ರೋಹಿತ್ -ರಿತಿಕಾ ಮದುವೆ ಡಿಸೆಂಬರ್ 13ಕ್ಕೆ ಫಿಕ್ಸ್
ಮುಂಬೈ, ಅಕ್ಟೋಬರ್, 31: ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ನಂತರ ಇದೀಗ ಆರಂಭಿಕ ರೋಹಿತ್ ಶರ್ಮಾ ಹೊಸ ಇನಿಂಗ್ಸ್ ಆಡಲು ಸಿದ್ಧರಾಗಿದ್ದಾರೆ.
ದ್ವಿಶತಕ ವೀರ ರೋಹಿತ್ ಶರ್ಮಾ ತಮ್ಮ ಪ್ರೇಯಸಿ ರಿತಿಕಾ ಅವರನ್ನು ಡಿಸೆಂಬರ್ 13 ರಂದು ಮದುವೆಯಾಗಲಿದ್ದಾರೆ. ಸದ್ಯ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಆಡಲು ಸಿದ್ಧರಾಗಿದ್ದಾರೆ. ನವೆಂಬರ್ 5 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.[ಇದೀಗ ನಿನ್ನ ಸರದಿ ಜೀವನದ 'ಸ್ಟ್ರೇಟ್ ಡ್ರೈವ್' ಮಾಡು ಯುವಿ!]

ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ರಾಷ್ಟ್ರೀಯ ತಂಡದ ಆಟಗಾರರು ಮುಂಬೈ ನಲ್ಲಿ ನಡೆಯುವ ವಿವಾಹಕ್ಕೆ ಸಾಕ್ಷಿಯಾಗಲಿದ್ದಾರೆ. ಡಿಸೆಂಬರ್ 7 ಕ್ಕೆ ದಕ್ಷಿಣಾ ಆಫ್ರಿಕಾದ ವಿರುದ್ಧದ ಟೆಸ್ಟ್ ಸರಣಿ ಅಂತ್ಯವಾಗಲಿದೆ. ಇದಾದ ಮೇಲೆ ಭಾರತೀಯ ಆಟಗಾರರಿಗೆ ಮದುವೆಯ ಸಂಭ್ರಮ.
ಈ ವರ್ಷದ ಏಪ್ರಿಲ್ ನಲ್ಲೇ ರೋಹಿತ್ ಮತ್ತು ರಿತಿಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹರ್ಭಜನ್ ಮದುವೆಯ ನಂತರ ಇದೀಗ ರೋಹಿತ್ ಮದುವೆಗೆ ಸಿದ್ಧತೆ ಆರಂಭವಾಗಿದೆ.
ಟಿ-20 ಮತ್ತು ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿರುವ ಭಾರತ ತಂಡ ತವರಿನಲ್ಲಿ ಟೆಸ್ಟ್ ವಿಜಯ ಸಾಧಿಸುವ ನಿರೀಕ್ಷೆಯಲ್ಲಿದೆ. ಒಟ್ಟು ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications