For Quick Alerts
ALLOW NOTIFICATIONS  
For Daily Alerts
 

Rohit Sharma: ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ನಂತರ ರೋಹಿತ್ ಹೊಸ ಮೈಲಿಗಲ್ಲು

ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯ ಭಾರತ ಮತ್ತು ಬಾಂಗ್ಲಾದೇಶ ನಡುವೆ ದುಬೈನಲ್ಲಿ ನಡೆಯುತ್ತಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು 36 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 41 ರನ್ ಗಳಿಸಿದರು. ಈ ವೇಳೆ ರೋಹಿತ್ ಶರ್ಮಾ ದಾಖಲೆ ಸೃಷ್ಟಿಸಿದ್ದಾರೆ.

ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಂತರ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟರ್ ಎಂಬ ಹೆಗ್ಗಳಿಕೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ರೋಹಿತ್ ಬ್ಯಾಟಿಂಗ್ ಮಾಡುವಾಗ 13 ರನ್‌ಗಳನ್ನು ಗಳಿಸಿದ ತಕ್ಷಣ ಏಕದಿನ ಕ್ರಿಕೆಟ್‌ನಲ್ಲಿ 11000 ರನ್‌ಗಳ ಗಡಿಯನ್ನು ತಲುಪಿದ್ದಾರೆ. ಇದರೊಂದಿಗೆ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ.

Rohit Sharma sets new record by completing 11 000 runs in ODI cricket

ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 11000 ರನ್‌ಗಳನ್ನು ಪೂರೈಸಿದ ನಾಲ್ಕನೇ ಭಾರತ ಮತ್ತು ಒಟ್ಟಾರೆಯಾಗಿ 10ನೇ ಆಟಗಾರರಾಗಿದ್ದಾರೆ. ಅವರು ವಿರಾಟ್ ಕೊಹ್ಲಿ ಬಳಿಕ ಈ ಮೈಲಿಗಲ್ಲು ತಲುಪಿದ ಎರಡನೇ ಅತ್ಯಂತ ವೇಗದ ಬ್ಯಾಟರ್ ಎಂಬ ದಾಖಲೆಯನ್ನು ಮಾಡಿದ್ದಾರೆ.

ಬಾಂಗ್ಲಾದೇಶ ತಂಡದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಎಸೆದ 4ನೇ ಓವರ್‌ನಲ್ಲಿ ರೋಹಿತ್ ಶರ್ಮಾ ಮಿಡ್-ಆನ್‌ನಲ್ಲಿ ಬೌಂಡರಿ ಬಾರಿಸಿದರು. ಈ ಬೌಂಡಿರ ಮೂಲಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 11000 ರನ್‌ಗಳನ್ನು ಕಲೆ ಹಾಕಿದರು. ಈ ಸಾಧನೆಯೊಂದಿಗೆ ಟೀಮ್ ಇಂಡಿಯಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ಅವರ ಕ್ಲಬ್ ಸೇರಿದರು.

ರೋಹಿತ್ 261 ಏಕದಿನ ಇನ್ನಿಂಗ್ಸ್‌ಗಳಲ್ಲಿ 11000 ರನ್‌ಗಳನ್ನು ಗಳಿಸಿದ್ದಾರೆ. ಮಾಂಚೆಸ್ಟರ್‌ನಲ್ಲಿ ವಿರಾಟ್ ಕೊಹ್ಲಿ 2019ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಈ ದಾಖಲೆ ಮಾಡಿ ಆಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಕೇವಲ 222 ಇನ್ನಿಂಗ್ಸ್‌ಗಳಲ್ಲಿ 11000 ರನ್‌ಗಳ ಗಡಿ ದಾಟಿದ್ದರು.

ವೇಗವಾಗಿ 11 ಸಾವಿರ ರನ್‌ಗಳಿಸಿದವರು

ವಿರಾಟ್ ಕೊಹ್ಲಿ (ಭಾರತ) - 222 ಇನ್ನಿಂಗ್ಸ್‌ಗಳು

ರೋಹಿತ್ ಶರ್ಮಾ (ಭಾರತ)- 261 ಇನ್ನಿಂಗ್ಸ್‌ಗಳು

ಸಚಿನ್ ತೆಂಡೂಲ್ಕರ್ (ಭಾರತ)- 276 ಇನ್ನಿಂಗ್ಸ್‌ಗಳು

ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)- 286 ಇನ್ನಿಂಗ್ಸ್‌ಗಳು

ಸೌರವ್ ಗಂಗೂಲಿ (ಭಾರತ)- 288 ಇನ್ನಿಂಗ್ಸ್‌ಗಳು

ಕೊಹ್ಲಿ ಹಿಂದಿಕ್ಕಿದ ರೋಹಿತ್

ರೋಹಿತ್ ಶರ್ಮಾ ಮೂರನೇ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಆಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು 2013 ಮತ್ತು 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿ ಹಿಂದಿಕ್ಕಿದ್ದಾರೆ. ರೋಹಿತ್ ಶರ್ಮಾ ಅತಿ ಹೆಚ್ಚು ಸೀಮಿತ ಓವರ್‌ಗಳ ಐಸಿಸಿ ಟೂರ್ನಿಗಳನ್ನು ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದಲ್ಲಿ 15 ಐಸಿಸಿ ಸೀಮಿತ ಓವರ್‌ಗಳ ಟೂರ್ನಿಗಳನ್ನು ಆಡಿದ್ದಾರೆ. ಇವುಗಳಲ್ಲಿ 3 ಐಸಿಸಿ ಏಕದಿನ ವಿಶ್ವಕಪ್‌ಗಳು, 3 ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು 9 ಐಸಿಸಿ ಟಿ20 ವಿಶ್ವಕಪ್‌ಗಳು ಸೇರಿವೆ.

ಅತಿ ಹೆಚ್ಚು ಐಸಿಸಿ ಟೂರ್ನಿಗಳನ್ನು ಆಡಿದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ 3 ಏಕದಿನ ವಿಶ್ವಕಪ್, 3 ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು 9 ಟಿ20 ವಿಶ್ವಕಪ್‌ಗಳನ್ನು ಆಡಿದ್ದಾರೆ. ಜೊತೆಗೆ 2 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳನ್ನು ಆಡಿದ್ದಾರೆ. ಈ ಮೂಲಕ ಅವರು ಒಟ್ಟು 17 ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ 16 ಐಸಿಸಿ ಟೂರ್ನಿಗಳನ್ನು ಆಡಿದ್ದು,ಎರಡನೇ ಸ್ಥಾನದಲ್ಲಿದ್ದಾರೆ.

ಹೆಚ್ಚು ಐಸಿಸಿ ಟೂರ್ನಿ ಆಡಿದ ಆಟಗಾರರು

ರೋಹಿತ್ ಶರ್ಮಾ*- 15 ಟೂರ್ನಿಗಳು
ವಿರಾಟ್ ಕೊಹ್ಲಿ*- 14 ಟೂರ್ನಿಗಳು
ಎಂಎಸ್ ಧೋನಿ- 14 ಟೂರ್ನಿಗಳು
ಯುವರಾಜ್ ಸಿಂಗ್- 14 ಟೂರ್ನಿಗಳು

Story first published: Thursday, February 20, 2025, 20:52 [IST]
Other articles published on Feb 20, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+