For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ನಲ್ಲಿ ಟೀಮ್ ಇಂಡಿಯಾ ಪರ ಇನಿಂಗ್ಸ್‌ ಆರಂಭಿಸುವುದು ಇವರೇ..

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇನ್ನು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಬರೀ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಅಂಗಳಕ್ಕೆ ಇಳಿಯಲಿದ್ದಾರೆ. ಈಗ ಅಭಿಮಾನಿಗಳಲ್ಲಿ ಮೂಡುತ್ತಿರುವ ಪ್ರಶ್ನೆ ಒಂದೇ. ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾದ ಪರ ಆರಂಭಿಕರಾಗಿ ಕಣಕ್ಕೆ ಇಳಿಯುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇದಕ್ಕೆ ಆ ಒಬ್ಬ ಪ್ಲೇಯರ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಟೀಮ್ ಇಂಡಿಯಾದ ಪರ ಕಳೆದ ಕೆಲವು ವರ್ಷಗಳಿಂದ ಆರಂಭಿಕರಾಗಿ ಕಾಣಿಸಿಕೊಂಡಿದ್ದರು. ಆದರೆ ಇವರ ಅನುಪಸ್ಥಿಯಲ್ಲಿ ಇಂಗ್ಲೆಂಡ್‌ ಫ್ಲೈಟ್ ಏರುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ರೋಹಿತ್ ಶರ್ಮಾ ಸ್ಥಾನದಲ್ಲಿ ದೇಶೀಯ ಟೂರ್ನಿಯಲ್ಲಿ ಮಿಂಚಿ, ಐಪಿಎಲ್‌ನಲ್ಲಿ ಅಬ್ಬರಿಸುತ್ತಿರುವ ಎಡಗೈ ಆಟಗಾರ ಕಣ್ಣು ನೆಟ್ಟಿದ್ದಾರೆ. ಅವರು ಐಪಿಎಲ್‌ನಲ್ಲಿ ನೀಡುತ್ತಿರುವ ಅಮೋಘ ಪ್ರದರ್ಶನ ಅವರನ್ನು ಇಂಗ್ಲೆಂಡ್‌ ಫ್ಲೈಟ್‌ ಏರುವಂತೆ ಮಾಡುವ ಸಾಧ್ಯತೆ ದಟ್ಟವಾಗಿದೆ. ರೋಹಿತ್ ಶರ್ಮಾ ಬದಲಿಗೆ ಸಾಯಿ ಸುದರ್ಶನ್ ಆರಂಭಿಕ ಆಟಗಾರನಾಗಿ ಆಡಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ.

Rohit Sharma Retires from Tests Sai Sudharsan Likely to Open for India in England Tour

ರೋಹಿತ್ ಸ್ಥಾನ ತುಂಬುವುದು ಯಾರು?

ರೋಹಿತ್‌ ಶರ್ಮಾ ನಿವೃತ್ತಿಯಾಗುವ ಮೊದಲೇ ಸಾಯಿ ಸುದರ್ಶನ್‌ ಅವರಿಗೆ ತಂಡದಲ್ಲಿ ಸ್ಥಾನ ಲಭಿಸುವುದು ಫಿಕ್ಸ್‌ ಎಂದಾಗಿತ್ತು. ಈ ವೇಳೆ ಇವರು ಇಂಗ್ಲೆಂಡ್‌ಗೆ ಹೋಗುವುದು ಕನ್ಫರ್ಮ್‌ ಎಂದು ಆಗಿತ್ತು. ಯಶಸ್ವಿ ಜೈಸ್ವಾಲ್‌, ರೋಹಿತ್ ಶರ್ಮಾ ಅವರಿಗೆ ಬ್ಯಾಕ್‌ ಅಪ್‌ ಓಪನರ್ ಆಗಿ ಸಾಯಿ ಸುದರ್ಶನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈಗ ಅವರು ಆರಂಭಿಕರಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಕೊಂಚ ಹೆಚ್ಚಾಗಿದೆ. ಸಾಯಿ ಸುದರ್ಶನ ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ, ಬಿಸಿಸಿಐ ಆಯ್ಕೆ ಸಮಿತಿಯ ಮನ ಗೆದ್ದಿದ್ದಾರೆ.

ರೋಹಿತ್ ಶರ್ಮಾ ಸ್ಥಾನವನ್ನು ತುಂಬಲು ನಾನು ರೇಡಿ ಎಂದು ಸಾಯಿ ಸುದರ್ಶನ್‌ ಸಾರಿದಂತೆ ಐಪಿಎಲ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸದ್ಯ ಆರಂಭಿಕರ ರೇಸ್‌ನಲ್ಲಿ ಇವರೇ ಮುಂಚೂಣಿಯನ್ನು ಕಾಯ್ದುಕೊಂಡಿದ್ದಾರೆ. ಈ ಸ್ಥಾನದ ಮೇಲೆ ಕೆಎಲ್ ರಾಹುಲ್‌ ಸಹ ಕಣ್ಣು ನೆಟ್ಟಿದ್ದಾರೆ. ಆದರೆ ಸಾಯಿ ಅವರು ಈ ಸ್ಥಾನದಲ್ಲಿ ಕಣಕ್ಕೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಇವರು ಭಾರತ ಎ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಕಳೆದ ವರ್ಷ ಭಾರತ ಎ ಪರ ಆಸ್ಟ್ರೇಲಿಯಾ ಎ ವಿರುದ್ಧ ಶತಕ ಬಾರಿಸಿ ತಮ್ಮ ಕ್ಷಮತೆಯನ್ನು ಸಾರಿ ಹೇಳಿದ್ದಾರೆ.

Rohit Sharma Retires from Tests Sai Sudharsan Likely to Open for India in England Tour

ಸದ್ಯ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ಸಾಯಿ ಸುದರ್ಶನ್‌ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿದ್ದಾರೆ. ಆಡಿರುವ 11 ಪಂದ್ಯಗಳಲ್ಲಿ ಸುದರ್ಶನ್‌ 46ರ ಸರಾಸರಿಯಲ್ಲಿ 509 ರನ್‌ ಸಿಡಿಸಿದ್ದಾರೆ. ಇನ್ನು ಇವರ ಬ್ಯಾಟಿಂಗ್‌ ಕಂಡು ಹಲವು ಮಾಜಿ ಆಟಗಾರರು ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ್ದಾರೆ.

Story first published: Sunday, May 11, 2025, 8:32 [IST]
Other articles published on May 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+