ರಿಷಭ್ ಪಂತ್ ಫುಲ್ ರೋಸ್ಟ್ ಮಾಡಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!

ಮುಂಬೈ, ಏಪ್ರಿಲ್ 2: ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಚೆನ್ನಾಗಿ ರೋಸ್ಟ್ ಮಾಡಿದ್ದಾರೆ. ಅತೀ ದೊಡ್ಡ ಸಿಕ್ಸ್ ಬಾರಿಸುವ ಚಾಲೆಂಜ್‌ಗೆ ಮುಂದಾದ ಪಂತ್‌ಗೆ ರೋಹಿತ್ ಸರಿಯಾಗೇ ಪ್ರತಿಕ್ರಿಯಿಸಿದ್ದಾರೆ. ಕೊರೊನಾವೈರಸ್‌ನಿಂದಾಗಿ ದೇಶದಾದ್ಯಂತ ಲಾಕ್‌ಡೌನ್ ವಿಧಿಸಲಾಗಿರುವುದರಿಂದ ಬೇಜಾರು ಕಳೆಯೋಕೆ ಬಹುತೇಕ ಮಂದಿ ಬೇರೆ ಬೇರೆ ರೀತಿಯ ಚಾಲೆಂಜ್‌ಗಳ ಮೊರೆ ಹೋಗಿದ್ದಾರೆ.
ಸಾಮಾನ್ಯ ಜನರು, ಪುಸ್ತಕ ಓದೋದು, ಮೊದಲ ಪರಿಚಯದ ಬಗ್ಗೆ ಫೇಸ್‌ಬುಕ್ಕಿನಲ್ಲಿ ಕಾಮೆಂಟ್ ಹಾಕೋದು, ಸೀರೆ-ಪಂಚೆ ಉಟ್ಟ ಫೋಟೋ ಶೇರ್ ಮಾಡೋದು, ತಮ್ಮ ಹಳೆಯ ಫೋಟೋಗಳನ್ನು ಹಾಕೋ ಚಾಲೆಂಜ್‌ಗಳಲ್ಲಿ ಖುಷಿ ಹುಡುಕುತ್ತಿದ್ದಾರೆ. ಇನ್ನು ಕೆಲವರು ಹುಡುಗೀರಲ್ಲಿ ರೇಶನ್ ಕಾರ್ಡ್ ಫೋಟೋವನ್ನು ಸ್ಟೇಟಸ್‌ಗೆ ಹಾಕುವಂತೆ ಚಾಲೆಂಜ್ ಎಸೆದು ತರಲೆ ಮಾಡುತ್ತಲೂ ಇದ್ದಾರೆ.
ಯಾವುದೇ ಕ್ರೀಡಾಚಟುವಟಿಕೆಗಳು ನಡೆಯುತ್ತಿಲ್ಲವಾದ್ದರಿಂದ ಬಿಡುವಿನಲ್ಲಿರುವ ಕ್ರಿಕೆಟಿಗರು, ಕ್ರೀಡಾಪಟುಗಳು ಕೂಡ ಇಂಥದ್ದೇ ವಿಭಿನ್ನ ಚಾಲೆಂಜ್‌ಗಳನ್ನು ಒಬ್ಬರಿಂದ ಒಬ್ಬರಿಗೆ ಎಸೆಯುತ್ತಿದ್ದಾರೆ. ಆದರೆ ಇಲ್ಲಿ ಚಾಲೆಂಜ್‌ನಿಂದಾಗಿ ಪಂತ್ ಮಾತ್ರ ಪೇಚಿಗೆ ಸಿಲುಕಿಕೊಂಡಂತಾಗಿದೆ.

ದೊಡ್ಡ ಸಿಕ್ಸ್ ಯಾರು ಬಾರಿಸುತ್ತಾರೆ?
ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ ರೋಹಿತ್ ಶರ್ಮಾ ಅವರಲ್ಲಿ ಮಾತನಾಡುತ್ತ, ನಿಮ್ಮಿಬ್ಬರ ಮಧ್ಯೆ ಯಾರು ದೊಡ್ಡ ಸಿಕ್ಸ್ ಬಾರಿಸುತ್ತಾರೆ ಎಂದು ಚಾಲೆಂಜೆ ಎಸೆಯೋದನ್ನು ರಿಷಭ್ ಪಂತ್ ಬಯಸಿದ್ದಾರೆ ಎಂದಿದ್ದಾರೆ.

ಪಂತ್‌ಗೆ ಕಪಾಳಮೋಕ್ಷ
ಇದಕ್ಕೆ ರೋಹಿತ್ ಶರ್ಮಾ ನೀಡಿರುವ ಉತ್ತರ ಒಂದೆಡೆ ತಮಾಷೆಯಾಗಿ ಕಂಡರೆ, ಮತ್ತೊಂದೆಡೆ ರಿಷಭ್ ಪಂತ್‌ಗೆ ಕಪಾಳ ಮೋಕ್ಷ ಮಾಡಿದಂತೆ ಇದೆ. ಟೀಮ್ ಇಂಡಿಯಾದಲ್ಲಿ ಪಂತ್‌ಗೆ ನೆಲೆಯೂರಲು ಬಹಳಷ್ಟು ಅವಕಾಶಗಳು ಲಭಿಸಿದ್ದರೂ ಪಂತ್ ಅದನ್ನು ಸರಿಯಾಗಿ ಬಳಸಿಕೊಂಡಿಲ್ಲ. ಇದನ್ನೇ ಮುಂದಿಟ್ಟು ರೋಹಿತ್, ಪಂತ್‌ಗೆ ತಮಾಷೆ ಮಾಡಿದ್ದಾರೆ.
ರೋಹಿತ್ ಶರ್ಮಾ ಕೊಟ್ಟ ಉತ್ತರ
ಬೂಮ್ರಾ ಪ್ರಶ್ನೆಗೆ ಉತ್ತರಿಸಿದ ಶರ್ಮಾ, 'ಆತ (ಪಂತ್) ನನ್ನ ವಿರುದ್ಧ ಕಾಂಪೀಟ್ ಮಾಡೋಕೆ ಬಯಸಿದ್ದಾನಾ? ಅವನು ಹೆಚ್ಚೆಂದರೆ ಬಹಳ ಕಷ್ಟದಲ್ಲಿ ಒಂದು ವರ್ಷ ಕ್ರಿಕೆಟ್ ಆಡಿದ್ದಾನಷ್ಟೆ. ಅವನಿಗೆ ಸ್ಪರ್ಧೆ ಬೇಕಾಗಿದೆಯೇ?,' ಎಂದು ಬೂಮ್ರಾಗೆ ಮರು ಪ್ರಶ್ನಿಸಿದ್ದಾರೆ.

ಹಿಟ್‌ಮ್ಯಾನ್ 423 ಸಿಕ್ಸರ್‌ಗಳು
ರೋಹಿತ್, ಪಂತ್ ಕಾಲೆಳೆಯೋಕೆ ಕಾರಣವಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶರ್ಮಾ ಒಟ್ಟು 346 ಪಂದ್ಯಗಳಲ್ಲಿ 423 ಸಿಕ್ಸರ್ ಬಾರಿಸಿದ್ದಾರೆ. ಅದೇ ರಿಷಭ್ ಪಂತ್, 56 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 47 ಸಿಕ್ಸ್‌ಗಳನ್ನು ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications