ಟಿ20 ದಾಖಲೆಗಾಗಿ ಧೋನಿ, ರೈನಾ ಸಾಲಲ್ಲಿ ಸೇರಲಿರುವ ರೋಹಿತ್ ಶರ್ಮಾ

ಬೆಂಗಳೂರು, ಫೆಬ್ರವರಿ 26: ಬೆಂಗಳೂರಿನಲ್ಲಿ ಫೆಬ್ರವರಿ 27ರಂದು ನಡೆಯುವ ಭಾರತ vs ಆಸ್ಟ್ರೇಲಿಯಾ ದ್ವಿತೀಯ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ದಾಖಲೆಯೊಂದಕ್ಕೆ ಕಾರಣರಾಗಲಿದ್ದಾರೆ. 300 ಟಿ20 ಪಂದ್ಯಗಳನ್ನಾಡಿದ ಮೂರನೇ ಭಾರತೀಯ ಆಟಗಾರನಾಗಿ ರೋಹಿತ್ ಗುರುತಿಸಿಕೊಳ್ಳಲಿದ್ದಾರೆ.
ಸದ್ಯ ರೋಹಿತ್ ಒಟ್ಟು 299 ಟಿ20 ಪಂದ್ಯಗಳನ್ನಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಮೈದಾನಕ್ಕಿಳಿದರೆ ಅಲ್ಲಿಗೆ 300 ಟಿ20 ಪಂದ್ಯಗಳ ಸಾಧನೆ ಆಗಿಹೋಗಲಿದೆ. ಈ ಯಾದಿಯಲ್ಲಿ ಮುಂಚೂಣಿಯಲ್ಲಿರುವ ಎಂಎಸ್ ಧೋನಿ 301, ಸುರೇಶ್ ರೈನಾ 300 ಪಂದ್ಯಗಳ ಸಾಧನೆ ಹೊಂದಿದ್ದಾರೆ.
ಭಾರತ ಪರ ರೋಹಿತ್ ಒಟ್ಟು 94 ಅಂತಾರಾಷ್ಟ್ರೀಯ ಟಿ20 ಮತ್ತು 94 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ (ಒಟ್ಟು 188). ಇನ್ನುಳಿದ ಟಿ20 ಪಂದ್ಯಗಳು ಭಾರತ 'ಎ' ತಂಡದ ಪರ ಮತ್ತು ದೇಸೀ ಕ್ರಿಕೆಟ್‌ನಲ್ಲಿ ಆಡಿದಂತವು. ವಿಶ್ವದಲ್ಲಿ ಒಟ್ಟು 14 ಆಟಗಾರರು 300ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಮುಂಚೂಣಿಯಲ್ಲಿರುವ ವೆಸ್ಟ್ ಇಂಡೀಸ್ ದೈತ್ಯ ಕೀರನ್ ಪೊಲಾರ್ಡ್ 451 ಪಂದ್ಯಗಳ ದಾಖಲೆ ಹೊಂದಿದ್ದಾರೆ.
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ವಿಶಾಖಪಟ್ನಂನಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಉತ್ತಮ ಪ್ರದರ್ಶನ ತೋರಿರಲಿಲ್ಲ. ಈ ಪಂದ್ಯವನ್ನು ಭಾರತ 3 ವಿಕೆಟ್‌ಗಳಿಂದ ಸೋತು ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 1-0ಯ ಹಿನ್ನಡೆ ಅನುಭವಿಸಿತ್ತು. ಆದರೆ ಬೆಂಗಳೂರು ಪಂದ್ಯವನ್ನು ಗೆದ್ದು ಸರಣಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಭಾರತವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications