Rohit Sharma: ಬೇಡವಾದ ದಾಖಲೆಯ ಸನಿಹದಲ್ಲಿ ರೋಹಿತ್ ಶರ್ಮಾ
ಈ ಬಾರಿಯ ಐಪಿಎಲ್ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಆರಂಭವಾಗಲಿದೆ. ಈ ಮೆಗಾ ಲೀಗ್‌ನಲ್ಲಿ ವಿಶ್ವದ ಸೂಪರ್ ಸ್ಟಾರ್ ಆಟಗಾರರು ಭಾಗವಹಿಸಲಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಕಾದಾಟ ನಡೆಸಲಿವೆ. ಭಾನುವಾರ ಮುಂಬೈ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಫೈಟ್ ನಡೆಯಲಿದೆ. ಈ ವೇಳೆ ಹಲವು ಸ್ಟಾರ್ ಆಟಗಾರರು ಹಲವು ದಾಖಲೆಗಳನ್ನು ನಿರ್ಮಿಸಲಿದ್ದಾರೆ. ರೋಹಿತ್ ಶರ್ಮಾ ಸಹ ಈ ಬಾರಿ ಹಲವು ದಾಖಲೆಗಳನ್ನು ನಿರ್ಮಿಸಲಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಭರವಸೆಯ ಬ್ಯಾಟರ್ ರೋಹಿತ್ ಶರ್ಮಾ, ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಇತ್ತೀಚಿಗೆ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದ್ದರು. ಈಗ ಇವರು ಇದೇ ಫಾರ್ಮ್‌ನ್ನು ಐಪಿಎಲ್‌ನಲ್ಲಿ ಮುಂದುವರೆಸುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಈ ಬಾರಿ ಮುಂಬೈ ತಂಡದ ಪರ ಆರಂಭಿಕರಾಗಿ ಅಬ್ಬರಿಸುವ ಇರಾದೆ ರೋಹಿತ್ ಅವರದ್ದಾಗಿದೆ.

ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ಮತ್ತೊಂದು ಬೇಡವಾದ ದಾಖಲೆಯನ್ನು ಬರೆಯುವ ಹತ್ತಿರದಲ್ಲಿದ್ದಾರೆ. ರೋಹಿತ್ ಶರ್ಮಾ ಐಪಿಎಲ್ 2008 ರಿಂದ ಈ ಲೀಗ್‌ನಲ್ಲಿ ಆಡುತ್ತಿದ್ದಾರೆ. ಅವರು ಐಪಿಎಲ್‌ನಲ್ಲಿ ಅನೇಕ ದಾಖಲೆಗಳನ್ನು ಹೊಂದಿದ್ದಾರೆ. ಆದರೆ ಅವರ ಮುಂದೆ ಒಂದು ದಾಖಲೆ ಇದೆ, ಅದನ್ನು ಅವರು ಎಂದಿಗೂ ತಮ್ಮ ಹೆಸರಿನಲ್ಲಿ ನೋಂದಾಯಿಸಲು ಬಯಸುವುದಿಲ್ಲ.
ಮ್ಯಾಕ್ಸ್‌ವೆಲ್, ಕಾರ್ತಿಕ್ ನಂಬರ್ 1
ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟ್ ಆದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಆಗಬಹುದು. ಪ್ರಸ್ತುತ ಈ ದಾಖಲೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ. ಈ ಇಬ್ಬರೂ ಸ್ಟಾರ್ ಆಟಗಾರರು ಐಪಿಎಲ್‌ನಲ್ಲಿ 18 ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ರೋಹಿತ್ ಶರ್ಮಾ ಇದುವರೆಗೆ ಆಡಿರುವ 257 ಪಂದ್ಯಗಳಲ್ಲಿ 18 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ರೋಹಿತ್ ಶರ್ಮಾ ಇನ್ನೆರಡು ಬಾರಿ ಶೂನ್ಯಕ್ಕೆ ಔಟಾದರೆ. ಇನ್ನೇರಡು ಬಾರಿ ರೋಹಿತ್ ಶೂನ್ಯ ಸಂಪಾದಿಸಿದ್ರೆ ಈ ದಾಖಲೆ ಸಹ ಇವರ ಪಾಲಾಗುತ್ತದೆ. ಗ್ಲೇನ್ ಮ್ಯಾಕ್ಸ್‌ವೆಲ್ ಸಹ ಈ ಬಾರಿ ಪಂಜಾಬ್ ಪರ ಆಡಲಿದ್ದು, ಈ ವೇಳೆ ಅವರು ಮತ್ತೆ ಸೊನ್ನೆಗೆ ಔಟ್ ಆದಲ್ಲಿ ದಾಖಲೆ ಮುಂದೆ ಸಾಗುತ್ತದೆ.

ರೋಹಿತ್ ಶರ್ಮಾ ಐಪಿಎಲ್‌ನ ಅತ್ಯಂತ ಅನುಭವಿ ಆಟಗಾರ. ಐಪಿಎಲ್ ನಲ್ಲಿ 257 ಪಂದ್ಯಗಳನ್ನು ಆಡಿದ್ದು, 6,628 ರನ್ ಗಳಿಸಿದ್ದಾರೆ. ಇದ್ರಲ್ಲಿ 2 ಶತಕ ಹಾಗೂ 43 ಅರ್ಧಶತಕಗಳು ಸೇರಿವೆ. ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಡೆಕ್ಕನ್ ಚಾರ್ಜಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದಾರೆ. ಇವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 5 ಐಪಿಎಲ್ ಟ್ರೋಫಿಗಳನ್ನು ಗೆದ್ದುಕೊಂಡಿದೆ.
ಅತಿ ಹೆಚ್ಚು ಬಾರಿ ಸೊನ್ನೆಗೆ ಔಟ್ ಆದ ಆಟಗಾರರು
ಗ್ಲೇನ್ ಮ್ಯಾಕ್ಸ್‌ವೆಲ್, 129 ಪಂದ್ಯ, 18 ಬಾರಿ
ದಿನೇಶ್ ಕಾರ್ತಿಕ್, 257 ಪಂದ್ಯ, 18 ಬಾರಿ
ರೋಹಿತ್ ಶರ್ಮಾ, 257 ಪಂದ್ಯ, 17 ಬಾರಿ
ಪಿಯೂಷ್ ಚಾವ್ಲಾ, 192 ಪಂದ್ಯ, 16 ಬಾರಿ
ಸುನಿಲ್ ನರೈನ್, 177 ಪಂದ್ಯ, 16 ಬಾರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications