Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್‌ ಕೊಹ್ಲಿ ಸ್ಟ್ರೈಕ್‌ ರೇಟ್‌ ಕುರಿತಾದ ಪ್ರಶ್ನೆಗೆ ರೋಹಿತ್‌ ಶರ್ಮಾ ಪ್ರತಿಕ್ರಿಯೆ ಏನು?

ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್‌ ಬ್ಯಾಟರ್ ವಿರಾಟ್‌ ಕೊಹ್ಲಿ ಉತ್ತಮವಾಗಿ ರನ್‌ ಕಲೆ ಹಾಕುತ್ತಿದ್ದಾರೆ. ಆದರೆ ವಿರಾಟ್‌ ಕೊಹ್ಲಿ ಅವರ ಸ್ಟ್ರೈಕ್‌ ರೇಟ್‌ ಬಗ್ಗೆ ಮಾತ್ರ ಚರ್ಚೆ ನಿಂತಿಲ್ಲ.

ಆನೇಕಕರು ಕೊಹ್ಲಿ ಸ್ಟ್ರೈಕ್‌ ರೇಟ್‌ ಕುರಿತು ಟೀಕೆ ಮಾಡಿದರೆ, ಇನ್ನೊಂದು ಬಳಗ ಕೊಹ್ಲಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಬೆಳವಣಿಗಳ ಮಧ್ಯೆ ಏಪ್ರಿಲ್‌ 30 ರಂದು, 2024ರ ಟಿ20 ವಿಶ್ವಕಪ್‌ ಟೂರ್ನಿಗೆ 15 ಸದಸ್ಯರ ಯುವ ಮತ್ತು ಅನುಭವಿಗಳ ಆಟಗಾರರ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ತಂಡದಲ್ಲಿ ರನ್ ಮಷಿನ್‌ ಖ್ಯಾತಿ ವಿರಾಟ್‌ ಕೊಹ್ಲಿ ಕೂಡ ಎಲ್ಲರ ನಿರೀಕ್ಷೆಯಂತೆ ಸ್ಥಾನಪಡೆದುಕೊಂಡಿದ್ದಾರೆ.

Rohit Sharma reacts to Virat Kohli strike rate

ಈ ಹಿನ್ನೆಲೆ ಭಾರತ ತಂಡ ನಾಯಕ ರೋಹಿತ್‌ ಶರ್ಮಾ ಹಾಗು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್‌ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಟಿ20 ವಿಶ್ವಕಪ್‌ನ ಭಾರತ ತಂಡದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ವಿರಾಟ್‌ ಕೊಹ್ಲಿ ಸ್ಟ್ರೈಕ್‌ ರೇಟ್‌ ನಗ್ಗೆ ರೋಹಿತ್‌ ಶರ್ಮಾ ಅವರಿಗೆ ಪ್ರಶ್ನೆ ಎದುರಾಯಿತು. ಆಗ ರೋಹಿತ್‌ ಶರ್ಮಾ ನಕ್ಕು ಸುಮ್ಮನಾಗಿದ್ದಾರೆ.

2021ರಲ್ಲಿ ಟೀಮ್‌ ಇಂಡಿಯಾ ನಾಯಕನಾಗಿದ್ದ ವಿರಾಟ್‌ ಕೊಹ್ಲಿ ಅವರಿಗೆ ಪ್ಲೇಯಿಂಗ್‌ 11 ನಿಂದ ರೋಹಿತ್‌ ಅವರನ್ನು ಕೈ ಬಿಡಲಾಗುತ್ತದೆಯೇ ಎಂದು ಮಾಧ್ಯಮಗಳು ಪ್ರಶ್ನೆ ಕೇಳಿದ್ದವು. ಈ ವೇಳೆ ಕೊಹ್ಲಿ ದೊಡ್ಡದಾಗಿ ನಕ್ಕಿದ್ದರು. ಇದೇ ರೀತಿಯಲ್ಲಿ ಇದೀಗ ರೋಹಿತ್‌ ಶರ್ಮ ನಕ್ಕಿದ್ದಾರೆ. ಈ ಎರಡನ್ನೂ ಸನ್ನಿವೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹೋಲಿಕೆ ಮಾಡುತ್ತಿದ್ದು, ಸಖತ್‌ ವೈರಲ್‌ ಆಗಿದೆ.

ಸ್ಟ್ರೈಕ್‌ ರೇಟ್‌ಗಿಂತ ಅನುಭವ ಮುಖ್ಯ :

ರೋಹಿತ್‌ ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌, ವಿರಾಟ್‌ ಕೊಹ್ಲಿ ಸ್ಟ್ರೈಕ್‌ ರೇರ್ಟ್ ವಿಷಯ ಎಂದು ನಾನು ಭಾವಿಸುವುದಿಲ್ಲ. ಅಂತರಾಷ್ಟ್ರೂಯಯ ಕ್ರಿಕೆಟ್‌ ಹಾಗು ಐಪಿಎಲ್‌ ಕ್ರಿಕೆಟ್‌ಗೂ ವ್ಯತ್ಯಾಸವಿದೆ. ನಾವು ಮುಂದೆ ಆಡುತ್ತಿರುವುದು ಅಂತರಾಷ್ಟ್ರೀಯ ಕ್ರಿಕೆಟ್‌. ಇದನ್ನು ತಿಳಿದು ತಯಾರಿ ಮಾಡಿಕೊಳ್ಳಬೇಕು. ವಿಶ್ವಕಪ್ ಎಂದಾಗ ಅದರ ಒತ್ತಡವೇ ಬೇರೆ ಇರುತ್ತದೆ. ಹೀಗಾಗಿ ಸ್ಟ್ರೈಕ್‌ ರೇಟ್‌ಗಿಂತ ಅನುಭವ ಮುಖ್ಯ ಎಂದು ತಿಳಿಸಿದ್ದಾರೆ.

Story first published: Friday, May 3, 2024, 13:10 [IST]
Other articles published on May 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+