For Quick Alerts
ALLOW NOTIFICATIONS  
For Daily Alerts
 

Rohit Sharma: ಎಲೈಟ್‌ ಕ್ಲಬ್‌ಗೆ ಎಂಟ್ರಿ ಪಡೆದ ಹಿಟ್‌ಮ್ಯಾನ್‌

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಲಯಕ್ಕೆ ಮರಳಿದ್ದಾರೆ. ಹೈದರಾಬಾದ್‌ನಲ್ಲಿ ರೋಹಿತ್ ಶರ್ಮಾ ಕ್ಲಾಸಿಕ್‌ ಇನಿಂಗ್ಸ್‌ ಕಟ್ಟಿದ್ದಾರೆ. ಮುತ್ತಿನ ನಗರಿಯಲ್ಲಿ ಮುತ್ತಿನಂತಹ ಇನಿಂಗ್ಸ್ ಕಟ್ಟಿದ ರೋಹಿತ್ ಶರ್ಮಾ ಅಬ್ಬರಿಸಿದರು. ಈ ಮೂಲಕ ಸತತ ಎರಡನೇ ಐಪಿಎಲ್‌ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ 2016ರ ಬಳಿಕ ರೋಹಿತ್ ಶರ್ಮಾ ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಬಾರಿಸಿ ಮಿಂಚಿದರು.

ಬುಧವಾರ ನಡೆದ 18ನೇ ಆವೃತ್ತಿಯ ಐಪಿಎಲ್‌ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಟಾಪ್‌ ಆರ್ಡರ್ ಬ್ಯಾಟರ್‌ಗಳು ಬೇಗನೆ ವಿಕೆಟ್ ಒಪ್ಪಿಸಿದರೂ, ಹ್ಯಾನ್ರಿಕ್‌ ಕ್ಲಾಸೇನ್ (71 ರನ್) ಹಾಗೂ ಕನ್ನಡಿಗ ಅಭಿನವ್ ಮನೋಹರ್ (43 ರನ್‌) ಸಿಡಿಸಿದ ಬಲದಿಂದ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 143 ರನ್‌ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌ ಇನ್ನು 26 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್‌ ಕಳೆದುಕೊಂಡು 146 ರನ್‌ ಸಿಡಿಸಿ ಅಬ್ಬರಿಸಿತು. ಈ ಮೂಲಕ ಮುಂಬೈ ಸತತ ನಾಲ್ಕನೇ ಗೆಲುವಿನ ನಗೆ ಬೀರಿದೆ.

Rohit Sharma Shines with Classic Half-Century Crosses 12 000 T20 Runs in Style

ಗುರಿಯನ್ನು ಬೆನ್ನಟ್ಟಿದ ರೋಹಿತ್‌ ಶರ್ಮಾ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಈ ಪಂದ್ಯದಲ್ಲಿ 46 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಾಯದಿಂದ 70 ರನ್‌ ಸಿಡಿಸಿ ಔಟ್ ಆದರು. ಹೈದರಾಬಾದ್‌ನಲ್ಲಿ ಹಳೆಯ ಖದರ್‌ನಲ್ಲಿ ಬ್ಯಾಟ್ ಮಾಡಿದ ರೋಹಿತ್‌ ಅಬ್ಬರಿಸಿದರು. ಹೈದರಾಬಾದ್‌ ತಂಡದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ರೋಹಿತ್ ಶರ್ಮಾ, ಹಲವು ದಾಖಲೆಗಳನ್ನು ಬರೆದರು.

12 ಸಾವಿರ ರನ್ ಸಾಧನೆ

ಈ ಅರ್ಧಶತಕದ ಬಲದಿಂದ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 12 ಸಾವಿರ ರನ್‌ಗಳನ್ನು ದಾಟಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಈ ಸಾಧನೆಯನ್ನು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ ಮಾಡಿದ್ದರು. ಇವರು 407 ಇನಿಂಗ್ಸ್‌ಗಳಲ್ಲಿ 13208 ರನ್‌ ಸಿಡಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ರೋಹಿತ್ ಶರ್ಮಾ 456 ಇನಿಂಗ್ಸ್‌ಗಳಲ್ಲಿ 12013 ರನ್‌ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Rohit Sharma Shines with Classic Half-Century Crosses 12 000 T20 Runs in Style

ವಿಶ್ವ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ಯುನಿವರ್ಸಲ್‌ ಬಾಸ್ ಖ್ಯಾತಿಯ ಕ್ರಿಸ್‌ ಗೇಲ್‌ಗೆ ಸಲ್ಲುತ್ತದೆ. ಇವರು 463 ಪಂದ್ಯಗಳಲ್ಲಿ 14562 ರನ್‌ ಸಿಡಿಸಿದ್ದಾರೆ.

ವಿಶ್ವ ಟಿ20 ಕ್ರಿಕೆಟ್‌ನಲ್ಲಿ 12 ಸಾವಿರ ರನ್‌ ಪೂರೈಸಿದ ಬ್ಯಾಟರ್ಸ್‌

ಕ್ರಿಸ್ ಗೇಲ್ - 14562 ರನ್‌ಗಳು
ಅಲೆಕ್ಸ್ ಹೇಲ್ಸ್ - 13610 ರನ್‌
ಶೋಯಬ್ ಮಲಿಕ್ - 13571 ರನ್‌
ಕೀರನ್ ಪೊಲಾರ್ಡ್ - 13537 ರನ್‌
ವಿರಾಟ್ ಕೊಹ್ಲಿ - 13208 ರನ್‌
ಡೇವಿಡ್ ವಾರ್ನರ್ - 13019 ರನ್‌
ಜೋಸ್ ಬಟ್ಲರ್ - 12469 ರನ್‌
ರೋಹಿತ್ ಶರ್ಮಾ - 12013 ರನ್‌

Story first published: Thursday, April 24, 2025, 6:14 [IST]
Other articles published on Apr 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+