ರೋಹಿತ್ ಮೈದಾನಕ್ಕೆ ಇಳಿದಾಯಿತು, ವಿರಾಟ್ ಇಳಿಯುವುದು ಯಾವಾಗ?
ಭಾರತದ ತಂಡದ ಸ್ಟಾರ್ ಆಟಗಾರರ ಭವಿಷ್ಯದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಟೀಮ್ಇಂಡಿಯಾದ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಭಾರತದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿ ಹಾಗೂ ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರರು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ಸ್ಟಾರ್ ಆಟಗಾರರು ರನ್ ಬರ ಅನುಭವಿಸಿದ್ದರಿಂದ ಟೀಕೆಗೆ ಗುರಿಯಾಗಿದ್ದಾರೆ.
ಟೀಕೆಗೆ ಗುರಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಎಲ್ಲರೂ ಮೆಚ್ಚುವಂತಹ ಕೆಲಸವನ್ನು ಮಾಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಬಿಸಿಸಿಐ ಬೇಗನೆ ಲಯ ಕಂಡು ಕೊಳ್ಳುವಂತೆ ಸೂಚನೆ ನೀಡಿದೆ. ಇಲ್ಲದೆ ಇದ್ದಲ್ಲಿ ಗೇಟ್ ಪಾಸ್ ನೀಡುವ ಎಚ್ಚರಿಕೆಯನ್ನು ನೀಡಿದೆ. ಇದರಿಂದ ಎಚ್ಚೆತ್ತುಕೊಂಡ ರೋಹಿತ್ ರಣಜಿ ಟ್ರೋಫಿ ಆಡಲು ಸಜ್ಜಾಗಿದ್ದಾರೆ.

ರೋಹಿತ್ ಅಭ್ಯಾಸ
ಮುಂಬೈನ ವಾಂಖೇಡೆ ಅಂಗಳದಲ್ಲಿ ರಣಜಿ ತಂಡ ಅಭ್ಯಾಸ ನಡೆಸಿತು. ಇದೇ ವೇಳೆ ರೋಹಿತ್ ಸಹ ಕಾಣಿಸಿಕೊಂಡರು. ಇದೇ ವೇಳೆ ರೋಹಿತ್ ತಮ್ಮ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿರುವುದನ್ನು ಮನಗೊಂಡು ಮಂಗಳವಾರ ಬೆಳಗ್ಗೆ ಗ್ರೌಂಡ್‌ಗೆ ಇಳಿದು, ಚಾಂಪಿಯನ್ಸ್ ಟ್ರೋಫಿಗೆ ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂಬೈ ರಣಜಿ ಟೂರ್ನಿಯ ಮುಂದಿನ ಪಂದ್ಯವನ್ನು ಜಮ್ಮು-ಕಾಶ್ಮಿರ್ ವಿರುದ್ಧ ಆಡಲಿದೆ. ಈ ತಂಡದಲ್ಲಿ ರೋಹಿತ್ ಶರ್ಮಾ ಸೇರುಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ ಇವರು ರಣಜಿ ತಂಡದೊಂದಿಗೆ ಅಭಯ್ಆಸ ನಡೆಸಿದರು. ಅಲ್ಲದೆ ಇವರು ರಣಜಿ ಆಡುವ ಬಗ್ಗೆ ಇನ್ನೇನು ಕೆಲವೇ ದಿನಗಳಲ್ಲಿ ಸ್ಪಷ್ಟವಾದ ಚಿತ್ರಣ ಸಿಗಲಿದೆ.

ರಣಜಿ ಟೂರ್ನಿ ಆಡ್ತಾರಾ ರೋಹಿತ್?
ರೋಹಿತ್ 2015ರಲ್ಲಿ ಕೊನೆಯ ಬಾರಿಗೆ ದೇಶೀಯ ರಣಜಿ ಟ್ರೋಫಿಯಲ್ಲಿ ಆಡಿ ಸೈ ಎನಿಸಿಕೊಂಡಿದ್ದರು. ಟೀಮ್ ಇಂಡಿಯಾದ ನಾಯಕ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರಿಂದ ತನ್ನ ಆಟವನ್ನು ಮತ್ತೆ ಲಯಕ್ಕೆ ಕಂಡು ಕೊಳ್ಳಲು ಅಭ್ಯಾಸ ನಡೆಸಿದ್ದಾರೆ.
ವಿರಾಟ್ ಆಡುವುದು ಯಾವಾಗ?
ಟೀಮ್ ಇಂಡಿಯಾ ಅಭಿಮಾನಿಗಳು ಈಗ ಒಂದು ಪ್ರಶ್ನೆಯನ್ನು ಎತ್ತಿದ್ದಾರೆ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ರಣಜಿ ಆಡಲು ಮುಂದಾದರೆ, ವಿರಾಟ್ ಕೊಹ್ಲಿ ಆಡುವುದು ಯಾವಾಗ ಎಂಬ ಪ್ರಶ್ನೆಗಳು ಎದ್ದಿವೆ. ಅಂದಹಾಗೆ ವಿರಾಟ್ ಕೊಹ್ಲಿ ಸಹ ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಇವರಿಗೂ ಬಿಸಿಸಿಐ ಎಚ್ಚರಿಕೆ ನೀಡಿದೆ. ವಿರಾಟ್ ಸಹ ಬಹು ದಿನಗಳಿಂದ ರಣಜಿ ಟ್ರೋಫಿಯಲ್ಲಿ ಆಡಿರಲಿಲ್ಲ. ಆದರೆ ಈಗ ಲಯವನ್ನು ಕಂಡು ಕೊಳ್ಳಲು ಅಲ್ಲದೆ, ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಿರಾಟ್, ಮೈದಾನಕ್ಕೆ ಇಳಿಯುವುದು ಅನಿವಾರ್ಯತೆ ಇದೆ. ಇನ್ನು ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿ ಲಯಕ್ಕೆ ಮರಳಬೇಕಿದೆ. ಇಲ್ಲದೆ ಇದ್ದಲ್ಲಿ ವಿರಾಟ್ ಕೊಹ್ಲಿಗೆ ಅವರಿಗೆ ಅವಮಾನ ಆಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications