Rohit Sharma: ಇಂಗ್ಲೆಂಡ್ ಬೌಲರ್‌ಗಳಿಗೆ ಕನಸಿನಲ್ಲೂ ಕಾಡುವ ರೋಹಿತ್: 151.2 ಕಿ.ಮಿ. ವೇಗದ ಎಸೆತಕ್ಕೂ ಸ್ಟೈಲಿಷ್ ಟಚ್
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸ್ಥಿರವಾಗಿದೆ. ಮೈದಾನದಲ್ಲಿ ಕೆಲಕಾಲ ಟೈಮ್ ಸ್ಪೆಂಡ್ ಮಾಡಿ ದೊಡ್ಡ ಶಾಟ್‌ಗಳನ್ನು ಆಡುವ ರೋಹಿತ್ ಧರ್ಮಶಾಲಾದಲ್ಲಿ ತಮ್ಮ ನೈಜ ಆಟವನ್ನು ಆಡಿದರು. ಇವರ ಆಟವನ್ನು ಕಂಡು ಎದುರಾಳಿ ಬೌಲರ್‌ಗಳು ಕಂಗಾಲಾದರು. ರೋಹಿತ್ ಸ್ಟೈಲಿಷ್ ಶಾಟ್‌ಗೆ ಇಂಗ್ಲೆಂಡ್ ಬೆಚ್ಚಿತು.
ಕ್ರಿಕೆಟ್ ಅಂಗಳದಲ್ಲಿ ಯಾವಾಗಲು ಬೌಲರ್ ಹಾಗೂ ಬ್ಯಾಟರ್‌ಗಳ ನಡುವೆ ಒಂದು ಗುದ್ದಾಟ ನಡೆದಿರುತ್ತದೆ. ಈ ಕಾಂಪಿಟೇಷನ್‌ನಲ್ಲಿ ಯಾರು ಮೇಲುಗೈ ಸಾಧಿಸಿದರು ಎಂದು ಹೇಳಲು ಅವರ ಅಂಕಿ ಅಂಶಗಳು ಸಾಕ್ಷಿ. ಧರ್ಮಶಾಲಾ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಟೆಸ್ಟ್ ಮಾಡಿದ ಇಂಗ್ಲೆಂಡ್ ವೇಗದ ಬೌಲರ್ ಒಬ್ಬರಿಗೆ ಭರ್ಜರಿ ಏಟು ಬಿದಿದ್ದಿ. ಹಾಗಿದ್ದರೆ ನಡೆದಿದ್ದೇನು ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..

ಧರ್ಮಶಾಲಾ ಟೆಸ್ಟ್‌ನಲ್ಲಿ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್‌ನ ಮೊದಲ ದಿನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದಿನದಾಟದ ಅಂತ್ಯಕ್ಕೆ ರೋಹಿತ್ 83 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದ್ದಾರೆ.
ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ 6 ಬೌಂಡರಿ ಹಾಗೂ 2 ಅದ್ಭುತ ಸಿಕ್ಸರ್‌ಗಳು ಸಿಡಿದವು. ಈ ಸಮಯದಲ್ಲಿ, ಅವರು ಇಂಗ್ಲೆಂಡ್‌ನ ವೇಗದ ಬೌಲರ್ ಮಾರ್ಕ್ ವುಡ್ ಮೇಲೆ ಸಿಕ್ಸರ್ ಬಾರಿಸಿದರು, ಇದು ಅವರಿಗೆ ದೀರ್ಘಕಾಲ ನೆನಪಿನಲ್ಲಿ ಇರುತ್ತದೆ.
ನಡೆದಿದ್ದೇನು?
ಇಂಗ್ಲಿಷ್ ವೇಗಿ ರೋಹಿತ್ ಶರ್ಮಾ ಅವರಿಗೆ ತಮ್ಮ ವೇಗವನ್ನು ತೋರಿಸುತ್ತಿದ್ದರು. ಅದರ ಫಲಿತಾಂಶವು ಅವರಿಗೆ ಎಂದು ಮರೆಯ ಗಿಫ್ಟ್ ನೀಡಿತು. ವುಡ್ ರೋಹಿತ್ ಶರ್ಮಾಗೆ ಗಂಟೆಗೆ 151.2 ಕಿಮೀ ವೇಗದಲ್ಲಿ ಬೌನ್ಸ್ ಮಾಡಿದರು. ಈ ವೇಗವನ್ನು ಆಡುವಲ್ಲಿ ರೋಹಿತ್ ವಿಫಲರಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.

