For Quick Alerts
ALLOW NOTIFICATIONS  
For Daily Alerts
 

Rohit Sharma: ವಿಶ್ವ ಕ್ರಿಕೆಟ್‌ನಲ್ಲಿ ಯಾವ ನಾಯಕ ಮಾಡದ ದಾಖಲೆ ನಿರ್ಮಿಸಲಿರುವ ರೋಹಿತ್ ಶರ್ಮಾ

ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ ಪಂದ್ಯ ನಡೆಯಲಿದೆ. ಈ ಪಂದ್ಯ ಹೈ ವೋಲ್ಟೇಜ್‌ನಿಂದ ಕೂಡಿರಲಿದ್ದು, ಎಲ್ಲರ ಚಿತ್ತ ಕದ್ದಿದೆ. ಫೈನಲ್‌ ಪಂದ್ಯದ ಟಿಕೇಟ್‌ಗಳು ಕೆಲವೇ ಘಂಟೆಗಳಲ್ಲಿ ಬಿಕರಿ ಆಗಿವೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕಪ್‌ ಗೆಲ್ಲುವ ನೆಚ್ಚಿನ ತಂಡ. ಈ ವೇಳೆ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ನಾಯಕ ರೋಹಿತ್ ಶರ್ಮಾ ಅಖಾಡಕ್ಕೆ ಇಳಿಯುತ್ತಿದ್ದಂತೆ ದಾಖಲೆಯ ಪುಟದಲ್ಲಿ ತಮ್ಮ ಹೆಸರನ್ನು ನಮೂದಿಸಲಿದ್ದಾರೆ.

ರೋಹಿತ್‌ ಶರ್ಮಾ ಸದ್ಯ ಹೇಳಿಕೊಳ್ಳುವಂತಹ ಫಾರ್ಮ್‌ನಲ್ಲಿ ಇಲ್ಲ. ಈ ವೇಳೆ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೈದಾನಕ್ಕೆ ಬ್ಲ್ಯೂ ಜೆರ್ಸಿ ಹಾಕಿಕೊಂಡು, ಮಿಚೆಲ್‌ ಸ್ಯಾಂಟ್ನರ್‌ ಜೊತೆಗೆ ಟಾಸ್‌ಗೆ ಇಳಿಯುತ್ತಿದ್ದಂತೆ ಹೊಸ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿಕೊಳ್ಳಲಿದ್ದಾರೆ. ಅಂದಹಾಗೆ ಈ ದಾಖಲೆಯನ್ನು ಈ ಮೊದಲು ವಿಶ್ವ ಕ್ರಿಕೆಟ್‌ನಲ್ಲಿ ಯಾರು ಮಾಡಿಲ್ಲ. ಈ ನೂತನ ದಾಖಲೆಗೆ ಮುಂಬೈಕಾ ರಾಜಾ ತಮ್ಮ ಹೆಸರನ್ನು ನಮೂದಿಸಿಕೊಳ್ಳಲಿದ್ದಾರೆ. ಹಾಗಿದ್ದರೆ ಆ ದಾಖಲೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

Rohit Sharma Set to Create History as India Faces New Zealand in Champions Trophy Final

ರೋಹಿತ್‌ ಶರ್ಮಾ ಐಸಿಸಿ ಆಯೋಜಿತ ನಾಲ್ಕು ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೊದಲು ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ಎರಡು ಬಾರಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. 2023ರಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್‌ ಚಾಂಪಿಯನ್ಸ್‌ ಶಿಪ್‌ನಲ್ಲಿ ನಿರಾಸೆ ಅನುಭವಿಸಿತ್ತು. ಇದಕ್ಕೂ ಮೊದಲು 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು. ಆಗ ಭಾರತದ ನಾಯಕ ವಿರಾಟ್ ಕೊಹ್ಲಿ ಆಗಿದ್ದರು.

