ಟೀಮ್ ಇಂಡಿಯಾ ಸೋಲಿಗೆ ಯಾರು ಕಾರಣ? ರೋಹಿತ್ ಶರ್ಮಾ ಹೇಳಿದ್ದೇನು?
ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡ ಸೋಲು ಕಂಡಿದೆ. ಈ ಮೂಲಕ ಟೀಂ ಇಂಡಿಯಾ 2-0 ಹಿನ್ನಡೆ ಸಾಧಿಸಿದೆ. ಪುಣೆ ಟೆಸ್ಟ್‌ನಲ್ಲಿ, ರೋಹಿತ್ ಪಡೆ ಹೀನಾಯ ಸೋಲು ಕಂಡಿದೆ. ಟೀಮ್ ಇಂಡಿಯಾ 2012ರ ಬಳಿಕ ತವರಿನಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿಯ ಸೋಲನ್ನು ಕಂಡಿದೆ. ಈ ಸೋಲು ರೋಹಿತ್ ಪಡೆಗೆ ಮುಖಭಂಗವಾಗಿದೆ.
ಬೆಂಗಳೂರು ಹಾಗೂ ಪುಣೆಯಲ್ಲಿ ಕಂಡಿರುವ ಟೆಸ್ಟ್ ಸೋಲು ಭಾರತಕ್ಕೆ ಹಿನ್ನಡೆ ಆಗಿದೆ. ಎರಡನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಬಳಿಕ ಹಲವು ದೊಡ್ಡ ಹೇಳಿಕೆ ನೀಡಿದ್ದಾರೆ. ಈ ಸೋಲಿಗೆ ಟೀಮ್ ಇಂಡಿಯಾ ಇಂಡಿಯಾ ಯಾವುದೇ ಆಟಗಾರನ ಹೊಣೆ ಹೊರಿಸಿಲ್ಲ. ಇದು ಇಡೀ ತಂಡದ ವೈಫಲ್ಯ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ರೋಹಿತ್ ಹೇಳಿದ್ದೇನು?
ನ್ಯೂಜಿಲೆಂಡ್ ವಿರುದ್ಧ 113 ರನ್ ಕಲೆ ಹಾಕಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಪ್ರದರ್ಶನ ನಿರಾಶಾದಾಯಕ ಎಂದು ತಿಳಿಸಿದ್ದಾರೆ. ತಂಡ ನಿರೀಕ್ಷಿಸಿದ ಪಂದ್ಯ ಇದಾಗಿರಲಿಲ್ಲ. ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ತಂಡವನ್ನು ಶ್ಲಾಘಿಸಿದ್ದಾರೆ. ತವರಿನಲ್ಲಿ ನಮ್ಮ ತಂಡಕ್ಕಿಂತ ಹೆಚ್ಚಾಗಿ ಪ್ರವಾಸಿ ತಂಡ ಉತ್ತಮ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಕೆಲವು ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ನಮ್ಮ ತಂಡ ವಿಫಲವಾಗಿದೆ. ನ್ಯೂಜಿಲೆಂಡ್ ವಿರುದ್ಧ ಸವಾಲಗಳನ್ನು ಮೆಟ್ಟಿ ನಿಲ್ಲುವಲ್ಲಿ ಟೀಮ್ ಇಂಡಿಯಾ ಎಡವಿದೆ ಎಂದು ರೋಹಿತ್ ತಿಳಿಸಿದ್ದಾರೆ.
ನ್ಯೂಜಿಲೆಂಡ್ ತಂಡದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಿದ್ದಾರೆ. ನಾವು 20 ವಿಕೆಟ್ ಪಡೆಯುವುದು ಟಾರ್ಗೆಟ್ ಆಗಿದ್ದೆ ಗುರಿಯಾಗಿತ್ತು. ನಮ್ಮ ಬ್ಯಾಟರ್‌ಗಳು ರನ್ ಕಲೆ ಹಾಕಬೇಕಿತ್ತು. ಎರಡನೇ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 250 ರನ್‌ಗಳ ಒಳಗೆ ಕಟ್ಟಿ ಹಾಕುವ ಗುರಿಯನ್ನು ಹೊಂದಲಾಗಿತ್ತು. ಈ ರನ್‌ಗಳನ್ನು ಸಹ ಗಳಿಸುವುದು ಸವಾಲಾಗಲಿದೆ ಎಂದು ನನಗೂ ಅರಿವಿತ್ತು. ನಾವು ಕಿವೀಸ್ ತಂಡವನ್ನು ಕಟ್ಟಿ ಹಾಕುವಲ್ಲಿ ಕೊಂಚ ಎಡವಿದ್ದೇವೆ ಎಂದು ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದ್ದಾರೆ.

ಪಂದ್ಯದ ಬಳಿಕ ರೋಹಿತ್ ಶರ್ಮಾ ಪಿಚ್ ಬಗ್ಗೆಯೂ ಮಾತನಾಡಿದ್ದಾರೆ. ಈ ಪಿಚ್ ಮೇಲೆ ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಒಂದು ವೇಳೆ ನಮ್ಮ ತಂಡ ಈ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇನ್ನಷ್ಟು ರನ್ ಕಲೆ ಹಾಕುವಲ್ಲಿ ಯಶಸ್ವಿ ಆಗಿದ್ದರೆ, ಫಲಿತಾಂಶ ಬೇರೆಯದ್ದೇ ಆಗಿತ್ತು. ಇನ್ನು ಮುಂಬೈನ ವಾಂಖೆಡೆಯಲ್ಲಿ ತಂಡ ಸ್ಥಿರ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಈ ಸೋಲಿಗೆ ಪೂರ್ತಿ ತಂಡ ಜವಾಬ್ದಾರಿ ಹೊರುತ್ತದೆ. ಕೇವಲ ಬ್ಯಾಟ್ಸ್‌ಮನ್ ಅಥವಾ ಬೌಲರ್‌ಗಳನ್ನು ಮಾತ್ರ ದೂಷಿಸುವ ವ್ಯಕ್ತಿಯಲ್ಲ ಎಂದಿದ್ದಾರೆ.
ಈ ಸರಣಿಯ ಮೂರನೇ ಟೆಸ್ಟ್ ಪಂದ್ಯ ನವೆಂಬರ್ 1 ರಿಂದ ನಡೆಯಲಿದೆ. ಪಂದ್ಯ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications