For Quick Alerts
ALLOW NOTIFICATIONS  
For Daily Alerts
 

IND vs NZ Test: ರೋಹಿತ್ ಶರ್ಮಾ ಅಂದು ಕೊಂಡಿದ್ದೇ ಒಂದು, ಆಗಿದ್ದೇ ಇನ್ನೊಂದು

ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್‌ ನಡುವಣ ಮೊದಲ ಟೆಸ್ಟ್‌ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಲು ಮುಂದಾದರು. ಈ ನಿರ್ಧಾರ ತಪ್ಪು ಎಂದು ಸಾಬೀತಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಹಾಗಿದ್ದರೆ ರೋಹಿತ್ ಶರ್ಮಾ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್‌ ನಡೆಯುತ್ತಿದೆ. ಈ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ 46 ರನ್‌ಗಳಿಗೆ ಆಲೌಟ್ ಆಯಿತು. ಬ್ಯಾಟಿಂಗ್‌ಗೆ ಪಿಚ್‌ ಅನುಕೂಲಕರ ಇರಲಿಲ್ಲವಾ ಎಂಬ ಪ್ರಶ್ನೆಗಳು ಮೂಡುತ್ತಿವೆ. ರೋಹಿತ್ ಶರ್ಮಾ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ನಿರ್ಧಾರ ತಪ್ಪಾ ಎಂಬ ಚರ್ಚೆ ಆರಂಭವಾಗಿದೆ.

Rohit Sharma s Toss Decision Backfires as India Crumbles for 46 Against New Zealand

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ್ದು ತಪ್ಪಾ?

ರೋಹಿತ್ ಶರ್ಮಾ ಮೊದಲ ಟೆಸ್ಟ್‌ನಲ್ಲಿ ಟಾಸ್‌ ಗೆಲ್ಲುತ್ತಿದ್ದಂತೆ ಬ್ಯಾಟಿಂಗ್ ಮಾಡಿದರು. ಇದು ಸರಿಯಾದ ನಿರ್ಧರಾವೇ ಎಂಬ ಪ್ರಶ್ನೆಗಳು ಎದ್ದಿವೆ. ಆದರೆ ವಾತಾವರಣವನ್ನು ಲೆಕ್ಕ ಹಾಕಿ ರೋಹಿತ್‌ ತೆಗೆದುಕೊಂಡಿದ್ದ ನಿರ್ಧಾರ ಸರಿಯಾಗಿತ್ತು. ಅಂದಹಾಗೆ ಮೊದಲ ದಿನದಾಟಕ್ಕೆ ಮಳೆ ಅಡ್ಡಿ ಪಡಿಸಿತ್ತು. ಎರಡನೇ ದಿನದಾಟ ಆರಂಭವಾದಗ ಮಳೆ ವಿಶ್ರಾಂತಿ ನೀಡಿತ್ತು. ಇದರಿಂದ ಪಿಚ್‌ ಒದ್ದೆಯಾಗಿರುತ್ತದೆ. ಈ ಪಿಚ್‌ ಮೇಲೆ ಒಂದು ಗಂಟೆ ಕಾಲ ಸಮಯವನ್ನು ಕಳೆದರೆ ಬ್ಯಾಟಿಂಗ್ ಫ್ರೆಂಡ್ಲಿ ಆಗಬಹುದು ಎಂಬ ಲೆಕ್ಕಾಚಾರ ರೋಹಿತ್ ಅವರದ್ದಾಗಿತ್ತು. ಆದರೆ ಇದಕ್ಕೆ ಸೂರ್ಯ ಅವಕಾಶವನ್ನೇ ನೀಡಲಿಲ್ಲ. ಪರಿಣಾಮ ಭಾರತದ ನಿರ್ಧಾರ ತಪ್ಪಾಗಿ ಕಾಣಿಸಿಕೊಂಡಿತು.

ಪಿಚ್‌ ರೀಡ್‌ ಮಾಡಲಿಲ್ವಾ ರೋಹಿತ್‌?

