ವಿಶ್ವ ದಾಖಲೆಯ ಕ್ಷಣದಲ್ಲಿ ಪತ್ನಿ ಕಣ್ಣೀರು: ಕಾರಣ ಹೇಳಿದ ರೋಹಿತ್ ಶರ್ಮಾ

ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್‌ನಲ್ಲಿ ಈವರೆಗೆ ಯಾರಿಂದಲೂ ಮಾಡಲಾಗದ ಸಾಧನೆಯೊಂದನ್ನು ಮಾಡಿದ್ದಾರೆ. ನಾಲ್ಕು ದಶಕಗಳ ಇತಿಹಾಸವಿರುವ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮೂರು ಬಾರಿ ದ್ವಿಶತಕ ಸಾಧನೆ ಮಾಡಿದ ಏಕೈಕ ಆಟಗಾರ ಎನಿಸಿದ್ದಾರೆ.
ರೋಹಿತ್ ಶರ್ಮಾ ಅವರ ಮೊದಲ ದ್ವಿಶತಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ. ಎರಡನೇ ಶತಕದಲ್ಲಿ ರೋಹಿತ್ ಏಕದಿನ ಕ್ರಿಕೆಟ್‌ನ ಸರ್ವಾಧಿಕ ರನ್ ಗಳಿಸಿದ ದಾಖಲೆಯನ್ನು ಮಾಡಿದ್ದರು. ಇನ್ನು ಮೂರನೇ ದ್ವಿಶತಕವನ್ನು ರೋಹಿತ್ 2017ರ ತಮ್ಮ ಮದುವೆ ವಾರ್ಷಿಕೋತ್ಸವದ ದಿನವೇ ಸಿಡಿಸಿ ಮಡದಿಗೆ ಉಡುಗೊರೆಯಾಗಿ ನೀಡಿದ್ದರು. ಆದರೆ ಈ ಪಂದ್ಯದ ಸಂದರ್ಭದಲ್ಲಿ ರೋಹಿತ್ ಪತ್ನಿ ರಿತಿಕಾ ಕಣ್ಣೀರು ಸುರುಸಿದ್ದು ಕ್ಯಾಮರಾ ಕಣ್ಣಲ್ಲೂ ಸೆರೆಯಾಗಿತ್ತು.

ಮೈದಾನದಲ್ಲೇ ಪಂದ್ಯ ವೀಕ್ಷಿಸಿದ್ದ ರಿತಿಕಾ
ಈ ಪಂದ್ಯದಲ್ಲಿ ರೋಹಿತ್ ದ್ವಿಶತಕ ಸಿಡಿಸುವ ವೇಳೆಯಲ್ಲಿ ಮೈದಾನದಲ್ಲೇ ಪಂದ್ಯ ವೀಕ್ಷಿಸುತ್ತಿದ್ದ ರಿತಿಕಾ ಕಣ್ಣೀರು ಸುರಿಸಿದ್ದರು. ಈ ಬಗ್ಗೆ ರೋಹಿತ್ ಶರ್ಮಾ ಮಾತನಾಡಿದ್ದಾರೆ. ಬಿಸಿಸಿಐ ಟಿವಿಯಲ್ಲಿ 'ಓಪನ್ ನೆಟ್ಸ್ ವಿಥ್ ಮಯಾಂಕ್' ಕಾರ್ಯಕ್ರಮದಲ್ಲಿ ಸಂವಾದದಲ್ಲಿ ಶರ್ಮಾ ಈ ಬಗ್ಗೆ ಕಾರಣವನ್ನು ಹೇಳಿಕೊಂಡಿದ್ದಾರೆ.

ಭಾವುಕರಾಗಿದ್ದರು ರಿತಿಕಾ
ಅಂದಿನ ದಿನ ನನ್ನ ಪತ್ನಿ ಭಾವುಕರಾಗಿದ್ದರು. ಏಕೆಂದರೆ, ಅವತ್ತಿನ ದಿನ ನಮ್ಮ ವಿವಾಹ ವಾರ್ಷಿಕೋತ್ಸವವಾಗಿತ್ತು. ಅತ್ಯುತ್ತಮವಾದ ಕೊಡುಗೆಯನ್ನು ನಾನು ಅಂದು ಮೈದಾನದಲ್ಲೇ ನೀಡಿದ್ದೆ. ಅದೊಂದು ರೀತಿ ಭಾವನಾತ್ಮವಾಗಿತ್ತು," ಎಂದು 'ಓಪನ್ ನೆಟ್ಸ್ ವಿಥ್ ಮಯಾಂಕ್' ಎರಡನೇ ಎಪಿಸೋಡ್‌ನಲ್ಲಿ ಮಯಾಂಕ್ ಅಗರ್ವಾಲ್ ಹಾಗೂ ಶಿಖರ್ ಧವನ್ ಅವರಿಗೆ ಹೇಳಿದರು.

ಡೈವ್ ಮಾಡುವಾಗ ಕೈ ತರಚಿಕೊಂಡಿತ್ತು
"ಮೊದಲ ಬಾರಿ ಆಕೆ ಏಕೆ ಅತ್ತಳು ಎಂಬ ಬಗ್ಗೆ ಐಡಿಯಾ ಇರಲಿಲ್ಲ. ಅಂಗಳದಿಂದ ಹೊರಗೆ ಬಂದು ಏಕೆ ಅಳುತ್ತಿದ್ದೆ ಎಂದು ಕೇಳಿದೆ? ನಾನು 196 ರನ್ ಓಡುವಾಗ ಕೆಳಗೆ ಬಿದ್ದೆ, ಆಗ ನನ್ನ ಕೈ ತರಚಿಕೊಂಡಿತು, ಇದರಿಂದ ಆಕೆ ತುಂಬಾ ಭಾವುಕಳಾಗಿದ್ದಳು," ಎಂದು ಅಂದಿನ ಘಟನೆಯನ್ನು ರೋಹಿತ್ ಹಂಚಿಕೊಂಡರು.

ರೋಹಿತ್ ಆಟದಿಂದ ಭರ್ಜರಿ ಗೆಲುವು
ಆ ಪಂದ್ಯದಲ್ಲಿ ರೋಹಿತ್ ಶರ್ಮಾ 13 ಬೌಂಡರಿ ಹಾಗೂ 12 ಸಿಕ್ಸರ್‌ಗಳೊಂದಿಗೆ 208 ರನ್ ಗಳಿಸಿದ್ದರು. ಅಂತಿಮವಾಗಿ ಭಾರತ ನಿಗದಿತ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 392 ರನ್ ದಾಖಲಿಸಿತ್ತು. ನಂತರ, ಭಾರತ 141 ರನ್‌ಗಳಿಂದ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications