Boxing Day Test: "ಯಶಸ್ವಿ ಗಲ್ಲಿ ಕ್ರಿಕೆಟ್ ಆಡುತ್ತಿದ್ದೀಯಾ" ಮೈದಾನದಲ್ಲಿ ನಾಯಕ ಕ್ಲಾಸ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯ ಮೊದಲ ದಿನ ಆಸ್ಟ್ರೇಲಿಯಾ ದಿನದ ಗೌರವವನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯ ಹಲವು ಇಂಟ್ರಸ್ಟಿಂಗ್ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ. ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಯುವ ಬ್ಯಾಟರ್ ಸ್ಯಾಮ್ ಕನಾಸ್ಟಾನ್ಸ್ ನಡುವೆ ಮಾತಿನ ಚಕಮಕಿ ಎಲ್ಲರ ಗಮನ ಸೆಳೆದಿತ್ತು. ಇದೇ ವೇಳೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಯುವ ಆಟಗಾರನಿಗೆ ಮೈದಾನದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಆಸ್ಟ್ರೇಲಿಯಾ ತಂಡದ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಟೀಮ್ ಇಂಡಿಯಾ ಬೌಲರ್‌ಗಳು ಭಿನ್ನ ವಿಭಿನ್ನ ರಣ ತಂತ್ರವನ್ನು ರೂಪಿಸಿಕೊಂಡಿತ್ತು. ಆದರೆ ಹಲವು ಉತ್ತಮ ಜೊತೆಯಾಟಗಳು ರೋಹಿತ್ ಪಡೆಯ ಚಿಂತೆಯನ್ನು ದ್ವಿಗುಣ ಗೊಳಿಸಿತು. ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ಗಳು ಸಹ ಮೊದಲ ದಿನ 26 ಓವರ್ ಬೌಲಿಂಗ್ ನಡೆಸಿದರು. ಇದೇ ವೇಳೆ ಹಲವು ಇಂಟ್ರಸ್ಟಿಂಗ್ ಫೀಲ್ಡ್ ಸೆಟ್ಟಿಂಗ್ ಸಹ ಕಂಡು ಬಂದವು.

ಆಗಿದ್ದೇನು?
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಕೆಟ್ ಪಡೆಯಲು ಭಿನ್ನ ವಿಭಿನ್ನ ತಂತ್ರಗಳನ್ನು ಉಪಯೋಗಿಸಿದರು. ಈ ವೇಳೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಸಿಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು.
ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಸ್ಟಂಪ್ ಮೈಕ್‌ನಲ್ಲಿ ಸೆರೆಹಿಡಿದ ವಿಷಯಗಳಿಗಾಗಿ ಸುದ್ದಿಯಲ್ಲಿದ್ದಾರೆ. ಇದೀಗ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಇದೇ ರೀತಿಯ ಘಟನೆಯ ವಿಡಿಯೋವೊಂದು ಹೊರಬಿದ್ದಿದ್ದು, ರೋಹಿತ್ ಯಶಸ್ವಿ ಜೈಸ್ವಾಲ್‌ಗೆ 'ಗಲ್ಲಿ ಕ್ರಿಕೆಟ್' ಆಡಲು ಬಂದಿಲ್ಲ ಎಂದು ಹೇಳುತ್ತಿರುವುದು ಕಂಡುಬಂದಿದೆ. ಆಸ್ಟ್ರೇಲಿಯ ತಂಡವು ದೊಡ್ಡ ಜೊತೆಯಾಟದತ್ತ ಸಾಗುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ವಿಕೆಟ್ ಪಡೆಯುವ ಸಲುವಾಗಿ ನಿರಂತರವಾಗಿ ಫೀಲ್ಡಿಂಗ್ ಬದಲಾಯಿಸುತ್ತಿದ್ದರು.
ಗಲ್ಲಿ ಕ್ರಿಕೆಟ್ ಆಡುತ್ತಿದ್ದೀಯಾ?
ಇದೇ ವೇಳೆ ಯಶಸ್ವಿ ಜೈಸ್ವಾಲ್ ರಕ್ಷಣೆಗಾಗಿ ಹೆಲ್ಮೆಟ್ ಕೂಡ ಧರಿಸಿದ್ದರು. ಏತನ್ಮಧ್ಯೆ, ರವೀಂದ್ರ ಜಡೇಜಾ ಬೌಲಿಂಗ್ ಮಾಡಿದರು. ಅವರ ಒಂದು ಎಸೆತವನ್ನು ಸ್ಟೀವ್ ಸ್ಮಿತ್ ಡಿಫೆಂಡ್ ಮಾಡಿದರು. ಮತ್ತು ಮತ್ತೊಮ್ಮೆ ಮಿಡ್ ಆಫ್ ನತ್ತ ಚೆಂಡನ್ನು ತಳ್ಳಿದರು. ಈ ವೇಳೆ ಜೈಸ್ವಾಲ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಜಿಗಿದರು. ಇದನ್ನು ಕಂಡು ರೋಹಿತ್ ಶರ್ಮಾ ಕೋಪಗೊಂಡು ಅವರಿಗೆ ಅಲ್ಲಿಗೆ ತರಾಟೆಗೆ ತೆಗೆದುಕೊಂಡರು.
"ಏಯ್ ಜಸ್ಸು, ನೀವು ಗಲ್ಲಿ ಕ್ರಿಕೆಟ್ ಆಡುತ್ತಿದ್ದೀರಾ? ಸುಮ್ಮನೆ ಕುಳಿತುಕೊಳ್ಳಿ, ಚೆಂಡು ಬರುವವರೆಗೂ ಎದ್ದೇಳಬೇಡಿ" ಎಂದು ಹೇಳಿದರು ." ರೋಹಿತ್ ಸ್ಲಿಪ್‌ನಲ್ಲಿ ನಿಂತು ಈ ಮಾತುಗಳನ್ನು ಹೇಳುತ್ತಿದ್ದಂತೆ ವಿಕೆಟ್‌ಕೀಪರ್ ರಿಷಬ್ ಪಂತ್‌ಗೆ ನಗು ತಡೆಯಲಾಗಲಿಲ್ಲ.
ಪಂದ್ಯದ ಸರಾಂಶ
ಟೀಮ್ ಇಂಡಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಈ ವೇಳೆ ದಿನದಾಟದಂತ್ಯಕ್ಕೆ 6 ವಿಕೆಟ್‌ಗೆ 311 ರನ್ ಸೇರಿಸಿದೆ. ಭರವಸೆಯ ಬ್ಯಾಟರ್ ಸ್ಟೀವನ್ ಸ್ಮಿತ್ ಅಜೇಯ 68, ಪ್ಯಾಟ್ ಕಮಿನ್ಸ್ ಅಜೇಯ 8 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications