೆಆರ್,'' ಎಂದು ಅಚ್ಚರಿಯ ಉತ್ತರ ನೀಡಿದ್ದಾರೆ.
ಅದೇನೆಂದರೆ, ಮುಂಬೈ ಇಂಡಿಯನ್ಸ್ ತಂಡದ ಹೊರತಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಲು ಬಯಸುವುದಾಗಿ ರೋಹಿತ್ ಶರ್ಮಾ ಸ್ಪಷ್ಟಪಡಿಸಿದ್ದರು. ಇದೀಗ ಅದೇ ಹಳೇ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದಾರೆ. 2013ರಲ್ಲಿ ಮುಂಬೈ ಮೊದಲ ಪ್ರಶಸ್ತಿ ಗೆದ್ದಿತ್ತು. ಇದಾದ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ 2015 ಮತ್ತು 2017ರಲ್ಲಿ ಪ್ರಶಸ್ತಿ ಜಯಿಸಿತ್ತು.
ನಂತರ ಒಂದು ವರ್ಷದ ಅಂತರದ ನಂತರ ಮುಂಬೈ ಸತತ ಎರಡು ಬಾರಿ ಚಾಂಪಿಯನ್ ಆಯಿತು. ಅಂದರೆ, 2019 ಮತ್ತು 2020ರಲ್ಲಿ ಮುಂಬೈ ಮತ್ತೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕಳೆದ ಮೂರು ವರ್ಷಗಳು ಮುಂಬೈ ಇಂಡಿಯನ್ಸ್‌ಗೆ ಉತ್ತಮವಾಗಿರಲಿಲ್ಲ. ಇದರಲ್ಲಿ 2022ರ ಐಪಿಎಲ್ ಮುಂಬೈ ಇಂಡಿಯನ್ಸ್‌ಗೆ ದುಃಸ್ವಪ್ನಕ್ಕಿಂತ ಕಡಿಮೆಯಿಲ್ಲ. ಐಪಿಎಲ್ 2022ರಲ್ಲಿ ಮುಂಬೈ ಇಂಡಿಯನ್ಸ್ 14 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಗೆದ್ದು 10ನೇ ಸ್ಥಾನದಲ್ಲಿತ್ತು.
ಐಪಿಎಲ್‌ನ ಮೊದಲ ಸೀಸನ್ ಅಂದರೆ 2008ರಲ್ಲಿ ಪದಾರ್ಪಣೆ ಮಾಡಿದ ಆಟಗಾರರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ಹಿಟ್ ಮ್ಯಾನ್ ಇದುವರೆಗೆ ಟೂರ್ನಿಯಲ್ಲಿ 243 ಪಂದ್ಯಗಳನ್ನು ಆಡಿದ್ದಾರೆ. ಇಷ್ಟು ಪಂದ್ಯಗಳ 238 ಇನ್ನಿಂಗ್ಸ್‌ಗಳಲ್ಲಿ ಅವರು 29.58ರ ಸರಾಸರಿ ಮತ್ತು 130.05ರ ಸ್ಟ್ರೈಕ್ ರೇಟ್‌ನಲ್ಲಿ 6211 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 1 ಶತಕ ಮತ್ತು 42 ಅರ್ಧ ಶತಕಗಳನ್ನು ಗಳಿಸಿದ್ದಾರೆ.