ರೋಹಿತ್‌ ಶರ್ಮಾ ಪಿಚ್‌ ಕರೆಕ್ಟ್‌ ಆಗಿ ರೀಡ್ ಮಾಡಲಿಲ್ವಾ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಅವರು ಅಂದುಕೊಂಡಂತೆ ಮೊದಲ ದಿನದಾಟ ನಡೆಯಲಿಲ್ಲ ಎಂಬ ಬೇಸರ ನಿಜಕ್ಕೂ ಅವರಿಗೆ ಸೇರಿದಂತೆ ಅಭಿಮಾನಿಗಳಿ ಇದ್ದೇ ಇದೆ. ಆದರೆ ಇದಕ್ಕೆ ಕಾರಣವೂ ಇದೆ. ಕಿವೀಸ್‌ ತಂಡ ಮೊದಲ ಟೆಸ್ಟ್‌ ಪಂದ್ಯಕ್ಕೆ ಮೂವರು ವೇಗಿಗಳಿಗೆ ಅವಕಾಶ ನೀಡಿತು. ಆದರೆ ಟೀಮ್ ಇಂಡಿಯಾ ಮೂವರು ಸ್ಪಿನ್ ಬೌಲರ್‌ ಗಳಿಗೆ ಅವಕಾಶ ನೀಡಿತು.

ರೋಹಿತ್ ಶರ್ಮಾ ಈ ನಿರ್ಣಯ ತಪ್ಪಾ ಎಂಬ ಚರ್ಚೆಗಳು ಆರಂಭವಾಗಿವೆ. ವಾಸ್ತವವಾಗಿ ರೋಹಿತ್‌ ಟೆಸ್ಟ್‌ನ ಎರಡನೇ ಇನಿಂಗ್ಸ್‌ ತಲೆಯಲ್ಲಿ ಇಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ರೋಹಿತ್ ನಿರ್ಧಾರ ಸರಿಯಾಗಿಯೇ ಇತ್ತು.

ನ್ಯೂಜಿಲೆಂಡ್ ಸಹ ಟಾಸ್‌ ಗೆದ್ದಿದ್ದರೆ ಪರಿಸ್ಥಿತಿಯ ಲಾಭ ಪಡೆಯಲು ಮೊದಲು ಬ್ಯಾಟಿಂಗ್ ಮಾಡುವುದಾಗಿ ತಿಳಿಸಿತ್ತು. ಆದರೆ ಈಗ ಅವರು ಟಾಸ್‌ ಸೋತಿರುವುದೇ ಅವರಿಗೆ ಹೆಚ್ಚು ಲಾಭ ತಂದು ಕೊಟ್ಟಂತೆ ಕಾಣುತ್ತಿದೆ. ಟೀಮ್ ಇಂಡಿಯಾದ ಸ್ಟಾರ್‌ ಆಟಗಾರರು ನೆಲಕ್ಕೂರಿ ಬ್ಯಾಟ್ ಮಾಡುವಲ್ಲಿ ವಿಫಲರಾಗಿ ವಿಕೆಟ್‌ಗಳನ್ನು ನೀಡಿದರು.

ಬಾರದ ಜೊತೆಯಾಟ

ಭಾರತ ತಂಡದ ಪರ ಜೊತೆಯಾಟಗಳು ಬಾರದೆ ಇರುವುದು ತಂಡದ ಕಳಪೆ ಪ್ರದರ್ಶನಕ್ಕೆ ಕಾರಣವಾಯಿತು. ನಾಲ್ಕನೇ ವಿಕೆಟ್‌ಗೆ ರಿಷಭ್‌ ಪಂತ್‌ ಹಾಗೂ ಯಶಸ್ವಿ ಜೈಸ್ವಾಲ್‌ 68 ಎಸೆತಗಳಲ್ಲಿ 21 ರನ್‌ ಸೇರಿಸಿದ್ದೇ ದೊಡ್ಡ ಜೊತೆಯಾಟವಾಗಿದೆ. ಇನ್ನು ಟೀಮ್ ಇಂಡಿಯಾ ಪರ ಪ್ಲೇಯರ್‌ ಒಬ್ಬ ಎದುರಿಸಿದ ಗರಿಷ್ಠ ಎಸೆತ 63. ಟೀಮ್ ಇಂಡಿಯಾದ ಪರ ಈ ಪಂದ್ಯದಲ್ಲಿ ಕೇವಲ ನಾಲ್ಕು ಬೌಂಡರಿಗಳು ದಾಖಲಾಗಿವೆ.

Story first published: Thursday, October 17, 2024, 15:22 [IST]
Other articles published on Oct 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+