ತಮಾಷೆಯಾಗೇ ಪತ್ರಕರ್ತರ ಕಾಲೆಳೆದ ರೋಹಿತ್ ಶರ್ಮಾ: ವೈರಲ್ ವಿಡಿಯೋ!

ರಾಂಚಿ, ಅಕ್ಟೋಬರ್ 21: ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್ ಬದಲಿಗೆ ಆರಂಭಿಕರಾಗಿ ಅವಕಾಶ ಪಡೆದ ರೋಹಿತ್ ಶರ್ಮಾ, ಸಿಕ್ಕ ಅವಕಾಶವನ್ನು ಚೆನ್ನಾಗೇ ಬಳಿಸಿಕೊಂಡಿದ್ದಾರೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಈ ಟೆಸ್ಟ್ ಸರಣಿಯಲ್ಲಿ ರೋಹಿತ್, 2 ಶತಕ, 1 ದ್ವಿಶತಕ ಬಾರಿಸಿದ್ದಾರೆ.
ರೋಹಿತ್ ಶರ್ಮಾ ದ್ವಿಶತಕ (212 ರನ್), ಅಜಿಂಕ್ಯ ರಹಾನೆ ಶತಕದೊಂದಿಗೆ (115 ರನ್) ಭಾರತ 3ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟದಲ್ಲಿ 497 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು. ಅಂದ್ಹಾಗೆ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭರ್ಜರಿ ಫಾರ್ಮ್ ತೋರಿಸುತ್ತಿರುವ ಶರ್ಮಾ, ತಮಾಷೆಯಾಗಿ ಸುದ್ದಿಗಾರರ ಕಾಲೆಳೆದು ಸುದ್ದಿಯಲ್ಲಿದ್ದಾರೆ.
ಭಾನುವಾರ (ಅಕ್ಟೋಬರ್ 20) 2ನೇ ದಿನದಾಟ ಮುಕ್ತಾಯದ ಬಳಿಕ ಸಂದರ್ಶನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ದ್ವಿಶತಕ ಹೀರೋ ರೋಹಿತ್, 'ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಇಲ್ಲದಿದ್ದರೆ ನೀವೆಲ್ಲ ನನ್ನ ಟೆಸ್ಟ್ ವೃತ್ತಿ ಬದುಕಿನ ಬಗ್ಗೆ ಬೇಕಾದ್ದೆಲ್ಲ ಮಾತನಾಡುತ್ತೀರಿ, ಬರೆಯುತ್ತೀರಿ,' ಎಂದಿದ್ದಾರೆ.
ಮಾತು ಮುಂದುವರೆಸಿದ ಹಿಟ್‌ಮ್ಯಾನ್, 'ನೀವು ಯಾವಾಗಲೂ ನನ್ನ ಬಗ್ಗೆ ಬರೆಯುತ್ತಿರುತ್ತೀರಿ. ನಾನೀಗ ಉತ್ತಮ ಬ್ಯಾಟಿಂಗ್ ತೋರಿಸುವುದರಿಂದ ನೀವೀಗ ನನ್ನ ಬಗ್ಗೆ ಒಳ್ಳೆಯದನ್ನೇ ಬರೆಯಬೇಕಿದೆ,' ಎನ್ನುತ ನಗು ಚೆಲ್ಲಿದರು. ರಾಂಚಿ ಟೆಸ್ಟ್‌ನಲ್ಲಿ ಶರ್ಮಾ ತನ್ನ 6ನೇ ಟೆಸ್ಟ್ ಶತಕ ಪೂರೈಸಿಕೊಂಡಿದ್ದಾರೆ.
ಈ ಹಿಂದೆ, ವಿಶ್ವಕಪ್‌ನಲ್ಲಿ ರಿಷಬ್ ಪಂತ್ ಆಡುತ್ತಿರುವ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ್ದ ರೋಹಿತ್, 'ವಿಶ್ವಕಪ್‌ನಲ್ಲಿ ಪಂತ್ ಆಡಬೇಕೆಂದು ನೀವೇ ಹೇಳುತ್ತಿರುವುದು-ಬರೆಯುತ್ತಿರುವುದು ತಾನೆ?, ಅದಕ್ಕೆ ಆತನನ್ನು ತಂಡದಲ್ಲಿ ಸೇರಿಸಿಕೊಂಡಿದ್ದೇವೆ,' ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications