Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜನತಾ ಕರ್ಫ್ಯೂ: ಮನೆಯಲ್ಲೇ ಕ್ರಿಕೆಟ್ ಆಡಲು ರೋಹಿತ್‌ಗೆ ಜೊತೆಯಾಗಿದ್ಯಾರು! ವಿಡಿಯೋ

Rohit Sharma Plays Indoor Cricket With Daughter Samaira During Janata Curfew

ಭಾನುವಾರ ಜನತಾ ಕರ್ಫ್ಯೂವನ್ನು ದೇಶಾದ್ಯಂತ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದು ವಿಶೇಷವಾಗಿತ್ತು. ಮನೆಯಿಂದ ಆಚೆ ಬಾರದೆ ಈ ಜನತಾ ಕರ್ಪ್ಯೂಗೆ ಸಾಮಾನ್ಯ ಜನರಿಂದ ಹಿಡಿದು ಎಲ್ಲಾ ಸೆಲೆಬ್ರಿಟಿಗಳು ಕೂಡ ಇದಕ್ಕೆ ಕೈ ಜೋಡಿಸಿದ್ದರು.

ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಕೂಡ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದರು. ಆದರೆ ರೋಹಿತ್ ಶರ್ಮಾ ಮನೆಯಲ್ಲೇ ವಿಶೇಷ ವ್ಯಕ್ತಿಯ ಜೊತೆಗೆ ಕ್ರಿಕೆಟ್ ಆಡಿ ಸಮಯವನ್ನು ಕಳೆದಿದ್ದಾರೆ. ಈ ಬಗ್ಗೆ ರೋಹಿತ್ ಶರ್ಮಾ ವಿಡಿಯೋವನ್ನು ಕೂಡ ಮಾಡಿದ್ದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಹೌದು, ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮಾಗೆ ಕ್ರಿಕೆಟ್‌ ಆಡಲು ಸಾಥ್ ನೀಡಿದ್ದು ಬೇರೆ ಯಾರೂ ಅಲ್ಲ, ರೋಹಿತ್ ಪುತ್ರಿ ಸಮೈರಾ. ಒಂದು ವರ್ಷ ಮೂರು ತಿಂಗಳ ಪುಟಾಣಿ ಸಮೈರಾ ಜೊತೆಗೆ ರೋಹಿತ್ ಶರ್ಮಾ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ.

View this post on Instagram

😍🙌

A post shared by Rohit Sharma (@rohitsharma45) on

ಪುಟ್ಟ ಪುಟ್ಟ ಹೆಜ್ಜೆಯನ್ನಿಡುವ ಸಮೈರಾ ಬ್ಯಾಟ್‌ ಹಿಡಿದರೆ ತಂದೆ ರೋಹಿತ್ ಶರ್ಮಾ ಪುಟಾಣಿ ಸಮೈರಾಳ ಕೈಯನ್ನು ಹಿಡಿದು ಬ್ಯಾಟ್‌ನಿಂದ ಅಲ್ಲಿದ್ದ ದೊಡ್ಡ ಚೆಂಡೊಂದಕ್ಕೆ ಬಾರಿಸುತ್ತಾರೆ. ಈ ಹೊಡೆತವನ್ನು ಸಮೈರಾ ಸಂಭ್ರಮಿಸುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಸದ್ಯ ಎಲ್ಲಾ ಕ್ರಿಕೆಟ್ ಟೂರ್ನಿಗಳೂ ರದ್ದಾಗಿದೆ. ಕ್ರಿಕೆಟ್ ತಾರೆಗಳು ಈ ಸಂದರ್ಭ ದಲ್ಲಿ ಮನೆಯಲ್ಲೇ ಇದ್ದು ಅಭಿಮಾನಿಗಳಿಗೆ ಕೊರೊನಾ ವೈರಸ್‌ನಿಂದ ರಕ್ಷಣೆ ಮಾಡಿಕೊಳ್ಳು ಮನೆಯಲ್ಲೇ ಇರುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ

Story first published: Monday, March 23, 2020, 12:58 [IST]
Other articles published on Mar 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+