ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ನಾಯಕತ್ವ ತನ್ನ ಹೆಗಲಿಗೆ ಬಿದ್ದ ಬಗೆ ವಿವರಿಸಿದ ರೋಹಿತ್ ಶರ್ಮಾ

Rohit Sharma Reveals How He Was Handed Mumbai Indians Captaincy

ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿರುವ ಮುಂಬೈ ಇಂಡಿಯನ್ಸ್ ಸತತವಾಗಿ ಮಿಂಚುತ್ತಿದೆ. ಟೀಮ್ ಇಂಡಿಯಾದ ಉಪನಾಯಕನಾಗಿರುವ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ನಾಯಕನಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ರೋಹಿತ್ ನಾಯಕತ್ವ ವಹಿಸಿಕೊಂಡ ನಂತರ ಮುಂಬೈ ಇಂಡಿಯನ್ಸ್ ತಂಡದ ಗತಿಯೇ ಬದಲಾಗಿ ಬಿಟ್ಟಿದೆ.

ವಿರಾಟ್ ಕೊಹ್ಲಿ ಜೊತೆಗೆ ಹೋಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ಬಾಬರ್ ಅಝಾಮ್ವಿರಾಟ್ ಕೊಹ್ಲಿ ಜೊತೆಗೆ ಹೋಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ಬಾಬರ್ ಅಝಾಮ್

ಐಪಿಎಲ್‌ನಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಎಲ್ಲರು ಹುಬ್ಬೇರಿಸುವಂತೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐಪಿಎಲ್‌ನ ಅತ್ಯುತ್ತಮ ನಾಯಕ ಯಾರು ಎಂಬ ಪ್ರಶ್ನೆ ಬಂದಾಗಿ ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಧೋನಿ ಜೊತೆಗೆ ರೋಹಿತ್ ಶರ್ಮಾ ಹೆಸರು ಕೂಡ ಅಷ್ಟೇ ಬಲವಾಗಿ ಕೇಳಿ ಬರುತ್ತಿದೆ. ಆದರೆ ಆರಂಭದಲ್ಲಿ ನಾಯಕತ್ವ ಯಾವ ರೀತಿ ಶರ್ಮಾ ಹೆಗಲಿಗೆ ಬಿತ್ತು. ಈ ಬಗ್ಗೆ ಸ್ವತಃ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. ಮುಂದೆ ಓದಿ..

ಡೆಕ್ಕನ್ ಚಾರ್ಜಸ್ ಪಾಲಾಗಿದ್ದ ರೋಹಿತ್ ಶರ್ಮಾ

ಡೆಕ್ಕನ್ ಚಾರ್ಜಸ್ ಪಾಲಾಗಿದ್ದ ರೋಹಿತ್ ಶರ್ಮಾ

ಆರಂಭದಲ್ಲಿ ರೋಹಿತ್ ಶರ್ಮಾ ಡೆಕ್ಕನ್ ಚಾರ್ಜಸ್ ತಂಡದ ಭಾಗವಾಗಿದ್ದರು. ಐಪಿಎಲ್ ಮೊದಲ ಆವೃತ್ತಿಯಿಂದ ಮೂರು ಆವೃತ್ತಿಯಲ್ಲೂ ಶರ್ಮಾ ಡೆಕ್ಕನ್ ಚಾರ್ಜಸ್ ತಂಡದಲ್ಲಿ ಆಡಿದ್ದರು. ಆದರೆ 2011ರ ಆವೃತ್ತಿಗೆ ನಡೆದ ಬಿಡ್ಡಿಂಗ್‌ನಲ್ಲಿ ಶರ್ಮಾ ಮುಂಬೈ ಇಂಡಿಯನ್ಸ್ ಪಾಲಾಗಿದ್ದರು.

ನಾಯಕತ್ವ ತ್ಯಜಿಸಿದ್ದ ತೆಂಡೂಲ್ಕರ್

ನಾಯಕತ್ವ ತ್ಯಜಿಸಿದ್ದ ತೆಂಡೂಲ್ಕರ್

ಅಶ್ವಿನ್ ಜೊತೆ ರೋಹಿತ್ ಶರ್ಮಾ ಮಾತನಾಡುತ್ತಾ "2012ರ ಐಪಿಎಲ್‌ನಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವ ತ್ಯಜಿಸುವುದಾಗಿ ನಿರ್ಧರಿಸಿದ್ದರು. ಬಳಿಕ ಹರ್ಭಜನ್ ಸಿಂಗ್ ನಾಯಕನಾಗಲಿದ್ದಾರೆ ಎಂದು ಭಾವಿಸಿದ್ದೆ. ಆದರೆ ಆವರನ್ನು ಯಾಕೆ ನಾಯಕನನ್ನಾಗಿ ಮಾಡಿಲ್ಲ ಎಂದು ನನಗೆ ತಿಳಿಯಲಿಲ್ಲ. ಹೀಗಾಗಿ 2012ರ ಆವೃತ್ತಿಗೆ ನಾನು ನಾಯಕನಾಗಬಹುದು ಎಂದುಕೊಂಡಿದ್ದೆ ಎಂದು ಹೇಳಿದರು.

