Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಗಳಿಸಿದ ಮೊದಲ ಸಂಪಾದನೆ ಎಷ್ಟು? ಅದನ್ನು ಶರ್ಮಾ ಏನ್ಮಾಡಿದ್ರು?

Rohit Sharma Reveals The Amount Of His First Paycheck In Cricket And How He Spent It

ಟೀಮ್ ಇಂಡಿಯಾ ಸೀಮಿತ ಓವರ್‌ಗಳ ಉಪನಾಯಕ ರೋಹಿತ್ ಶರ್ಮಾ ಈಗ ಕೋಟಿ ಕೋಟಿಗಳನ್ನು ಸಂಪಾದಿಸುತ್ತಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೆ ಜಾಹೀರಾತಿನ ಮೂಲಕ ಕೂಡ ರೋಹಿತ್ ಶರ್ಮಾ ತಮ್ಮ ಆದಾಯವನ್ನು ಗಳಿಸುತ್ತಿದ್ದಾರೆ. ಆದರೆ ತೀರಾ ಮಧ್ಯಮ ವರ್ಗದ ಕುಟುಂಬದಿಂದ ಬಂದ ರೋಹಿತ್ ಶರ್ಮಾ ಕ್ರಿಕೆಟ್‌ನಿಂದ ಮೊದಲು ಗಳಿಸಿದ ಹಣವೆಷ್ಟು ಗೊತ್ತಾ?

ಈ ಬಗ್ಗೆ ಸ್ವತಃ ರೋಹಿತ್ ಶರ್ಮಾ ಟ್ವಿಟ್ಟರ್‌ನಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಮಾಹಿತಿ ನೀಡಿದ್ದಾರೆ. ಕ್ರಿಕೆಟ್‌ನಲ್ಲಿ ನಿಮ್ಮ ಮೊದಲ ಚೆಕ್ ಎಷ್ಟು ಮೊತ್ತವಾಗಿತ್ತು. ಅದನ್ನು ಹೇಗೆ ಬಳಸಿಕೊಂಡಿರು ಎಂದು ಟ್ವಿಟ್ಟರ್‌ನಲ್ಲಿ ಅಭಿಮಾನಿ ಪ್ರಶ್ನಿಸಿದ್ದರು. ಇದಕ್ಕೆ ರೋಹಿತ್ ಉತ್ತರಿಸಿದ್ದಾರೆ.

ರೋಹಿತ್ ಮೊದಲ ಗಳಿಕೆ

ರೋಹಿತ್ ಮೊದಲ ಗಳಿಕೆ

ಅಭಿಮಾನಿ ಕೇಳಿದ ಪ್ರಶ್ನೆಗೆ ರೋಹಿತ್ ಶರ್ಮಾ, ನಾನು ಮೊದಲ ಕ್ರಿಕೆಟ್ ಮೂಲಕ ಗಳಿಸಿದ್ದು ಚೆಕ್‌ನಲ್ಲಿ ಅಲ್ಲ. ಅದು ಕ್ಯಾಶ್ ರೂಪದ್ದಾಗಿತ್ತು. ನನ್ನ ಮೊದಲ ಗಳಿಕೆ 50 ರೂಪಾಯಿ ಆಗಿತ್ತು. ನಮ್ಮ ಸೊಸೈಟಿನಲ್ಲಿ ಆಡಿದ ಪಂದ್ಯಕ್ಕಾಗಿ ನಾನು ಈ ಹಣವನ್ನು ಪಡೆದಿದ್ದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ರಸ್ತೆ ಬದಿಯಲ್ಲಿ ಗೆಳೆಯರೊಂದಿಗೆ ವಡಾಪಾವ್

