ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರು ಟೆಸ್ಟ್ ಪಂದ್ಯಗಳ ಸರಣಿ ಅಕ್ಟೋಬರ್ 16 ರಿಂದ ಆರಂಭವಾಗಲಿದೆ. ಈ ಟೆಸ್ಟ್‌ಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಅಂಗಳ ಆತಿಥ್ಯ ವಹಿಸಲಿದೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣು ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಮೇಲೆ ಇರಲಿದೆ. ಈ ವೇಳೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಬಿಗ್ ರೆಕಾರ್ಡ್ ಮಾಡುವ ಕನಸಿನಲ್ಲಿದ್ದಾರೆ.
ಇತ್ತೀಚಿಗೆ ಭಾರತದಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಬಿಗ್ ಇನಿಂಗ್ಸ್ ಕಟ್ಟಿ ಅಬ್ಬರಿಸಲಿಲ್ಲ. ಆದರೆ ಅವರು ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುವಲ್ಲಿ ಶ್ರಮಿಸಿದ್ದಾರೆ. ಯಾವುದೇ ಫಾರ್ಮೆಟ್ ಇದ್ದರೂ ಹಿಟ್ ಮ್ಯಾನ್ ತಮ್ಮದೇ ಶೈಲಿಯಲ್ಲಿ ಬ್ಯಾಟ್ ಮಾಡಿ ಆರ್ಭಟಿಸುತ್ತಾರೆ. ಬಾಂಗ್ಲಾ ಬೌಲರ್‌ಗಳನ್ನು ರೋಹಿತ್ ಇದೇ ರೀತಿ ಕಾಡಿದ್ದರು. ಈಗ ನ್ಯೂಜಿಲೆಂಡ್ ತಂಡವನ್ನು ಕಾಡಲು ಸನ್ನದ್ಧರಾಗಿದ್ದಾರೆ.

ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾಗೆ ಇತಿಹಾಸ ನಿರ್ಮಿಸುವ ಅವಕಾಶ ಇದೆ. ಈ ಸಾಧನೆಯನ್ನು ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಯಾರು ಮಾಡಿಲ್ಲ. ಯಾರು ಮಾಡದ ಸಾಧನೆಯನ್ನು ಮಾಡಲು ರೋಹಿತ್ ತುದಿಗಾಲಿನಲ್ಲಿ ನಿಂತಿದ್ದಾರೆ.
ಹಿಟ್‌ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ, ಬಾಂಗ್ಲಾ ವಿರುದ್ಧ ಕಟ್ಟಿದ ಚಿಕ್ಕ ಚಿಕ್ಕ ಇನಿಂಗ್ಸ್‌ನಲ್ಲೂ ಅಭಿಮಾನಿಗಳನ್ನು ರಂಜಿಸಿದ್ದರು. ಸಿಕ್ಸರ್‌ಗಳನ್ನು ಬಾರಿಸಿ ಫ್ಯಾನ್ಸ್‌ಗೆ ಹಬ್ಬದೂಟವನ್ನು ಉಣಬಡಿಸಿದ್ದರು. ಇದೇ ಶೈಲಿಯ ಬ್ಯಾಟಿಂಗ್‌ನ್ನು ರೋಹಿತ್ ನ್ಯೂಜಿಲೆಂಡ್ ವಿರುದ್ಧವೂ ನಡೆಸುವ ಆಸೆಯನ್ನು ಹೊಂದಿದ್ದಾರೆ. ಇನ್ನು ಮೊದಲ ಟೆಸ್ಟ್ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿದ್ದು, ಬ್ಯಾಟಿಂಗ್ ಸ್ವರ್ಗದಲ್ಲಿ ಆರ್ಭಟಿಸಲು ತಯಾರಾಗಿದ್ದಾರೆ.

ರೋಹಿತ್ ಶರ್ಮಾ ಅವರಿಗೆ ಟೆಸ್ಟ್‌ನಲ್ಲಿ ಸಿಕ್ಸರ್‌ಗಳ ಶತಕ ಬಾರಿಸಲು ಇನ್ನು ಕೇವಲ 13 ಸಿಕ್ಸರ್ ಅವಶ್ಯಕತೆ ಇದೆ. ರೋಹಿತ್ ಅವರ ಸದ್ಯದ ಫಾರ್ಮ್ ನೋಡಿದರೆ ಇದು ಅಸಾಧ್ಯ ಎಂದು ಏನು ಅನಿಸುವುದಿಲ್ಲ. ಈ ಮೂಲಕ ಟೆಸ್ಟ್‌ನಲ್ಲಿ 100 ಸಿಕ್ಸರ್ ಬಾರಿಸುವ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಸಾಧನೆಯನ್ನು ಭಾರತದ ಪರ ಇನ್ನು ಯಾವೊಬ್ಬ ಬ್ಯಾಟರ್ ಮಾಡಿಲ್ಲ.
ಈ ಸರಣಿಯಲ್ಲಿ ರೋಹಿತ್ ಶರ್ಮಾ ಐದು ಸಿಕ್ಸರ್ ಬಾರಿಸುತ್ತಿದ್ದಂತೆ, ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ 91 ಸಿಕ್ಸರ್ ಬಾರಿಸಿದ ಹಿರಿಮೆಯನ್ನು ಹೊಂದಿದ್ದಾರೆ. ವಿಶ್ವ ಕ್ರಿಕೆಟ್‌ನ ಟೆಸ್ಟ್ ಫಾರ್ಮೆಟ್‌ನಲ್ಲಿ 100ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಕೀರ್ತಿ ಬೆನ್ ಸ್ಟೋಕ್ಸ್, ಬ್ರೆಡಂ ಮೆಕಲಂ, ಆಡಂ ಗಿಲ್‌ಕ್ರಿಸ್ಟ್ ಅವರಿಗೆ ಸಲ್ಲುತ್ತದೆ. ಈ ಸಾಲಿಗೆ ಸೇರಲು ರೋಹಿತ್ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇವರ ಈ ಕನಸು ಸರಣಿಯ ಯಾವ ಪಂದ್ಯದಲ್ಲಿ ಸಾಕಾರವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.