Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾ ಕೋಚ್ ಆಗಿ ದ್ರಾವಿಡ್ ಆಯ್ಕೆ: ಹರ್ಷ ವ್ಯಕ್ತಪಡಿಸಿದ ರೋಹಿತ್ ಶರ್ಮಾ

Rohit Sharma reaction for Rahul Dravid appointment as coach We look forward to working with him
Dravid ಬಂದಿದ್ದಕ್ಕೆ Rohit Sharma ಫುಲ್ ಖುಷ್ | Oneindia Kannada

ಬಿಸಿಸಿಐ ಬುಧವಾರ ರಾತ್ರಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಹಾಲಿ ಕೋಚ್ ಆಗಿರುವ ರವಿ ಶಾಸ್ತ್ರಿ ಕಾರ್ಯಾವಧಿ ಈ ವಿಶ್ವಕಪ್‌ನ ಅಂತ್ಯಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ನೂತನ ಮುಖ್ಯ ಕೋಚ್ ಹುದ್ದೆಗೆ ಇತ್ತೀಚೆಗಷ್ಟೇ ರಾಹುಲ್ ದ್ರಾವಿಡ್ ಅರ್ಜಿ ಸಲ್ಲಿಸಿದ್ದರು. ಸ್ವತಃ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗಲು ಬಯಸಿದ್ದ ಕಾರಣ ದ್ರಾವಿಡ್ ಆಯ್ಕೆಯ ಬಗ್ಗೆ ಯಾವುದೇ ಅನುಮಾನಗಳು ಇರಲಿಲ್ಲ. ಇದನ್ನು ಬಿಸಿಸಿಐ ಅಧಿಕೃತಗೊಳಿಸಿದೆ. ಈ ಘೋಷಣೆಯ ನಂತರ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು ದ್ರಾವಿಡ್ ಆಯ್ಕೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

"ನಾವು ಅಫ್ಘಾನಿಸ್ತಾನದೊಂದಿಗೆ ಪಂದ್ಯದಲ್ಲಿ ಭಾಗಿಯಾದ ಕಾರಣದಿಂದಾಗಿ ನನಗೆ ಈ ಬಗ್ಗೆ ಮಾಹಿತಿಯಿಲ್ಲ. ರಾಹುಲ್ ದ್ರಾವಿಡ್ ಅವರಿಗೆ ನಾನು ಅಭಿನಂದನೆಯನ್ನು ತಿಳಿಸುತ್ತೇನೆ. ಮತ್ತೊಮ್ಮೆ ಟೀಮ್ ಇಂಡಿಯಾದಲ್ಲಿ ವಿಭಿನ್ನ ಸಾಮರ್ರ್ಥಯದ ತಂಡದೊಂದಿಗೆ ಸೇರಿಕೊಳ್ಳಲಿದ್ದಾರೆ. ಅವರೊಂದಿಗೆ ಕರ್ತವ್ಯ ನಿರ್ವಹಿಸಲು ನಾನು ಎದುರು ನೋಡಿತ್ತಿದ್ದೇನೆ" ಎಂದಿದ್ದಾರೆ ರೋಹಿತ್ ಶರ್ಮಾ.

"ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ಕಂಡ ಧೀಮಂತ ಆಟಗಾರ. ಭವಿಷ್ಯದಲ್ಲಿ ಅವರೊಂದಿಗೆ ಕರ್ತವ್ಯ ನಿರ್ವಹಿಸಲು ಸಂತಸವಾಗುತ್ತದೆ" ಎಂದಿದ್ದಾರೆ ರೋಹಿತ್ ಶರ್ಮಾ. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ 74 ರನ್ ಸಿಡಿಸಿ ಮಿಂಚಿದ್ದಾರೆ. ರೋಹಿತ್ ಶರ್ಮಾ ಅವರ ಈ ಪ್ರದರ್ಶಿನದಿಂದಾಗಿ ಟೀಮ್ ಇಂಡಿಯಾ ಅಫ್ಘಾನಿಸ್ತಾನದ ವಿರುದ್ಧ 66 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.

ಇನ್ನು ಟೀಮ್ ಇಂಡಿಯಾದ ಚುಟಕು ಕ್ರಿಕೆಟ್ ಮಾದರಿಯ ನಾಯಕತ್ವದಿಂದ ವಿರಾಟ್ ಕೊಹ್ಲಿ ಹಿಂದಕ್ಕೆ ಸರಿಯಲು ಬಯಸಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ ಟಿ20 ಮಾದರಿಯ ನಾಯಕನಾಗಿ ವಿರಾಟ್ ಕೊಹ್ಲಿಯ ಕೊನೆಯ ಟೂರ್ನಿಯಾಗಿರಲಿದೆ. ಹೀಗಾಗಿ ಮುಂದಿನ ಸರಣಿಗೆ ಹೊಸ ನಾಯಕನನ್ನು ಆಯ್ಕೆ ಮಾಡಲಿದೆ. ಟೀಮ್ ಇಂಡಿಯಾದ ಮುಂದಿನ ನಾಯಕನಾಗುವ ರೇಸ್‌ನಲ್ಲಿ ಅನುಭವಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ.

ಮತ್ತೊಂದೆಡೆ ಭಾರತದ ಮುಂದಿನ ಸರಣಿ ನ್ಯೂಜಿಲೆಂಡ್ ಜೊತೆಗೆ ಭಾರತದಲ್ಲಿ ಟಿ20 ಹಾಗೂ ಟೆಸ್ಟ್ ಸರಣಿ ಆಡುವ ಮೂಲಕ ನಡೆಯಲಿದ್ದು ಇದರಲ್ಲಿ ಟಿ20 ಸರಣಿಯಲ್ಲಿ ತಂಡದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧಧ ಟಿ20 ಸರಣಿಗೆ ಕೆಎಲ್ ರಾಹುಲ್ ಅವರನ್ನು ಹಂಗಾಮಿ ನಾಯಕನನ್ನಾಗಿ ನೇಮಿಸಿ ನಂತರ ಪೂರ್ಣ ಪ್ರಮಾಣದ ನಾಯಕನನ್ನು ಘೋಷಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿದೆ.

ಮತ್ತೊಂದೆಡೆ ಟೀಮ್ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ತಂಡದ ನಾಯಕತ್ವವನ್ನು ಮಾತ್ರವೇ ತೊರೆಯುವ ಘೋಷಣೆ ಮಾಡಿದ್ದರು. ಆದರೆ ಬಿಸಿಸಿಐ ಆಯ್ಕೆ ಮಾಡುವ ಮುಂದಿನ ನಾಯಕ ಟೀಮ್ ಇಂಡಿಯಾದ ಟಿ20 ಹಾಗೂ ಏಕದಿನ ತಮಡಕ್ಕೂ ನಾಯಕನಾಗಲಿದ್ದಾರೆ ಎಂಬ ಅಭಿಪ್ರಾಯಗಳು ಬಲವಾಗಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಗಳು ಲಭ್ಯವಾಗಬೇಕಿದೆ.

Story first published: Thursday, November 4, 2021, 13:53 [IST]
Other articles published on Nov 4, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+