Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಡ್ನಿ ಟೆಸ್ಟ್: ನೆಟ್ ಅಭ್ಯಾಸದಲ್ಲಿ ನಿರತನಾದ ರೋಹಿತ್ ಶರ್ಮಾ: ವಿಡಿಯೋ

Rohit Sharma returns to the nets ahead of Sydney Test

ಟೀಮ್ ಇಂಡಿಯಾದ ಅನುಭವಿ ಆಟಗಾರ ರೋಹಿತ್ ಶರ್ಮಾ ಬುಧವಾರ ಟೀಮ್ ಇಂಡಿಯಾ ಟೆಸ್ಟ್ ತಂಡವನ್ನು ಸೇರಿಕೊಂಡಿದ್ದಾರೆ. ಸದ್ಯ ತಂಡ ಮೆಲ್ಬರ್ನ್‌ನಲ್ಲಿದ್ದು ಮೆಲ್ಬರ್ನ್‌ಗೆ ರೋಹಿತ್ ಶರ್ಮಾ ಕೂಡ ತೆರಳಿ ತಂಡವನ್ನು ಕೂಡಿಕೊಂಡಿದ್ದಾರೆ. ರೋಹಿತ್ ಶರ್ಮಾ ಹೊಸ ವರ್ಷದ ಮೊದಲ ದಿನ ಮೆಲ್ಬರ್ನ್ ಅಂಗಳದಲ್ಲಿ ಅಭ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ.

ಫಿಟ್‌ನೆಸ್ ಕೊರತೆಯ ಕಾರಣದಿಂದಾಗಿ ರೋಹಿತ್ ಶರ್ಮಾ ರೋಹಿತ್ ಶರ್ಮಾ ಎರಡು ವಾರಗಳ ಕಾಲ ಬೆಂಗಳೂರಿನ ಎನ್‌ಸಿಎನಲ್ಲಿ ಕಾಲ ಕಳೆದಿದ್ದರು. ಅದಾದ ಬಳಿಕ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದ ಅವರು ಎರಡು ವಾರಗಳ ಕಾಲ ಸಿಡ್ನಿಯ ಎರಡು ಬೆಡ್‌ರೂಮ್‌ಗಳ ಅಪಾರ್ಟ್‌ಮೆಂಟ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು. ಇದೀಗ ಅವರು ಮತ್ತೆ ತಂಡವನ್ನು ಕೂಡಿಕೊಂಡಿದ್ದಾರೆ.

ಬುಧವಾರ ಕ್ವಾರಂಟೂನ್ ಮುಗಿಸಿದ ಬಳಿಕ ರೋಹಿತ್ ಶರ್ಮಾ ಮೆಲ್ಬರ್ನ್‌ನಲ್ಲಿರುವ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಈ ವೇಳೆ ತಂಡದ ಸಹ ಆಟಗಾರರು ಹಾಗೂ ಇತರ ಸಿಬ್ಬಂಧಿಗಳು ರೋಹಿತ್ ಶರ್ಮಾ ಅವರನ್ನು ತಂಡಕ್ಕೆ ಅದ್ಭುತವಾಗಿ ಸ್ವಾಗತಿಸಿಕೊಂಡರು. ಇದೀಗ ರೋಹಿತ್ ಶರ್ಮಾ ಮೆಲ್ಬರ್ನ್‌ನಲ್ಲಿ ತಮ್ಮ ನೆಟ್ ಅಭ್ಯಾಸವನ್ನು ಆರಂಭಿಸಿದ್ದಾರೆ.

ರೋಹಿತ್ ಶರ್ಮಾ ನೆಟ್ ಅಭ್ಯಾಸದಲ್ಲಿ ತೊಡಗಿಸಿಕೊಂಡಿರುವ ವಿಡಿಯೋವನ್ನು ಐಸಿಸಿ ತನ್ನ ಅಧಿಕರತ ಟ್ವಿಟರ್ ಖಾತೆಯಲ್ಲಿ ಹಂಚಿಕೊಮಡಿದೆ. ಇದರಲ್ಲಿ ರೋಹಿತ್ ಶರ್ಮಾ ಅದ್ಭುತ ಟಚ್‌ನಲ್ಲಿರುವಂತೆ ಭಾಸವಾಗುತ್ತಿದೆ. "ಯಾರು ನೆಟ್‌ಗೆ ವಾಪಾಸಾಗಿದ್ದಾರೆ ಎಂಬುದನ್ನು ನೋಡಿ" ಎಂದು ಐಸಿಸಿ ಈ ವಿಡಿಯೋಗೆ ಅಡಿಬರಹವನ್ನು ನೀಡಿದೆ.

ಬಿಸಿಸಿಐ ಶುಕ್ರವಾರ ರೋಹಿತ್ ಶರ್ಮಾ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗೆ ಉಪನಾಯಕನನ್ನಾಗಿ ಹೆಸರಿಸಿದೆ. ಅಜಿಂಕ್ಯ ರಹಾನೆ ಮುನ್ನಡೆಸುತ್ತಿರುವ ಟೀಮ್ ಇಂಡಿಯಾವನ್ನು ಎರಡನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಉಪನಾಯಕನಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ರೋಹಿತ್ ಶರ್ಮಾ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

Story first published: Saturday, January 2, 2021, 9:29 [IST]
Other articles published on Jan 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+