ಯಶಸ್ಸಿನ ಕಾರಣವನ್ನು ಬಿಚ್ಚಿಟ್ಟ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ

ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಕಳೆದ ಹಲವು ವರ್ಷಗಳಿಂದ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಅದರಲ್ಲೂ ಕಳೆದ ವಿಶ್ವಕಪ್‌ನಲ್ಲಿ ಶರ್ಮಾ ಪ್ರದರ್ಶನ ಅತ್ಯದ್ಭುತವಾಗಿತ್ತು. ಏಕದಿನ ಮತ್ತು ಟಿ20 ಎರಡೂ ಮಾದರಿಯಲ್ಲೂ ಶರ್ಮಾ ಟೀಮ್ ಇಂಡಿಯಾಗೆ ಗಣನೀಯ ಕೊಡುಗೆಯನ್ನು ನೀಡಿದ್ದಾರೆ. ಜೊತೆಗೆ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲೂ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಅಲ್ಲೂ ಸೈ ಎನಿಸಿಕೊಂಡಿದ್ದರು.
ಹೀಗೆ ರೋಹಿತ್ ಶರ್ಮಾ ಸಿಕ್ಕ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡು ಟೀಮ್ ಇಂಡಿಯಾ ಪಾಲಿಗೆ ಅವಿಭಾಜ್ಯ ಅಂಗವಾಗಿದ್ದಾರೆ. ಈ ಯಶಸ್ಸಿಗೆ ರೋಹಿತ್ ಶರ್ಮಾ ಸಾಕಷ್ಟು ಪರಿಶ್ರಮವನ್ನೂ ಹಾಕಿದ್ದಾರೆ. ಆದರೆ ರೋಹಿತ್ ಶರ್ಮಾ ತಮ್ಮ ಯಶಸ್ಸಿಗೆ ಬೇರೊಂದು ಕಾರಣವನ್ನೂ ಹೇಳಿದ್ದಾರೆ. ತಾನು ಅನುಸರಿಸುವ ಒಂದು ವಿಧಾನ ತನ್ನ ಆಟವನ್ನು ಉತ್ಕೃಷ್ಟ ಮಟ್ಟಕ್ಕೇರಿಸಲು ಕಾರಣವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಯಶಸ್ಸಿಗೆ ಅವರೇ ಹೇಳಿಕೊಂಡಿರುವ ಆ ಕಾರಣಗಳು ಯಾವುದು ಅನ್ನುವುದನ್ನು ಮುಂದೆ ನೋಡೊಣ..

ರೋಹಿತ್ ಶರ್ಮಾ ಯಶಸ್ಸಿನ ಕಥೆ
ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ತಾನು ದೀರ್ಘಕಾಲದ ಗುರಿಗಳನ್ನು ಹಾಕಿಕೊಳ್ಳುವುದೇ ಇಲ್ಲ ಎಂದಿದ್ದಾರೆ. ದೀರ್ಘ ಕಾಲದ ಗುರಿಗಳು ನಮ್ಮ ಮೇಲೆ ಒತ್ತಡವನ್ನು ಹಾಕುತ್ತದೆ. ಹಾಗಾಗಿ ನನಗೆ ದೀರ್ಘ ಕಾಲದ ಗುರಿಗಳ ಮೇಲೆ ನಂಬಿಕೆಯಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

2-3 ತಿಂಗಳ ಯೋಜನೆಗಳು
ನಾನು ಹಾಕಿಕೊಳ್ಳುವ ಯೋಜನೆಗಳು ಅಲ್ಪಾವಧಿಯದ್ದಾಗಿರುತ್ತದೆ. ಎರಡರಿಂದ ಮೂರು ತಿಂಗಳಲ್ಲಿ ನಾನು ಮಾಡಬೇಕಾಗಿರುವುದೇನು ಎಂಬುದನ್ನು ನಾನು ಯೋಜನೆ ಮಾಡಿಕೊಳ್ಳುತ್ತೇನೆ. ತರಬೇತಿ ಮತ್ತು ಆಟದ ದೃಷ್ಟಿಕೋನದಿಂದಲೂ ಈ ಯೋಜನೆಯನ್ನು ಹಾಕಿಕೊಂಡಿರುತ್ತೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಪ್ರತಿ ಸರಣಿಗೂ ಗುರಿ
ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ "ಪ್ರತೀ ಸರಣಿಗೆ ಅಥವಾ ಪ್ರತೀ ಟೂರ್ನಮೆಂಟ್‌ಗೂ ನಾನು ನನ್ನದೇ ಆದ ಯೋಜನೆಗಳನ್ನು ಹಾಕಿಕೊಂಡಿರುತ್ತೇನೆ. ಅದರ ಪ್ರಕಾರವೇ ನನ್ನ ಆಟವನ್ನು ಅನುಷ್ಟಾನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಮದು ರೋಹಿತ್ ಶರ್ಮಾ ಹೇಳಿದ್ದಾರೆ. ಇದು ಮುಂದಿನ ದಿನಗಳಲ್ಲೂ ಮುಂದುವರಿಯುತ್ತದೆ ಎಂದು ಟೀಮ್ ಇಂಡಿಯಾ ಸೀಮಿತ ಓವರ್‌ಗಳ ಉಪನಾಯಕ ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಸಾಮಾನ್ಯ ಸ್ಥಿತಿಯಿದ್ದರೆ ಈಗ ಐಪಿಎಲ್ ನಡೆಯಬೇಕಿತ್ತು
ಇದೇ ಸಂದರ್ಭದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದ್ದರೆ ಈಗ ಕ್ರಿಕೆಟಿಗರೆಲ್ಲರೂ ಐಪಿಎಲ್‌ನಲ್ಲಿ ಬ್ಯುಸಿ ಇರುತ್ತಿದ್ದರು. ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ವಿಶ್ವಾದ್ಯಂತ ಎಲ್ಲಾ ಕ್ರೀಡೆಗಳು ನಿಂತಿದೆ. ಮುಂದೆ ಮತ್ತೆ ಯಾವಾಗ ಕ್ರಿಕೆಟ್ ಆಡುವ ಅವಕಾಶ ಸಿಗಲಿದೆ ಎಂದು ಯಾರಿಗೂ ಗೊತ್ತಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಮತ್ತೆ ಕ್ರಿಕೆಟ್ ಆರಂಭವಾದ ನಂತರ..
ಎಲ್ಲಾ ಸಾಮಾನ್ಯ ಸ್ಥಿತಿಗೆ ಬಂದು ಮತ್ತೆ ಕ್ರಿಕೆಟ್ ಆರಂಭವಾದ ನಂತರ ಮುಂದ ಯಾವ ಟೂರ್ನಿ ನಡೆಯಲಿದೆ ಎಂದು ಎದುರು ನೋಡುತ್ತಿದ್ದೇವೆ, ಅದು ವಿಶ್ವಕಪ್ ಆಗಿರಬಹುದು ಅಥವಾ ಐಪಿಎಲ್ ಆಗಿರಬಹುದು. ಅದರ ಜೊತೆಗೆ ಆಸ್ಟ್ರೇಲಿಯಾ ತಂಡದ ವಿರುದ್ಧ ದ್ವಿಪಕ್ಷೀಯ ಸರಣಿಯೂ ಇದೆ. ಹೀಗಾಗಿ ನಾವು ಯಾವುದರ ವಿರುದ್ಧ ಆಡಲಿದ್ದೇವೆ ಎಂಬುದರ ವಿಮರ್ಶೆಯೂ ನಡೆಯಬೇಕಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications