
ಮುಂಬೈ, ಮಾರ್ಚ್ 25: ಈ ವರ್ಷ ಜನವರಿ ತಿಂಗಳಲ್ಲಿ ಕ್ರಿಕೆಟಿಗ ರೋಹಿತ್ ಶರ್ಮಾ ತನ್ನ ಎಳೆಗೂಸು 'ಸಮೈರಾ'ಳ ಮೊದಲ ಚಿತ್ರವನ್ನು ವಿಶ್ವಕ್ಕೆ ನೀಡಿದ್ದರು. ಕ್ರಿಕೆಟ್ ಜೀವನದ ತನ್ನ ಬ್ಯೂಸಿ ಶೆಡ್ಯೂಲ್ ನಡುವೆ ಮುದ್ದು ಮಗಳ ಜೊತೆ ಒಂದಿಷ್ಟು ಸಮಯ ಕಳೆದರೆ ಅದನ್ನು ರೋಹಿತ್ ಅಭಿಮಾನಿಗಳ ಮುಂದೆ ತರುತ್ತಿದ್ದಾರೆ. ಈ ಬಾರಿ ರೋಹಿತ್, ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿರುವ ಈ ವಿಡಿಯೋ ಇನ್ನೂ ಮುದ್ದಾಗಿದೆ.
31ರ ಹರೆಯದ ರೋಹಿತ್ ತನ್ನ 3 ತಿಂಗಳ ಪುತ್ರಿ ಸಮೈರಾಳನ್ನು ಹಿಡಿದು, ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಹಿಟ್ ಮೂವಿ 'ಗಲ್ಲಿ ಬಾಯ್' ಸಾಂಗ್ ಹಾಡಿದ್ದ ವಿಡಿಯೋವನ್ನು ಟ್ವಿಟರ್ ಖಾತೆಗೆ ಹಾಕಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಹರಿದಾಡಿತ್ತು.
ರೋಹಿತ್ ಪ್ರಕಟಿಸಿದ ಈ ವಿಡಿಯೋ ಸುಮಾರು 3,000ಕ್ಕೂ ಹೆಚ್ಚು ಪ್ರತಿಕ್ರಿಯೆಗಳು, 12,000ಕ್ಕೂ ಹೆಚ್ಚು ರಿ-ಟ್ವೀಟ್ ಮತ್ತು 1,30,000 ಲೈಕ್ಸ್‌ಗಳಿಗೆ ಪಾತ್ರವಾಗಿತ್ತು. ಈ ಟ್ವಿಟರ್ ವಿಡಿಯೋಗೆ ಬಾಲಿವುಡ್ ದಂತಕತೆ ಅಮಿತಾಭ್ ಬಚ್ಚನ್ 'ಟೂ ಕ್ಯೂಟ್' ಎಂದು ಪ್ರತಿಕ್ರಿಯಿಸಿದ್ದಾರೆ.