ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ or ರೋಹಿತ್, ಸೀಮಿತ ಓವರ್‌ಗಳಲ್ಲಿ ಯಾರು ಬೆಸ್ಟ್: ಬ್ರಾಡ್ ಹಾಗ್ ಆಯ್ಕೆ ಯಾರು ನೋಡಿ!

Rohit Sharma Or Virat Kohli? Brad Hogg Picks Better White-ball Cricketer

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಬ್ಯಾಟ್ಸ್‌ಮನ್‌ಗಳು. ಅದರಲ್ಲೂ ಸೀಮಿತ ಓವರ್‌ಗಳಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಹೀಗಾಗಿ ಸೀಮಿತ ಓವರ್‌ಗಳಲ್ಲಿ ಯಾರು ಬೆಸ್ಟ್ ಎಂಬ ಚರ್ಚೆಗಳೂ ನಡೆಯುತ್ತಿದೆ.

ಇದಕ್ಕೆ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಜ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಮಧ್ಯೆ ಅತ್ಯುತ್ತಮ, ಸೀಮಿತ ಓವರ್‌ಗಳ ಬ್ಯಾಟ್ಸ್‌ಮನ್ ಯಾರು ಎಂಬ ಪ್ರಶ್ನೆಗೆ ಬ್ರಾಡ್ ಹಾಗ್ ಉತ್ತರವನ್ನು ನೀಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾರತ ಉದ್ದೇಶಪೂರ್ವಕವಾಗಿ ಸೋತಿತ್ತು: ಅಬ್ದುಲ್ ರಜಾಕ್ಇಂಗ್ಲೆಂಡ್ ವಿರುದ್ಧ ಭಾರತ ಉದ್ದೇಶಪೂರ್ವಕವಾಗಿ ಸೋತಿತ್ತು: ಅಬ್ದುಲ್ ರಜಾಕ್

ಇಬ್ಬರೂ ಕ್ರಿಕೆಟಿಗರು ತಂಡದಲ್ಲಿ ಬೇರೆ ಬೇರೆ ಜವಾಬ್ಧಾರಿಯನ್ನು ನಿರ್ವಹಿಸುತ್ತಿದ್ದಾರೆ. ಹಾಗಾಗಿ ಇಬ್ಬರ ಆಟವನ್ನು ತುಲನೆ ಮಾಡುವುದು ಕಷ್ಟ ಎಂದು ತಮ್ಮ ಆಯ್ಕೆಯನ್ನು ಹೇಳಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಕೂಡ ಟೀಮ್ ಇಂಡಿಯಾಗೆ ದೊಡ್ಡ ಕೊಡುಗೆಯನ್ನು ನೀಡುತ್ತಿದ್ದಾರೆ. ರನ್ ಹಸಿವು ಎಷ್ಟಿದೆ ಎಂದು ಪ್ರತಿ ಪಂದ್ಯದಲ್ಲೂ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಇಬ್ಬರು ಕ್ರಿಕೆಟಿಗರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು ಎಂಬುದಾದರೆ ನನ್ನ ಆಯ್ಕೆ ವಿರಾಟ್ ಕೊಹ್ಲಿ ಎಂದು ಹಾಗ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಬೃಹತ್ ರನ್ ಚೇಸಿಂಗ್ ಸಂದರ್ಭದಲ್ಲಿ ತಮ್ಮ ಸ್ಥಿರ ಪ್ರದರ್ಶನವನ್ನು ನೀಡುತ್ತಾರೆ. ಆದರೆ ಹೋಲಿಕೆ ಸರಿಯಲ್ಲ ಎಂದು ಹೇಳಿಕೊಂಡಿದ್ದಾರೆ.

ಬೌಲರ್ ಆಗಿ ವೃತ್ತಿ ಆರಂಭಿಸಿ ಬ್ಯಾಟ್ಸ್‌ಮನ್‌ ಆಗಿ ಮಿಂಚಿದ ಫೇಮಸ್ ಕ್ರಿಕೆಟರ್ಸ್ಬೌಲರ್ ಆಗಿ ವೃತ್ತಿ ಆರಂಭಿಸಿ ಬ್ಯಾಟ್ಸ್‌ಮನ್‌ ಆಗಿ ಮಿಂಚಿದ ಫೇಮಸ್ ಕ್ರಿಕೆಟರ್ಸ್

ಕ್ಷೇತ್ರ ನಿರ್ಬಂಧಗಳು ಕನಿಷ್ಠವಾಗಿದ್ದಾಗ ಹೊಸ ಬಾಲ್ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿಯಾಗಿರುವುದು ರೋಹಿತ್ ಶರ್ಮಾ ಪಾತ್ರ. ವಿರಾಟ್ ಕೊಹ್ಲಿ ಪಾತ್ರ ಇನ್ನಿಂಗ್ಸ್ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಮತ್ತು ಅವರು ಕೊನೆಯಲ್ಲಿ ಇದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಆದ್ದರಿಂದ ಅವರು ಒಬ್ಬರಿಗೊಬ್ಬರು ಪರಸ್ಪರ ಪೂರಕವಾಗಿರುತ್ತಾರೆ ಎಂದು ಬ್ರಾಡ್ ಹಾಗ್ ಯುಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.

Story first published: Friday, June 5, 2020, 15:16 [IST]
Other articles published on Jun 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X