2013ರರಲ್ಲಿ ಪಾಂಟಿಂಗ್ ಸೇರ್ಪಡೆ

2013ರರಲ್ಲಿ ಪಾಂಟಿಂಗ್ ಸೇರ್ಪಡೆ

"2013ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ರಿಕಿ ಪಾಂಟಿಂಗ್ ಅವರನ್ನು ಖರೀದಿಸಿ ನಾಯಕನನ್ನಾಗಿ ನೇಮಿಸಿತ್ತು. ಪಾಂಟಿಂಗ್ ಯುವಕರನ್ನು ಸಾಕಷ್ಟು ಪ್ರೋತ್ಸಾಹಿಸಿದರು. ತಂಡದಲ್ಲಿ ಎಲ್ಲಾ ಆಟಗಾರರು ಬೆರೆತುಕಳ್ಳುವಂತೆ ನೋಡಿಕೊಂಡರು. ಕಿರಿಯ ಆಟಗಾರರಿಗೆ ಅವರು ಸಾಕಷ್ಟು ಸ್ಪೂರ್ತಿಯನ್ನು ತುಂಬಿದರು" ಎಂದು ರೋಹಿತ್ ಶರ್ಮಾ ಆರ್ ಅಶ್ವಿನ್ ಜೊತೆಗೆ ಸಂವಾದದಲ್ಲಿ ಹೇಳಿಕೊಂಡರು.

ಟೂರ್ನಿಯ ಮಧ್ಯದಲ್ಲಿ ನಾಯಕತ್ವ ತ್ಯಜಿಸಿದ ಪಾಂಟಿಂಗ್

ಟೂರ್ನಿಯ ಮಧ್ಯದಲ್ಲಿ ನಾಯಕತ್ವ ತ್ಯಜಿಸಿದ ಪಾಂಟಿಂಗ್

ಈ ಸಂವಾದದಲ್ಲಿ ಪಾಂಟಿಂಗ್ ನಾಯಕತ್ವ ತ್ಯಜಿಸಲು ಕಾರಣವೇನೆಂದು ಶರ್ಮಾ ಹೇಳಿದ್ದಾರೆ. "ಟೂರ್ನಿಯಲ್ಲಿ ಪಾಂಟಿಂಗ್ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನಾಯಕತ್ವ ತೊರೆಯುವ ನಿರ್ಧಾರವನ್ನು ಕೈಗೊಂಡಿದ್ದರು. ವಾಸ್ತವವಾಗಿ 2013ರ ಆವೃತ್ತಿಗೆ ಪಾಂಟಿಂಗ್ ನಾಯಕನ ಜೊತೆಗೆ ತಂಡದ ಕೋಚ್ ಆಗಿಯೂ ಇದ್ದರು ಎಂದು ರೊಹಿತ್ ವಿವರಿಸಿದ್ದಾರೆ.

ಟೂರ್ನಿಯ ಅರ್ಧದಲ್ಲಿ ಅರಸಿ ಬಂತು ನಾಯಕತ್ವ

ಟೂರ್ನಿಯ ಅರ್ಧದಲ್ಲಿ ಅರಸಿ ಬಂತು ನಾಯಕತ್ವ

ಐಪಿಎಲ್ ಟೂರ್ನಿ ಆಗಿನ್ನೂ ಅರ್ಧದಲ್ಲಿ ನಡೆಯುತ್ತಿತ್ತು. ನನ್ನನ್ನು ಬಳಿಗೆ ಕರೆದು ನಾಯಕತ್ವ ತೊರೆಯುತ್ತಿರುವ ಸಂಗತಿಯನ್ನು ಪಾಂಟಿಂಗ್ ಹೇಳಿಕೊಂಡರು. ಅದಾದ ಬಳಿಕ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ನನ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿತ್ತು ಎಂದು ರೋಹಿತ್ ಶರ್ಮಾ ವಿವರಿಸಿದರು. ಹೀಗೆ 2013ರಲ್ಲಿ ಟೂರ್ನಿಯ ಮಧ್ಯಭಾಗದಿಂದ ಮುಂಬೈ ತಂಡದ ಮುಂದಾಳತ್ವ ವಹಿಸಿಕೊಂಡ ಬಗೆಯನ್ನು ರೋಹಿತ್ ಶರ್ಮಾ ಬಿಚ್ಚಿಟ್ಟಿದ್ದಾರೆ. ರಿಕಿ ಪಾಂಟಿಂಗ್ ನನ್ನ ಸಹಾಯಕ್ಕೆ ಎಂದಿಗೂ ಇದ್ದಾರೆ ಎಂದು ಇದೇ ಸಂದರ್ಭದಲ್ಲಿ ಶರ್ಮಾ ಹೇಳಿದ್ದಾರೆ.

Story first published: Tuesday, May 19, 2020, 15:41 [IST]
Other articles published on May 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X