ರಸ್ತೆ ಬದಿಯಲ್ಲಿ ಗೆಳೆಯರೊಂದಿಗೆ ವಡಾಪಾವ್

ಕೋಟಿ ಕೋಟಿ ಗಳಿಸುತ್ತಿರುವ ರೋಹಿತ್ ಶರ್ಮಾ ತಮ್ಮ ಮೊದಲ 50 ರೂಪಾಯಿಯನ್ನು ಹೇಗೆ ಖರ್ಚು ಮಾಡಿದೆ ಎಂದು ಕೂಡ ಹೇಳಿದ್ದಾರೆ. ನನಗೆ ಸಿಕ್ಕ ಆ 50 ರೂಪಾಯಿ ಹಣವನ್ನು ನಾನು ಖಂಡಿತವಾಗಿಯೂ ಗೆಳೆಯರ ಜೊತೆ ರಸ್ತೆಬದಿಯಲ್ಲಿ ವಡಾಪಾವ್ ತಿನ್ನಲು ಖರ್ಚು ಮಾಡಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ರೋಹಿತ್‌ಗೆ ಬಂತು ಸಾಕಷ್ಟು ಸವಾಲುಗಳು

ರೋಹಿತ್‌ಗೆ ಬಂತು ಸಾಕಷ್ಟು ಸವಾಲುಗಳು

ಇನ್ನು ಇದೇ ಸಂದರ್ಭದಲ್ಲಿ ರೋಹಿತ್ ಶರ್ಮಾಗೆ ಕ್ರಿಕೆಟ್ ವಿಚಾರವಾಗಿಯೂ ಕೆಲ ಪ್ರಶ್ನೆಗಳು ತೂರಿ ಬಂತು. ಅದರಲ್ಲಿ ಓರ್ವ ಅಭಿಮಾನಿ ಈ ಹಿಂದಿನ ವೇಗದ ಬೌಲರ್‌ಗಳಲ್ಲಿ ನೀವು ಯಾರನ್ನು ಎದುರಿಸಲು ಇಷ್ಟಪಡುತ್ತೀರಿ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಇದಕ್ಕೆ ಉತ್ತರಿಸಿದ ರೋಹಿತ್ ಶರ್ಮಾ ಆಸ್ಟ್ರೇಲಿಯಾದ ವೇಗಿ ಗ್ಲೆನ್ ಮೆಕ್‌ಗ್ರಾಥ್ ಹೆಸರನ್ನು ಹೇಳಿದ್ದರು.

ಕಳೆದ ವರ್ಷ ರೋಹಿತ್ ಅದ್ಭುತ ಪ್ರದರ್ಶನ

ಕಳೆದ ವರ್ಷ ರೋಹಿತ್ ಅದ್ಭುತ ಪ್ರದರ್ಶನ

ಟೀಮ್ ಇಂಡಿಯಾ ಪರವಾಗಿ ರೋಹಿತ್ ಶರ್ಮಾ ಕಳೆದ ಕೆಲ ವರ್ಷಗಳಲ್ಲಿ ನಿರಂತರವಾಗಿ ಅದ್ಭುತ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ. ಅದರಲ್ಲೂ 2019ರಲ್ಲಿ ರೋಹಿತ್ ಅತ್ಯಂತ ಶ್ರೇಷ್ಠ ಸಾಧನೆಯನ್ನು ಮಾಡಿದ್ದರು. ವಿಶ್ವಕಪ್ ಟೂರ್ನಿಯಲ್ಲಿ 5 ಶತಕ ಗಳಿಸಿದ ಸಾಧನೆಯನ್ನು ಮಾಡಿದ್ದರು ರೋಹಿತ್ ಶರ್ಮಾ. ಈಗ ಮುಂಬೈ ಇಂಡಿಯನ್ಸ್ ನಾಯಕನಾಗಿ ಐಪಿಎಲ್‌ನಲ್ಲಿ ಮತ್ತೊಂದು ಯಶಸ್ವೀ ಆವೃತ್ತಿಯನ್ನು ಆಡಲು ಎದುರು ನೋಡುತ್ತಿದ್ದಾರೆ.

Story first published: Monday, August 3, 2020, 13:53 [IST]
Other articles published on Aug 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+