For Quick Alerts
ALLOW NOTIFICATIONS  
For Daily Alerts
 

T20 World Cup: ಬ್ಯಾಟಿಂಗ್ ಸ್ವರ್ಗದಲ್ಲಿ ಅಬ್ಬರಿಸಿದ ಹಿಟ್‌ಮ್ಯಾನ್‌: ಟೀಕೆಗಳಿಗೆ ಬ್ಯಾಟ್‌ನಿಂದಲೇ ಉತ್ತರ ನೀಡಿದ ರೋಹಿತ್

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ತಮ್ಮ ಕ್ಲಾಸಿಕ್ ಬ್ಯಾಟಿಂಗ್‌ನಿಂದಲೇ ಹೆಸರುವಾಸಿ. ಆದರೆ ಕೆಲವೊಮ್ಮೆ ಬ್ಯಾಟ್ ಮೌನಕ್ಕೆ ಶರಣಾದಾಗ ಟೀಕೆಗೆ ಗುರಿಯಾಗಿದ್ದು ಉಂಟು. ಟೀಕೆಗಳಿಗೆ ಹೇಗೆ ಉತ್ತರ ನೀಡಬೇಕು ಎಂಬುದನ್ನು ರೋಹಿತ್ ಶರ್ಮಾ ಕರಗತ ಮಾಡಿಕೊಂಡಿರುವ ಆಟಗಾರ. ಟೀಕೆಗಳಿಗೆ ಉತ್ತರ ನೀಡಲು ಈ ಬಾರಿ ವೇದಿಕೆ ಮಾಡಿಕೊಂಡಿದ್ದೇ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳ.

ಅಫ್ಘಾನಿಸ್ತಾನದ ವಿರುದ್ಧ ನಡೆದ ಎರಡು ಟಿ20 ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ರೋಹಿತ್ ಟೀಕೆಗೆ ಗುರಿಯಾಗಿದ್ದರು. ವೆಸ್ಟ್‌ ಇಂಡೀಸ್‌ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಇವರನ್ನು ತಂಡದಲ್ಲಿ ಇರಿಸಿಕೊಳ್ಳಬೇಕಾ ಎಂಬ ಪ್ರಶ್ನೆಗಳೇ ಬಹುವಾಗಿ ಕಾಡುತ್ತಿತ್ತು. ಇವರು ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಒಂದು ಬಿಗ್ ಇನ್ನಿಂಗ್ಸ್‌ ಆಡಬೇಕಿತ್ತು. ಇದನ್ನೆಲ್ಲಾ ಅರಿತುಕೊಂಡೆ ರೋಹಿತ್ ಬುಧವಾರ ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಝೆಂಕರಿಸಿದ್ದಾರೆ.

Rohit Sharma rewrites record books with whirlwind century against Afghanistan

ಒತ್ತಡವನ್ನು ಹೇಗೆ ಮೆಟ್ಟಿ ನಿಲ್ಲಬೇಕು ಎಂಬುದನ್ನು ಅರಿತಿರುವ ರೋಹಿತ್‌, ಮೂರನೇ ಪಂದ್ಯದಲ್ಲಿ ಮನಮೋಹಕ ಬ್ಯಾಟಿಂಗ್ ನಡೆಸಿದರು. ಮೈದಾನಕ್ಕೆ ರೋಹಿತ್‌ ಎಂಟ್ರಿ ನೀಡುವಾಗ ಇದ್ದ ಒತ್ತಡವನ್ನು ತಮ್ಮ ಮೇಲೆ ಎಳ್ಳಷ್ಟು ಎಳೆದುಕೊಳ್ಳದ ರೋಹಿತ್‌ ಕ್ಲಾಸಿಕ್ ಆಟದ ಪ್ರದರ್ಶನ ನೀಡಿದರು. ತಮ್ಮ ನೈಜ ಆಟವನ್ನು ಆಡಿದ ರೋಹಿತ್‌ ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಕ್ಕೆ ಆಧಾರವಾದರು. ಅಟ್ಯಾಕಿಂಗ್‌ ಕ್ರಿಕೆಟ್‌ನ ಹೊಸ ವರ್ಷನ್‌ನಲ್ಲಿ ರೋಹಿತ್ ಕಾಣಿಸಿಕೊಂಡರು.

