ಮುಂದಿನ ಏಕದಿನ ವಿಶ್ವಕಪ್ ತಂಡಕ್ಕೆ ನನ್ನನ್ನು ಪರಿಗಣಿಸಿ: ಆಡಿಲೇಡ್‌ನಲ್ಲಿ ರೋಹಿತ್ 73
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರೋಹಿತ್ ಶರ್ಮಾ ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಬಳಿಕ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿದರು. ಈ ವೇಳೆ ರೋಹಿತ್ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ಈ ಸರಣಿಗಾಗಿ ಟೀಮ್ ಇಂಡಿಯಾದ ಮಾಜಿ ನಾಯಕ ಭರ್ಜರಿ ತಯಾರಿಯಿಂದಲೇ ಪ್ರವಾಸ ಆರಂಭಿಸಿದ್ದರು. ಐಪಿಎಲ್‌ನಿಂದ ಈ ವರೆಗೆ ಮೈದಾನಕ್ಕೆ ಇಳಿಯದ ರೋಹಿತ್, ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸಿದರು. ಅಲ್ಲದೆ ತಮ್ಮ ತೂಕದಲ್ಲಿ ಇಳಿಕೆ ಮಾಡಿಕೊಂಡು ಫಿಟ್ ಆಗಿ ಕಾಣಿಸಿಕೊಂಡರು.
ಆಸ್ಟ್ರೇಲಿಯಾ ಸರಣಿಯಲ್ಲಿ ರೋಹಿತ್ ಶರ್ಮಾ ಆಡಿದ ಮೊದಲ ಏಕದಿನ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದರು. ಆದರೆ ಆಡಿಲೇಡ್‌ನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಸ್ಥಿರ ಪ್ರದರ್ಶನ ನೀಡಿ ಆರ್ಭಟಿಸಿದರು. ಈ ವೇಳೆ ತಮ್ಮ ನೈಜ್ಯ ಆಟವನ್ನು ಆಡಿದ ರೋಹಿತ್, ಆಡಿಲೇಡ್‌ನಲ್ಲಿ ಬೆಸ್ಟ್ ಇನಿಂಗ್ಸ್ ಕಟ್ಟಿದರು. ರೋಹಿತ್ 97 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 73 ರನ್ ಸಿಡಿಸಿ ಆರ್ಭಟಿಸಿದರು. ಇದು ರೋಹಿತ್ ಶರ್ಮಾ ಅವರ ಏಕದಿನ ವೃತ್ತಿ ಬದುಕಿನ 59ನೇ ಅರ್ಧಶತಕವಾಗಿದೆ.

ಆಸ್ಟ್ರೇಲಿಯಾ ಮೈದಾನದಲ್ಲಿ ವಿರಾಟ್ ಮತ್ತೊಂದು ದಾಖಲೆ ಬರೆದರು. ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಯಾರೊಬ್ಬ ಬ್ಯಾಟರ್ ಮಾಡದ ಸಾಧನೆಯನ್ನು ರೋಹಿತ್ ಮಾಡಿ ಬೀಗಿದರು. ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ 1,000 ಏಕದಿನ ರನ್‌ಗಳನ್ನು ಗಳಿಸಿ ಸಾಧನೆ ಮಾಡಿದರು. ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ 1,000 ಏಕದಿನ ರನ್‌ಗಳನ್ನು ತಲುಪಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.
ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳು
ರೋಹಿತ್ ಶರ್ಮಾ - 1,006
ವಿರಾಟ್ ಕೊಹ್ಲಿ - 802
ಸಚಿನ್ ತೆಂಡೂಲ್ಕರ್ - 740
ಎಂಎಸ್ ಧೋನಿ - 684
ಶಿಖರ್ ಧವನ್ - 517
ರೋಹಿತ್ ಶರ್ಮಾ 2015ರಿಂದ ಈ ವರೆಗೆ ಬಾರಿಸಿದ ಅರ್ಧಶತಕಗಳಲ್ಲಿ ಗುರುವಾರ ಬಾರಿಸಿದ್ದು ನಿಧಾನಗತಿಯ ಅರ್ಧಶತಕವಾಗಿದೆ. ಇವರು ತಮ್ಮ ಅರ್ಧಶತಕವನ್ನು ಪೂರೈಸಲು ರೋಹಿತ್ ಶರ್ಮಾ 74 ಎಸೆತಗಳನ್ನು ತೆಗೆದುಕೊಂಡರು. ರೋಹಿತ್ ಇದೇ ಎರಡನೇ ಬಾರಿಗೆ 100ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್‌ನಲ್ಲಿ ಅರ್ಧಶತಕ ಬಾರಿಸಿದರು. ಇವರು ಮೂರನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಅವರೊಂದಿಗೆ 118 ರನ್‌ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ನೆರವಾದರು. ಇದಕ್ಕೂ ಮೊದಲು ರೋಹಿತ್, ಬಾಂಗ್ಲಾದೇಶ ವಿರುದ್ಧ 2025ರಲ್ಲಿ 70 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.
ರೋಹಿತ್ ಶರ್ಮಾ ತಮ್ಮ ಇನಿಂಗ್ಸ್ ಮೂಲಕ ಏಕದಿನ ವಿಶ್ವಕಪ್ ತಂಡದಲ್ಲಿ ತಮ್ಮನ್ನು ಪರಿಗಣಿಸುವಂತೆ ಬ್ಯಾಟಿಂಗ್ ಮಾಡಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಅವರು ಏಕದಿನ ವಿಶ್ವಕಪ್ ಆಡುವ ಕನಸು ಕಾಣುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications