ಡಾಕ್ಟರ್ ಅಪಾಯಿಂಟ್‌ಮೆಂಟ್ ಬಿಟ್ಟು ತನ್ನ ಪ್ರೀತಿಯ ಮಗನನ್ನು ಕಾಣಲು ಬಂದ ರೋಹಿತ್ ಶರ್ಮಾ ತಾಯಿ; ವಿಡಿಯೋ ವೈರಲ್
ಜುಲೈ 5 ಶುಕ್ರವಾರ, ಟಿ20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾ ಗುರುವಾರ ಭಾರತಕ್ಕೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು. ಇದಾದ ನಂತರ ಮುಂಬೈನಲ್ಲಿ ವಿಕ್ಟರಿ ಪರೇಡ್ ನಡೆಸಿದ ಟೀಮ್ ಇಂಡಿಯಾಕ್ಕೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದರು.
ವಿಕ್ಟರಿ ಪರೇಡ್ ನಡೆಸಿದ ಬಳಿಕ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾಕ್ಕೆ ಗೌರವಾರ್ಥವಾಗಿ ಅದ್ಧೂರಿ ಅಭಿನಂದನಾ ಸಮಾರಂಭವನ್ನು ನಡೆಸಲಾಯಿತು. ಇವೆಲ್ಲದರ ನಡುವೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ವೀಡಿಯೊದಲ್ಲಿ, ಕ್ಯಾಪ್ಟನ್ ರೋಹಿತ್ ತನ್ನ ತಾಯಿ ಪೂರ್ಣಿಮಾ ಶರ್ಮಾ ಅವರನ್ನು ಭೇಟಿಯಾಗುತ್ತಿರುವುದನ್ನು ಕಾಣಬಹುದು. ರೋಹಿತ್ ಶರ್ಮಾ ಮೇಲೆ ತಾಯಿ ಪ್ರೀತಿಯ ಮಳೆಗರೆದಿರುವ ಬೆಲೆ ಕಟ್ಟಲಾರದ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾದ ಅಭಿಮಾನಿಗಳು ರೋಹಿತ್ ಶರ್ಮಾ ಅವರನ್ನು ಜೋರಾಗಿ ಹುರಿದುಂಬಿಸಿದ್ದರು. ಇದೇ ವೇಳೆ ರೋಹಿತ್ ಶರ್ಮಾ ಅವರ ತಾಯಿ ಕೂಡ ವಾಂಖೆಡೆ ಸ್ಟೇಡಿಯಂ ತಲುಪಿ ತನ್ನ ಮಗನನ್ನು ಭೇಟಿಯಾಗಲು ಬಹಳ ಉತ್ಸುಕರಾಗಿದ್ದರು.
ರೋಹಿತ್ ತಮ್ಮ ತಾಯಿ ಅವರನ್ನು ಭೇಟಿಯಾಗುತ್ತಿದ್ದಂತೆ ಪೂರ್ಣಿಮಾ ಮಗನ ಮೇಲೆ ಸಣ್ಣ ಮಗುವಿನಂತೆ ಪ್ರೀತಿಯನ್ನು ಧಾರೆ ಎರೆದರು.
ವರದಿಗಳ ಪ್ರಕಾರ, ಪೂರ್ಣಿಮಾ ಶರ್ಮಾ ಅವರು ವೈದ್ಯರ ಬಳಿಗೆ ಹೋಗಬೇಕಾಗಿತ್ತು. ಆದರೆ ಅವರು ವೈದ್ಯರೊಂದಿಗಿನ ಅಪಾಯಿಂಟ್‌ಮೆಂಟ್ ಅನ್ನು ಬಿಟ್ಟು ತನ್ನ ಪ್ರೀತಿ ಮಗನನ್ನು ಭೇಟಿಯಾಗಲು ಮತ್ತು ಜನರ ಪ್ರೀತಿ ಮತ್ತು ಭಾವನೆಗಳನ್ನು ಗೌರವಾರ್ಥವಾಗಿ ನೋಡಲು ವಾಂಖೆಡೆ ಸ್ಟೇಡಿಯಂಗೆ ಬಂದಿದ್ದರು.
ಮತ್ತೊಂದೆಡೆ ಈ ಭಾವನಾತ್ಮಕ ವೀಡಿಯೊವನ್ನು ಟೀಮ್ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ರೋಹಿತ್ ಶರ್ಮಾ ಅಭಿಮಾನಿಗಳೂ ಭಾವುಕರಾಗಿದ್ದಾರೆ.
ವಿಶ್ವಕಪ್ ಗೆಲುವಿನ ಬಳಿಕ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಟಿ20 ವಿಶ್ವಕಪ್ 2024ರ ಫೈನಲ್ ರೋಹಿತ್ ಅವರ ಚುಟುಕು ಕ್ರಿಕೆಟ್ ವೃತ್ತಿಜೀವನದ ಕೊನೆಯ ಪಂದ್ಯವಾಗಿತ್ತು.
ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಪ್ರದರ್ಶನ
ಟೀಮ್ ಇಂಡಿಯಾ ಪರ ಆರಂಭಿಕ ಬ್ಯಾಟರ್ ಆಗಿ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದ್ದರು. ರೋಹಿತ್ 36.71 ಸರಾಸರಿ ಮತ್ತು 156.7 ರ ಅತ್ಯುತ್ತಮ ಸ್ಟ್ರೈಕ್ ರೇಟ್‌ನಲ್ಲಿ 257 ರನ್‌ಗಳನ್ನು ಹೊಡೆದಿದ್ದರು. ಜೊತೆಗೆ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು.
ರೋಹಿತ್ ಆಸ್ಟ್ರೇಲಿಯಾ ವಿರುದ್ಧ ಅಂತಿಮ ಸೂಪರ್-8 ಪಂದ್ಯದಲ್ಲಿ (41 ಎಸೆತಗಳಲ್ಲಿ 92 ರನ್) ಮತ್ತು ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ (39 ಎಸೆತಗಳಲ್ಲಿ 57 ರನ್) ಅಬ್ಬರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications