Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸ್ಟ್ರೇಲಿಯಾ: ಜನವರಿ 3 ರಿಂದ ಅಭ್ಯಾಸ ಆರಂಭಿಸಲಿರುವ ರೋಹಿತ್ ಶರ್ಮಾ

Rohit Sharma ready to begin training from January 3 ahead of 3rd Test

ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಗೆ ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ತೆರಳಿದ್ದು ಜನವರಿ 3 ರಿಂದ ಅಭ್ಯಾಸವನ್ನು ಆರಂಭಿಸುವ ಸಾಧ್ಯತೆಯಿದೆ. ಸದ್ಯ ರೋಹಿತ್ ಶರ್ಮಾ ಸಿಡ್ನಿಯ ಎರಡು ಕೋಣೆಯ ಪಾರ್ಟ್‌ಮೆಂಟ್‌ನಲ್ಲಿದ್ದು ಕ್ವಾರಂಟೈನ್ ಅವಧಿಯನ್ನು ಪೂರೈಸುತ್ತಿದ್ದಾರೆ.

ಹದಿನಾಲ್ಕು ದಿನಗಳ ಕ್ವಾರಂಟೈನ್ ಪೂರೈಸಬೇಕಿರುವ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಈಗಾಲೇ ಆಸ್ಟ್ರೇಲಿಯಾ ತಲುಪಿದ್ದರೂ ಕೂಡ ಎರಡನೇ ಟೆಸ್ಟ್‌ಗೆ ಅಲಭ್ಯರಾಗುತ್ತಿದ್ದಾರೆ. ಆದರೆ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗೆ ರೋಹಿತ್ ಸೇವೆ ತಂಡಕ್ಕೆ ದೊರೆಯಲಿದೆ. ಹೀಗಾಗಿ ಅದಕ್ಕೆ ಮುನ್ನ ಶರ್ಮಾ ಸಿದ್ಧರಾಗಲಿದ್ದಾರೆ.

ಆಸ್ಟ್ರೇಲಿಯಾದ ನ್ಯೂಸೌಥ್ ವೇಲ್ಸ್ ರಾಜ್ಯದಲ್ಲಿ ಈಗ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಎರಡನೇ ಟೆಸ್ಟ್‌ನಲ್ಲಿ ಆಭಗಯಾಗಲಿರುವ ಹಿನ್ನೆಲೆಯಲ್ಲಿ ಡೇವಿಡ್ ವಾರ್ನರ್ ಹಾಗೂ ಶಾನ್ ಅಬಾಟ್ ಅವರನ್ನು ಕ್ರಿಕೆಟ್ ಆಸ್ಟ್ರೆಲಿಯಾ ನಿಗದಿಗಿಂತ ಮುನ್ನವೇ ಸಿಡ್ನಿಯಿಂದ ಮೆಲ್ಬೋರ್ನ್‌ಗೆ ಕಳುಹಿಸಿತ್ತು. ಆದರೆ ಬಿಸಿಸಿಐ ಕ್ವಾರಂಟೈನ್ ಅವಧಿಯ ಮಧ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಂಡಿಲ್ಲ.

ಮೂರನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಡೆಯಲಿದ್ದು ಜನವರಿ 7 ರಿಂದ ಆರಂಭವಾಗಲಿದೆ. ಆದರೆ ಕೊರೊನಾ ವೈರಸ್ ಆತಂಕ ಹೆಚ್ಚಾಗುತ್ತಿದೆ. ಆದರೆ ಮೂರನೇ ಟೆಸ್ಟ್ ಪಂದ್ಯವನ್ನು ಸಿಡ್ನಿಯಲ್ಲಿ ನಡೆಸಲು ನಾವು ಬದ್ಧವಾಗಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಈ ಮಧ್ಯೆ ಪರಿಸ್ಥಿತಿ ಬದಲಾಗಿ ಪಂದ್ಯ ಬೇರೆಡೆಗೆ ಬದಲಾಯಿಸುವ ಸಂದರ್ಭ ಬಂದರೆ ಬಿಸಿಸಿಐ ಕ್ರಿಕೆಟ್ ಆಸ್ಟ್ರೇಲಿಯಾ ಜೊತೆಗೆ ಚರ್ಚಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಿದೆ.

ಇನ್ನು ಮತ್ತೊಂದೆಡೆ ಎರಡನೇ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮೆಲ್ಬೋರ್ನ್ ಅಂಗಳದಲ್ಲಿ ಸೋಮವಾರ ಅಭ್ಯಾಸವನ್ನು ನಡೆಸಲು ಸಾಧ್ಯವಾಗಿಲ್ಲ. ಮಳೆ ಸ್ಥಿರವಾಗಿ ಸುರಿಯುತ್ತಿದ್ದ ಕಾರಣ ಟೀಮ್ ಇಮಡಿಯಾದ ಅಭ್ಯಾಸಕ್ಕೆ ಅಡ್ಡಿಯಾಗಿದೆ. ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 26 ಬಾಕ್ಸಿಂಗ್ ಡೇ ದಿನದಂದು ಆರಂಭವಾಗಲಿದೆ.

Story first published: Monday, December 21, 2020, 17:42 [IST]
Other articles published on Dec 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+