ರೋಹಿತ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡುತ್ತಿದೆ. 2023ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಅಜೇಯ ಓಟವನ್ನು ನಡೆಸಿ ಫೈನಲ್‌ಗೆ ಪ್ರವೇಶವನ್ನು ಪಡೆದಿತ್ತು. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಿರಾಸೆ ಅನುಭವಿಸಿತ್ತು. ಆದರೆ 2024 ರಲ್ಲಿ ಭಾರತ ವೆಸ್ಟ್‌ ಇಂಡೀಸ್ ಹಾಗೂ ಯುಎಇನಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್‌ಗೆ ಅರ್ಹತೆ ಪಡೆದಿತ್ತು. ಅಲ್ಲದೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈಗ ಮತ್ತೊಂದು ಐಸಿಸಿ ಟೂರ್ನಿಯನ್ನು ಆಡುವ ಸದಾವಕಾಶ ಭಾರತದ ಪಾಲಾಗಲಿದೆ.

ಧೋನಿ ಮಾಡಿರದ ಸಾಧನೆ ಮಾಡಲಿರುವ ರೋಹಿತ್‌

ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ಗಳು ನಡೆಯುತ್ತಿರಲಿಲ್ಲ. ಹೀಗಾಗಿ ಈ ಸಾಧನೆಯನ್ನು ಮಾಡಲು ಮಾಹಿ ಅವರಿಗೆ ಸಾಧ್ಯವಾಗಿರಲಿಲ್ಲ. ರೋಹಿತ್‌ ಶರ್ಮಾ ತಮ್ಮ ಮುಂದಾಳತ್ವದಲ್ಲಿ ಐಸಿಸಿ ಪ್ರಾಯೋಜಿತ ಎಲ್ಲ ಟೂರ್ನಿಗಳಲ್ಲಿ ತಂಡವನ್ನು ಫೈನಲ್‌ಗೆ ಕೊಂಡೊಯ್ದು ನಿಲ್ಲಿಸಿದ್ದಾರೆ. ಅದೇ ಸಮಯದಲ್ಲಿ, ಕೇನ್ ವಿಲಿಯಮ್ಸನ್ 2019 ರ ಏಕದಿನ ವಿಶ್ವಕಪ್, 2021 ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್ ಮತ್ತು 2021 ರ T20 ವಿಶ್ವಕಪ್ ಫೈನಲ್‌ಗಳಲ್ಲಿ ಆಡಿದ ನ್ಯೂಜಿಲೆಂಡ್ ತಂಡದ ನಾಯಕರಾಗಿದ್ದರು. ಆದರೆ ಇವರ ಮುಂದಾಳತ್ವದಲ್ಲಿ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಆಡಿರಲಿಲ್ಲ.

Rohit Sharma Set to Create History as India Faces New Zealand in Champions Trophy Final

ಭಾನುವಾರ ರೋಹಿತ್‌ಗೆ ಎಂಎಸ್ ಧೋನಿ ದಾಖಲೆಯನ್ನು ಸರಿಗಟ್ಟುವ ಅವಕಾಶ ಇದೆ. ಅವರು ಏಕದಿನ ಮತ್ತು ಟಿ20 ಎರಡೂ ಸ್ವರೂಪಗಳಲ್ಲಿ ಐಸಿಸಿ ಪ್ರಶಸ್ತಿಗಳನ್ನು ಗೆದ್ದ ವಿಶ್ವದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಬಹುದು. ಇದಕ್ಕೂ ಮೊದಲು ಧೋನಿ ಮಾತ್ರ ಈ ಸಾಧನೆ ಮಾಡಿದ್ದರು.

ಮಾಹಿ 2007ರಲ್ಲಿ ಟಿ20 ವಿಶ್ವಕಪ್‌, 2011 ಏಕದಿನ ವಿಶ್ವಕಪ್‌, 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಹಿರಿಮೆ ಹೊಂದಿದ್ದಾರೆ.

Story first published: Sunday, March 9, 2025, 8:12 [IST]
Other articles published on Mar 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+