Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕನ್ನಡಿಗ ಸೇರಿದಂತೆ ಮೂವರು ಆಟಗಾರರು ನಾಯಕ ಸ್ಥಾನದ ಮೇಲೆ ಕಣ್ಣು: ಹೇಗಿದೆ ದಾಖಲೆ

ರೋಹಿತ್ ಶರ್ಮಾ ಬುಧವಾರ ಸಂಜೆ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ದದ ಸರಣಿ ಹಾಗೂ ಆಸ್ಟ್ರೇಲಿಯಾ ಪ್ರವಾಸದ ಸೋಲಿನ ಬಳಿಕ ಇವರ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು. ಈಗ ಈ ಎಲ್ಲ ಪ್ರಶ್ನೆಗಳಿಗೂ ಫುಲ್ ಸ್ಟಾಪ್ ಇಡಲಾಗಿದೆ. ರೋಹಿತ್‌ ಶರ್ಮಾ ಇನ್ನು ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಟೀಮ್ ಇಂಡಿಯಾ ಪರ ಕಣಕ್ಕೆ ಇಳಿಯಲಿದ್ದಾರೆ.

ಟೀಮ್ ಇಂಡಿಯಾದ ಯಶಸ್ವಿ ನಾಯಕರಲ್ಲಿ ರೋಹಿತ್ ಶರ್ಮಾ ಒಬ್ಬರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಧಮಾಕೆದಾರ್ ಪ್ರದರ್ಶನ ನೀಡದೇ ಇದ್ರೂ ಸಹ, ತಂಡವನ್ನು ಮುನ್ನಡೆಸಿದ ರೀತಿ ನಿಜಕ್ಕೂ ಶ್ಲಾಘನಿಯ. ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ 2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್ ಫೈನಲ್‌ನಲ್ಲಿ ಆಡಿ ಸೋಲು ಕಂಡಿತ್ತು. ಈ ಬಾರಿ ಟೀಮ್ ಇಂಡಿಯಾ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಈ ಬೆನ್ನಲ್ಲೆ ರೋಹಿತ್ ನಾಯಕತ್ವದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಈಗ ರೋಹಿತ್‌ ಬಿಳಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

Rohit Sharma Retires from Test Cricket KL Rahul Bumrah and Gill in Line for Captaincy

ಅಂದಹಾಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ರೇಸ್‌ನಲ್ಲಿ ಸದ್ಯ ಮೂವರು ಆಟಗಾರರು ಕಾಣಿಸಿಕೊಳ್ಳುತ್ತಾರೆ. ಕರ್ನಾಟಕದ ಸ್ಟಾರ್ ಆಟಗಾರರ ಸಹ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ರಾಹುಲ್‌ ಮೇಲೆ ಕಣ್ಣು

ಕನ್ನಡಿಗ ಕೆಎಲ್ ರಾಹುಲ್ ಸಹ ಕ್ಯಾಪ್ಟನ್‌ ರೇಸ್‌ನಲ್ಲಿರುವ ಆಟಗಾರ. ಇವರು ಈಗಾಗಲೇ ಟೀಮ್ ಇಂಡಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸುವ ಇರಾದೆಯನ್ನು ಹೊಂದಿದ್ದಾರೆ. ಇವರು ಈಗಾಗಲೇ 3 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಈ ವೇಳೆ ಭಾರತ 2 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಒಂದು ಪಂದ್ಯ ಸೋತಿದೆ. ಕೆಎಲ್ ರಾಹುಲ್‌ ಆರಂಭಿಕರಾಗಿಯೂ ತಂಡಕ್ಕೆ ನೆರವಾಗ ಬಲ್ಲ ಪ್ಲೇಯರ್ ಹೀಗಾಗಿ ಇವರ ಆಯ್ಕೆ ಸೂಕ್ತವಾಗಬಹುದು.

Rohit Sharma Retires from Test Cricket KL Rahul Bumrah and Gill in Line for Captaincy

ಜಸ್ಪ್ರಿತ್ ಬುಮ್ರಾ

ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್‌ ಜಸ್ಪ್ರಿತ್ ಬುಮ್ರಾ ಸಹ ಟೆಸ್ಟ್‌ ಕ್ಯಾಪ್ಟನ್‌ ರೇಸ್‌ನಲ್ಲಿದ್ದಾರೆ. ಇವರು ತಮ್ಮ ಬಿಗುವಿನ ದಾಳಿಯಿಂದ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು. ಇವರ ಯಾರ್ಕರ್‌ ಎಸೆತಗಳನ್ನು ಎದುರಿಸುವಲ್ಲಿ ಬ್ಯಾಟರ್‌ಗಳು ಸುಸ್ತು ಹೊಡೆಯುತ್ತಾರೆ. ಇವರು ಸಹ ಟೀಮ್ ಇಂಡಿಯಾವನ್ನು ಮೂರು ಟೆಸ್ಟ್‌ ಪಂದ್ಯಗಳಲ್ಲಿ ಮುನ್ನಡೆಸಿದ್ದು, ಈ ವೇಳೆ ತಂಡ ಕೇವಲ 1 ಪಂದ್ಯಗಳಲ್ಲಿ ಜಯ ದಾಖಲಿಸಿದೆ.

ಶುಭಮನ್‌ ಗಿಲ್‌

ನಾಯಕತ್ವದ ಹೊಸ ಕಂಟೆಡರ್‌ ಅಂದ್ರೆ ಅದು ಶುಭಮನ್‌ ಗಿಲ್. ಈಗಾಗಲೇ ಇವರು ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್‌ ಹಾಗೂ ಸೀಮಿತ ಓವರ್‌ಗಳಲ್ಲಿ ಕೆಲವು ಬಾರಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಆದರೆ ಇವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೇಗೆ ತಂಡವನ್ನು ಮುನ್ನಡೆಸುತ್ತಾರೋ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ಇವರಿಗೆ ಚಿಕ್ಕ ವಯಸ್ಸಿದ್ದು ಒಂದು ವೇಳೆ ಇವರಿಗೆ ನಾಯಕತ್ವ ನೀಡಿದರೆ ತಂಡಕ್ಕೆ ಬಹು ವರ್ಷ ಕಾಣಿಕೆ ನೀಡಬಲ್ಲರು ಎಂಬ ಮಾತುಗಳು ಕೇಳಿ ಬರುತ್ತಿವೆ.

Story first published: Thursday, May 8, 2025, 13:38 [IST]
Other articles published on May 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+