ರೋಹಿತ್ ಆರಂಭದಲ್ಲಿ ಕೊಂಚ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದಂತೆ ಕಂಡು ಬಂದರೂ ಸಹ ಬಳಿಕ, ಆರ್ಭಟಿಸಿದರು. ಒಂದೊಮ್ಮೆ ರೋಹಿತ್ ಕ್ರಿಸ್‌ನಲ್ಲಿ ಟೈಮ್‌ ಸ್ಪೆಂಡ್ ಮಾಡಿದರೆ ಹೇಗೆ ಎದುರಾಳಿಗಳಿಗೆ ಕಂಠಕ ವಾಗುತ್ತಾರೋ ಅದೇ ರೀತಿ ಆಫ್ಘಾನಿಸ್ತಾನಕ್ಕೆ ಕಂಠಕವಾದರು.

ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ ಐದನೇ ಶತಕ ದಾಖಲಿಸಿದರು. ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ರೋಹಿತ್ 69 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ ಅಜೇಯ 121 ರನ್ ಗಳಿಸಿದರು. ರೋಹಿತ್ ಈ ಮಾದರಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎನಿಸಿಕೊಂಡರು. ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಲಾ 4 ಶತಕ ಸಿಡಿಸಿರುವ ಸೂರ್ಯಕುಮಾರ್ ಯಾದವ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ ಅವರನ್ನು ಹಿಂದಿಕ್ಕಿದ್ದಾರೆ.

Rohit Sharma rewrites record books with whirlwind century against Afghanistan

ನಾಯಕನಾಗಿ ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್‌

ರೋಹಿತ್ ಶರ್ಮಾ ಅವರು ಅಫ್ಘಾನಿಸ್ತಾನ ವಿರುದ್ಧ ಆಡಿದ ಅಕೇಯ 121 ರನ್‌ಗಳ ಇನ್ನಿಂಗ್ಸ್‌ನಲ್ಲಿ ಒಟ್ಟು 8 ಸಿಕ್ಸರ್‌ಗಳನ್ನು ಸಿಡಿಸಿದರು. ಈ ಕಾರಣದಿಂದಾಗಿ ಅವರು ನಾಯಕನಾಗಿ T20 ಇಂಟರ್ನ್ಯಾಷನಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಅಫ್ಘಾನಿಸ್ತಾನ ವಿರುದ್ಧ ಆಡಿದ ಶತಕದಲ್ಲಿ 8 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ರೋಹಿತ್ ಶರ್ಮಾ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ನಾಯಕರಾದರು.

ರೋಹಿತ್ ಶರ್ಮಾ ಅಜೇಯ 121 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಟೀಮ್ ಇಂಡಿಯಾ ಪರ T20 ಅಂತರಾಷ್ಟ್ರೀಯ ಮೂರನೇ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಈ ಪಟ್ಟಿಯಲ್ಲಿ ಶುಭ್‌ಮನ್ ಗಿಲ್ ಅಜೇಯ 126 ರನ್‌ಗಳೊಂದಿಗೆ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ.

ದೊಡ್ಡ ಜೊತೆಯಾಟ

ಅಫ್ಘಾನಿಸ್ತಾನ ವಿರುದ್ಧದ ಮೂರನೇ T20 ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಐದನೇ ವಿಕೆಟ್‌ಗೆ ಅಜೇಯ 190 ರನ್‌ಗಳ ಜೊತೆಯಾಟವನ್ನು ಮಾಡಿದರು. ಇದು ಭಾರತದ ಪರ ಈ ಸ್ವರೂಪದಲ್ಲಿ ಯಾವುದೇ ವಿಕೆಟ್‌ಗೆ ಬಾರಿಸಿದ ಗರಿಷ್ಠ ರನ್ ಜೊತೆಯಾಟವಾಗಿದೆ.

Story first published: Thursday, January 18, 2024, 8:33 [IST]
Other articles published on Jan 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+