ಆದರೆ ರೋಹಿತ್ ಶರ್ಮಾ ಬೌನ್ಸರ್ ಅನ್ನು ತಪ್ಪಿಸಿಕೊಳ್ಳಲು ಹೋಗಲಿಲ್ಲ. ವುಡ್ ಅವರ ವೇಗದ ಬೌನ್ಸರ್ ಅನ್ನು ರೋಹಿತ್ ಶರ್ಮಾ ಅದ್ಭುತ ಪುಲ್ ಮೂಲಕ ಸಿಕ್ಸರ್ ಬಾರಿಸಿದರು. ಇದನ್ನು ನೋಡಿ ಇಂಗ್ಲೆಂಡ್ ಆಟಗಾರರು ಬೆಚ್ಚಿಬಿದ್ದರು. ಸಿಕ್ಸರ್ ಬಾರಿಸಿದ ನಂತರ, ವುಡ್ ತನ್ನ ತಪ್ಪಿನ ಅರಿವಾದಂತೆ ಪ್ರತಿಕ್ರಿಯಿಸಿದರು.
ಬೌನ್ಸರ್ ಎಸೆದರೆ ದಂಡ ಫಿಕ್ಸ್
ಈಗ ರೋಹಿತ್ ಶರ್ಮಾ ಪುಲ್ ಶಾಟ್‌ಗಳನ್ನು ಆಡುವುದರಲ್ಲಿ ನಿಪುಣರಾಗಿದ್ದಾರೆ ಎಂಬುದು ವಿಶ್ವದ ಯಾವುದೇ ಬೌಲರ್‌ನಿಂದ ಮರೆಯಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರ ಮುಂದೆ ಬೌನ್ಸರ್ ಎಸೆಯುವುದು ದೊಡ್ಡ ತಪ್ಪು, ಅದನ್ನು ಮಾರ್ಕ್ ವುಡ್ ಮಾಡಿದರು.
ಧರ್ಮಶಾಲಾ ಟೆಸ್ಟ್‌ನ ಮೊದಲ ದಿನವೇ ಭಾರತ ತಂಡ ಅಬ್ಬರಿಸಿತು. ಪ್ರವಾಸಿ ತಂಡ ಇಂಗ್ಲೆಂಡ್ ಭಾರತದ ಮುಂದೆ ಮಂಡಿಯೂರುವಂತೆ ಮಾಡಿದೆ. ಮೊದಲು ಭಾರತದ ಬೌಲರ್‌ಗಳು ಆಂಗ್ಲ ಬ್ಯಾಟ್ಸ್‌ಮನ್‌ಗಳಿಗೆ ಕಾಡಿದರು. ನಂತರ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ದಿನದ ಅಂತ್ಯದವರೆಗೆ ಬ್ಯಾಟ್ ನಿಂದ ಅಬ್ಬರಿಸಿದರು.
ಮೊದಲು ಬ್ಯಾಟಿಂಗ್‌ಗೆ ಬಂದ ಭಾರತವು ಇಂಗ್ಲೆಂಡ್ ಅನ್ನು 218 ರನ್‌ಗಳಿಗೆ ಆಲೌಟ್ ಮಾಡಿತು ಮತ್ತು ನಂತರ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಬೋರ್ಡ್‌ನಲ್ಲಿ 135/1 ರನ್‌ಗಳನ್ನು ಹಾಕಿತು. ಈ ಅವಧಿಯಲ್ಲಿ, ರೋಹಿತ್ ಶರ್ಮಾ ಮತ್ತು ಅವರೊಂದಿಗೆ ಶುಭಮನ್ ಗಿಲ್ ಅಜೇಯರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications